ಬೆಂಗಳೂರು: ಸೋಶಿಯಲ್ ಮೀಡಿಯಾದ ಮೂಲಕ ಫೇಮಸ್ ಆಗಿದ್ದ ವರ್ಷಾ ಕಾವೇರಿ ಮತ್ತು ವರುಣ್ ಆರಾಧ್ಯ ಕಳೆದ ವರ್ಷ ಇಬ್ಬರು ಬ್ರೇಕಪ್ ಬಗ್ಗೆ ಅಧಿಕೃತವಾಗಿ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದರು. ಆದರೆ ಇದೀಗ ಸೀರಿಯಲ್ ನಟ, ರೀಲ್ಸ್ ಸ್ಟಾರ್ ವರುಣ್ ಆರಾಧ್ಯ ತನ್ನ ಮಾಜಿ ಪ್ರೇಯಸಿಗೆ ಕೊಲೆ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ.
ಬಸವೇಶ್ವರನಗರ ಸೆನ್ ಪೊಲೀಸ್ ಠಾಣೆಯಲ್ಲಿ ಸದ್ಯ ವರುಣ್ ಆರಾಧ್ಯ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬೃಂದಾವನ ಸೀರಿಯಲ್ನಲ್ಲಿ ನಟಿಸುತ್ತಿದ್ದ ವರುಣ್ ಆರಾಧ್ಯ ಅವರು ಸೀರಿಯಲ್ಗೆ ಎಂಟ್ರಿ ಕೊಡುವ ಮುನ್ನ ಅವರ ಬ್ರೇಕಪ್ ಆಗಿತ್ತು.
ಆದರೆ ಇದೀಗ ವರುಣ್ ಆರಾಧ್ಯ ವರ್ಷಾ ಕಾವೇರಿಯ ಖಾಸಗಿ ವಿಡಿಯೋ, ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಬಸವೇಶ್ವರನಗರ ಸೆನ್ ಠಾಣೆಗೆ ದೂರು ನೀಡಿರುವ ವರ್ಷಾ ಕಾವೇರಿ, ನನ್ನ ಖಾಸಗಿ ಫೋಟೋ, ವಿಡಿಯೋ ಇಟ್ಟುಕೊಂಡು ಆಟ ಆಡ್ತಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡೋದಾಗಿ ಬೆದರಿಸ್ತಿದ್ದಾನೆ. ಅಷ್ಟೇ ಅಲ್ಲದೇ ಬೇರಯವರನ್ನ ಮದುವೆಯಾದ್ರೆ ಅವನನ್ನ ಸಾಯುಸಿ ನಿನ್ನನ್ನು ಸಾಯಿಸುತ್ತೇನೆಂದು ವರುಣ್ ಆರಾಧ್ಯ ಬೆದರಿಕೆ ಹಾಕಿದ್ದಾಗಿ ವರ್ಷಾ ದೂರಿನಲ್ಲಿ ತಿಳಿಸಿದ್ದಾರೆ.
ವರುಣ್ ಆರಾಧ್ಯ ರೀಲ್ಸ್ ನಟಿಗೆ ಫೋಟೋ ಕಳಿಸಿ ಅಪ್ಲೋಡ್ ಮಾಡ್ತೀನಿ ಎಂದು ಬೆದರಿಕೆ ಹಾಕಿದ್ದರ ಬಗ್ಗೆ ದೂರಿನಲ್ಲಿ ತಿಳಿಸಲಾಗಿದೆ. ಅಷ್ಟೇ ಅಲ್ಲದೇ ಈ ಬಗ್ಗೆ ಪ್ರಶ್ನಿಸಿದಾಗ ವರ್ಷಾ ಕಾವೇರಿಗೆ ಅವಾಚ್ಯವಾಗಿ ನಿಂದಿಸಿದಲ್ಲದೇ ಅಂಗಾಂಗಳ ಬಗ್ಗೆ ಅಶ್ಲೀಲವಾಗಿ ಮಾತನಾಡಿದ್ನಂತೆ. ಇವೆಲ್ಲಾ ವಿಚಾರವನ್ನು ಮಾಜಿ ಪ್ರೇಯಸಿ ವರ್ಷಾ ಕಾವೇರಿ ಕಂಪ್ಲೇಟ್ನಲ್ಲಿ ತಿಳಿಸಿದ್ದಾರೆ. ಇನ್ನು ವರ್ಷಾ ಕಾವೇರಿ ದೂರಿನ ಮೇರೆಗೆ ವರುಣ್ ಆರಾಧ್ಯ ವಿರುದ್ಧ CrPC 157,BNS 176, IPC 504,506 ಹಾಗೂ IT ಆ್ಯಕ್ಟ್ 66(e), 67 ಅಡಿ FIR ದಾಖಲಾಗಿದೆ.
ಇದನ್ನೂ ಓದಿ : ರಾಜ್ಯ ಬಿಜೆಪಿ ನಾಯಕರ ಬಂಡಾಯ ಶಮನಕ್ಕೆ RSS ಎಂಟ್ರಿ – ನಾಳೆ ಮಹತ್ವದ ಸಭೆ..!