Download Our App

Follow us

Home » ಸಿನಿಮಾ » ಪೀಪಲ್‌ ಮೀಡಿಯಾ ಫ್ಯಾಕ್ಟರಿ ನಿರ್ಮಾಣದ ‘ಗರಿವಿಡಿ ಲಕ್ಷ್ಮೀ’ ಚಿತ್ರದ ಫಸ್ಟ್​ ಸಾಂಗ್​ ರಿಲೀಸ್​!

ಪೀಪಲ್‌ ಮೀಡಿಯಾ ಫ್ಯಾಕ್ಟರಿ ನಿರ್ಮಾಣದ ‘ಗರಿವಿಡಿ ಲಕ್ಷ್ಮೀ’ ಚಿತ್ರದ ಫಸ್ಟ್​ ಸಾಂಗ್​ ರಿಲೀಸ್​!

ತೆಲುಗಿನ ಖ್ಯಾತ ನಟಿ ಆನಂದಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ “ಗರಿವಿಡಿ ಲಕ್ಷ್ಮೀ” ಸಿನಿಮಾ ಇದೀಗ ಹೊಸ ಅಪ್‌ಡೇಟ್‌ ಜತೆಗೆ ಆಗಮಿಸಿದೆ. ಖ್ಯಾತ ಚಿತ್ರನಿರ್ಮಾಣ ಸಂಸ್ಥೆ ಪೀಪಲ್ ಮೀಡಿಯಾ ಫ್ಯಾಕ್ಟರಿ “ಗರಿವಿಡಿ ಲಕ್ಷ್ಮೀ” ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಇದೀಗ ಇದೇ ಚಿತ್ರದ ಉತ್ತರ ಆಂಧ್ರ ಭಾಷಾ ಸೊಗಡಿನ “ನಳ ಜಿಲಕರ ಮೊಗ್ಗ” ಹಾಡು ಬಿಡುಗಡೆ ಆಗಿದೆ. ಗೌರಿ ನಾಯ್ಡು ಜಮ್ಮು ಎಂಬ ನಿರ್ದೇಶಕರು ಈ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

ಟಿಜಿ ವಿಶ್ವ ಪ್ರಸಾದ್‌ ಮತ್ತು ಟಿಜಿ ಕೃತಿ ಪ್ರಸಾದ್‌ ಜಂಟಿಯಾಗಿ ಪೀಪಲ್‌ ಮೀಡಿಯಾ ಫ್ಯಾಕ್ಟರಿ ಬ್ಯಾನರ್‌ ಅಡಿಯಲ್ಲಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಚರಣ್ ಅರ್ಜುನ್ ಸಂಗೀತ ಸಂಯೋಜಿಸುತ್ತಿದ್ದಾರೆ. ಈ ಹಾಡನ್ನು ಕನ್ನಡದ ಜನಪ್ರಿಯ ಗಾಯಕಿ ಅನನ್ಯ ಭಟ್ ಹಾಡಿದ್ದಾರೆ. ಸದ್ಯ ಬಿಡುಗಡೆ ಆಗಿರುವ ಹಾಡಿಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದ್ದು, ಚಿತ್ರದ ಚಿತ್ರೀಕರಣ ಆಂಧ್ರಪ್ರದೇಶದ ಅಡೋನಿಯಲ್ಲಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ.

