Download Our App

Follow us

Home » ರಾಜಕೀಯ » ಪ್ರಚೋದನಕಾರಿ ಭಾಷಣ – ಶಾಸಕ ​​ಯತ್ನಾಳ್ ಹಾಗೂ ಟಿ.ರಾಜಾಸಿಂಗ್ ವಿರುದ್ದ FIR ದಾಖಲು..!

ಪ್ರಚೋದನಕಾರಿ ಭಾಷಣ – ಶಾಸಕ ​​ಯತ್ನಾಳ್ ಹಾಗೂ ಟಿ.ರಾಜಾಸಿಂಗ್ ವಿರುದ್ದ FIR ದಾಖಲು..!

ವಿಜಯಪುರ : ಪ್ರಚೋದನಕಾರಿ ಭಾಷಣ ಮಾಡಿರುವ ಹಿನ್ನೆಲೆ ಇಬ್ಬರು ಶಾಸಕರ ಮೇಲೆ FIR ದಾಖಲಾಗಿದೆ. ಮಾರ್ಚ್ 4ರಂದು ವಿಜಯಪುರ ನಗರದ ಶಿವಾಜಿ ಸರ್ಕಲ್‌‌ನಲ್ಲಿ ನಡೆದಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ವೇಳೆ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್ ಹಾಗೂ ತೆಲಂಗಾಣದ ಗೋಶಾಮಹಾಲ ಶಾಸಕ ಟಿ. ರಾಜಾಸಿಂಗ್ ಅವರು ಪ್ರಚೋದನಕಾರಿ ಭಾಷಣ ಮಾಡಿದ್ದರು.

ಶಿವಾಜಿ ಸರ್ಕಲ್‌‌ನಲ್ಲಿ ನಡೆದಿದ್ದ ಈ ಕಾರ್ಯಕ್ರಮದಲ್ಲಿ ‘ಅಬ್ ಗಲಿ ಗಲಿ ಮೇ ಅಫ್ಜಲ್​​​ ​​​ಖಾನ್, ಔರಂಗಜೇಬ್​​ ಹೈ.. ಅಬ್ ಗಲಿಗಲಿ ಮೇ ಶಿವಾಜಿ ಮಹಾರಾಜ್​ ಬನಾನ ಹೈ. ಅಗರ್ ಮೇರಾ ಹಾತ್ ಮೇ ಹೋಂ ಮಿನಿಸ್ಟರ್ ರಹಾತೋ, ಗುಸ್​ಕೆ ಎನ್​ಕೌಂಟರ್​​ ಕರ್ತೇತೆ, ಎಂದು ರಾಜಾ ಸಿಂಗ್​​ ಮತ್ತು ಯತ್ನಾಳ್ ಅವರು ಪ್ರಚೋದನಕಾರಿ ಹೇಳಿಕೆಯನ್ನು ಕಾರ್ಯಕ್ರಮದಲ್ಲಿ ನೀಡಿದ್ದರು. 

ಈ ಹಿನ್ನೆಲೆ ಇದೀಗ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್​​​ ಹಾಗೂ ಶಾಸಕ ಟಿ. ರಾಜಾಸಿಂಗ್ ವಿರುದ್ಧ ಕಲಂ: 153, 506, 504, 505(2) IPC ಅಡಿಯಲ್ಲಿ ಕೇಸ್ ದಾಖಲಾಗಿದೆ.

ಇದನ್ನೂ ಓದಿ : ಕಾಲೇಜು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ಕೇಸ್ – ಆರೋಪಿ ಬಗ್ಗೆ ಸಿಸಿಟಿವಿಯಲ್ಲಿ ಮಹತ್ವದ ಸಾಕ್ಷ್ಯ ಬಯಲು..!

Btv Kannada1
Author: Btv Kannada1

Leave a Comment

RELATED LATEST NEWS

Top Headlines

ಬೈಕ್ ಸವಾರನ ಶವವನ್ನು 18 ಕಿ.ಮೀ​ ಎಳೆದೊಯ್ದು ಪರಾರಿಯಾದ ಕಾರು ಚಾಲಕ..!

ಕಾರು ಚಾಲಕನೊಬ್ಬ ಬೈಕ್​ಗೆ ಡಿಕ್ಕಿ ಹೊಡೆದು ಸವಾರನನ್ನು ಬರೋಬ್ಬರಿ 18 ಕಿಲೋ. ಮೀಟರ್​ ದೂರಕ್ಕೆ ಎಳೆದೊಯ್ದು ಪರಾರಿಯಾಗಿರುವ ಘಟನೆ ಅನಂತಪುರದಲ್ಲಿ ನಡೆದಿದೆ. ಈ ಘಟನೆ ಭಾನುವಾರ ರಾತ್ರಿ

Live Cricket

Add Your Heading Text Here