ಚಿಕ್ಕಬಳ್ಳಾಪುರ : ಗುಂಡಿನ ದಾಳಿಯಿಂದ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮತ್ತೊಬ್ಬ ವ್ಯಕ್ತಿಯೂ ಸಾವನ್ನಪ್ಪಿದ ಘಟನೆ ನಡೆದಿದೆ. ಮೆಹಬೂಬ್ ಸಾಬ್ ಮೃತಪಟ್ಟ ವ್ಯಕ್ತಿ.
ಮೃತರ ಸಂಬಂಧಿ ಬಷೀರ್ ಅಹ್ಮದ್ ಭೂ ವಿವಾದ ,ಕೌಟುಂಬಿಕ ಕಲಹದಿಂದ ಗುಡಿಬಂಡೆ ತಾಲ್ಲೂಕಿನ ಹಂಪಸಂದ್ರ ಗ್ರಾಮದಲ್ಲಿ ಇಬ್ಬರ ಮೇಲೆ ಗುಂಡಿನ ದಾಳಿ ನಡಿಸಿದ್ದನು. ಬಷೀರ್ ಅಹ್ಮದ್ ಗುಂಡಿನ ದಾಳಿ ವೇಳೆ ಮಚ್ಚಿನಿಂದ ಹಲ್ಲೆ ಮಾಡಿದ್ದನು.
ಇನ್ನು ಘಟನೆಯ ಪರಿಣಾಮ ನಜೀರ್ ಸಾಬ್ ಮೃತಪಟ್ಟು, ಮೆಹಬೂಬ್ ಸಾಬ್ನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗುಂಡಿನ ದಾಳಿಯಲ್ಲಿ ಗಂಭೀರ ಗಾಯಗೊಂಡಿದ್ದ ಮೆಹಬೂಬ್ ಸಾಬ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಘನೆಯ ಬಗ್ಗೆ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಲಾಗಿತ್ತು.
ಇದನ್ನೂ ಓದಿ : ದಾಸರಹಳ್ಳಿಗೆ ರಿಲೀಸ್ ಆದ ಹಣ ನಿಮ್ಮ ಕ್ಷೇತ್ರಕ್ಕೆ ಹಾಕಿಕೊಳ್ಳಲಿಲ್ವಾ? – ಆರ್.ಅಶೋಕ್ ವಿರುದ್ಧ ಮಾಜಿ ಶಾಸಕ ಮಂಜುನಾಥ್ ಕಿಡಿ..!
Post Views: 117