ಇದೀಗ 1990 ಕಾಲಘಟ್ಟ ಜಾನಪದ ಶೈಲಿಯ ಹಾಡಿನ ಮೂಲಕ ಕೇಳುಗರನ್ನು ಆಕರ್ಷಿಸಿರುವ ಗರಿವಿಡಿ ಲಕ್ಷ್ಮೀ ಸಿನಿಮಾದಲ್ಲಿ, ಉತ್ತರ ಆಂಧ್ರ ಭಾಗದ ಸಂಸ್ಖೃತಿ, ಆಚಾರ ವಿಚಾರದ ಜತೆಗೆ ಬುರ್ರ ಕಥಾ ಕಲಾವಿದರನ್ನೂ ಈ ಹಾಡಿನಲ್ಲಿ ಬಳಸಿಕೊಳ್ಳಲಾಗಿದೆ. ಚರಣ್ ಅರ್ಜುನ್ ಅವರ ಸಂಗೀತದೊಂದಿಗೆ, ಉತ್ತರ ಆಂಧ್ರದ ಸಾರ, ಅಲ್ಲಿನ ದೃಶ್ಯ ಮತ್ತು ಧ್ವನಿಯ ಮೂಲಕ ಕೇಳುಗರ ಕಿವಿಗೆ ಇಂಪಾಗಿಸಿದ್ದಾರೆ.

ಟಿ.ಜಿ. ವಿಶ್ವ ಪ್ರಸಾದ್, ಟಿ.ಜಿ. ಕೃತಿ ಪ್ರಸಾದ್ ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಗೌರಿ ನಾಯ್ಡು ಜಮ್ಮು ಈ ಚಿತ್ರದ ನಿರ್ದೇಶಕರು. ಇನ್ನು ಗರಿವಿಡಿ ಲಕ್ಷ್ಮೀ ಚಿತ್ರದಲ್ಲಿ ಹಿರಿಯ ನಟ ನರೇಶ್, ರಾಸಿ, ಆನಂದಿ, ರಾಗ್ ಮಯೂರ್, ಶರಣ್ಯ ಪ್ರದೀಪ್, ಅಂಕಿತ್ ಕೊಯ್ಯ, ಮೀಸಲ ಲಕ್ಷ್ಮಣ್, ಕಂಚರಪಾಲೆಂ ಕಿಶೋರ್, ಶರಣ್ಯ ಪ್ರದೀಪ್, ಕುಶಾಲಿನಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವಿವೇಕ್ ಕೂಚಿಬೋಟ್ಲ ಸಹ ನಿರ್ಮಾಪಕರಾದರೆ, ಜೆ. ಆದಿತ್ಯ ಅವರ ಛಾಯಾಗ್ರಹಣ, ಚರಣ್ ಅರ್ಜುನ್ ಸಂಗೀತ ನೀಡುತ್ತಿದ್ದಾರೆ.

ಇದನ್ನೂ ಓದಿ : 15 ದಿನದೊಳಗೆ ಬೆಳಗಾವಿ ಅಭಿನೇತ್ರಿಗೆ ಕ್ಷಮೆ ಕೇಳಬೇಕು – ಬಿಜೆಪಿ MLC ಸಿ.ಟಿ ರವಿಗೆ ಬೆದರಿಕೆ ಪತ್ರ!

 

 

Leave a Comment

DG Ad

RELATED LATEST NEWS

Top Headlines

ರೋಮ್ಯಾನ್ಸ್ ಸೀನ್​ ಶೂಟಿಂಗ್ ಮಾಡುವಾಗ ಕಂಟ್ರೋಲ್ ತಪ್ಪಿದ್ರಾ ವರುಣ್ ಧವನ್ ? – ನಟಿ ಜೊತೆಗಿನ ಹಾಟ್​ ವಿಡಿಯೋ ಲೀಕ್​!

ಮುಂಬೈ : ಬಾಲಿವುಡ್​ನಲ್ಲಿ ಯಂಗ್ ಹೀರೋ ಆಗಿ ಗುರುತಿಸಿಕೊಂಡಿರುವ ನಟ ವರುಣ್ ಧವನ್ ಸಿನಿಮಾದ ರೋಮ್ಯಾನ್ಸ್ ಸೀನ್​ ಶೂಟಿಂಗ್ ವೇಳೆ ಕಂಟ್ರೋಲ್ ತಪ್ಪಿದ್ರಾ ಎಂಬ ಚರ್ಚೆಗಳು ಶುರುವಾಗಿವೆ. ನಟ

Live Cricket

Add Your Heading Text Here