Download Our App

Follow us

Home » ಸಿನಿಮಾ » ಮುತ್ತುರಾಜ್ ನಿರ್ದೇಶನದ ‘ಲಿಪ್ ಲಾಕ್’ ಚಿತ್ರಕ್ಕೆ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಚಾಲನೆ..!

ಮುತ್ತುರಾಜ್ ನಿರ್ದೇಶನದ ‘ಲಿಪ್ ಲಾಕ್’ ಚಿತ್ರಕ್ಕೆ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಚಾಲನೆ..!

“ಯಂಗ್ ಮ್ಯಾನ್” ಚಿತ್ರದ ನಿರ್ದೇಶಕ ಮುತ್ತುರಾಜ್ ನಿರ್ದೇಶನದ ಮುಂದಿನ ಚಿತ್ರ “ಲಿಪ್ ಲಾಕ್”. ಇತ್ತೀಚೆಗೆ ಈ ನೂತನ ಚಿತ್ರದ ಮುಹೂರ್ತ ಸಮಾರಂಭ ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ನಿರ್ಮಾಪಕರ ಸಹೋದರಿ ಸ್ಪೂರ್ತಿ ಕೃಷ್ಣಮೂರ್ತಿ ಆರಂಭ ಫಲಕ ತೋರಿದರು. ನಿರ್ದೇಶಕರ ಪುತ್ರ ಲಿಖಿತ್ ಗೌಡ ಕ್ಯಾಮೆರಾ ಚಾಲನೆ ಮಾಡಿದರು. ಸಾಕಷ್ಟು ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಎಲ್ಲರೂ ಅಂದುಕೊಂಡಿರುವ “ಲಿಪ್ ಲಾಕ್” ಬೇರೆ, ಆದರೆ “ಲಿಪ್ ಲಾಕ್” ನಿಜವಾದ ಅರ್ಥ ಬೇರೆ ಎಂದು ತಿಳಿಸುವ ನಿರ್ದೇಶಕ ಮುತ್ತುರಾಜ್, ಇದೊಂದು ಪರಿಶುದ್ಧ ಪ್ರೇಮಕಥೆ. ಯಾವುದೇ ಮುಜುಗರವಿಲ್ಲದೆ ಕುಟುಂಬ ಸಮೇತ ಬಂದು ಎಲ್ಲರೂ ನೋಡಬಹುದಾದ ಕೌಟುಂಬಿಕ ಕಥೆಯೂ ಹೌದು. ಬೆಂಗಳೂರಿನಲ್ಲೇ ಚಿತ್ರೀಕರಣ ನಡೆಯುತ್ತದೆ‌. ಕರಣ್ ಆರ್ಯನ್, ತ್ರಿವಿಕ್ರಮ್ ಹಾಗೂ ಚಿತ್ರದ ನಿರ್ಮಾಪಕರೂ ಆಗಿರುವ ಹೇಮಂತ್ ಕುಮಾರ್ ಈ ಚಿತ್ರದ ನಾಯಕರಾಗಿದ್ದು, ನಾಯಕಿಯರಾಗಿ ದೀಪ, ಜಗದೀಶ್, ಸೃಷ್ಟಿ , ನಿಹಾರಿಕಾ ನಟಿಸುತ್ತಿದ್ದಾರೆ. ಜಗಪ್ಪ, ಆನಂದ್, ಕರಿಬಸವ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಲೋಕಿ ತವಸ್ಯ ಸಂಗೀತ ನಿರ್ದೇಶನ, ವೀನಸ್ ನಾಗರಾಜ್ ಮೂರ್ತಿ ಛಾಯಾಗ್ರಹಣ ಹಾಗೂ ಸತೀಶ್ ಚಂದ್ರಯ್ಯ ಅವರ ಸಂಕಲನ ಈ ಚಿತ್ರಕ್ಕಿದೆ‌ ಎಂದರು.

ನಿರ್ಮಾಪಕನಾಗಿ ಇದು ಮೊದಲ ಚಿತ್ರ. ಹೇಮಂತ್ ಸಿನಿಮಾಸ್ ಹಾಗೂ ಪರಿ ಮೂವೀ ಮೇಕರ್ಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ನಿರ್ಮಾಣದ ಜೊತೆಗೆ ಪ್ರಮುಖಪಾತ್ರದಲ್ಲೂ ನಟಿಸುತ್ತಿದ್ದೇನೆ ಎಂದು ಹೇಮಂತ್ ಕೃಷ್ಣಮೂರ್ತಿ ಹೇಳಿದರು. ನಂತರ ನಟ ಕರಣ್ ಆರ್ಯನ್ ಅವರು, ನಿರ್ದೇಶಕರು ಮಾಡಿಕೊಂಡಿರುವ ಕಥೆ ಚೆನ್ನಾಗಿದೆ. ನನ್ನದು ಈ ಚಿತ್ರದಲ್ಲಿ ಕೆಳ ಮಧ್ಯಮ ವರ್ಗದ ಹುಡುಗನ ಪಾತ್ರ‌ ಎಂದರು.

ನನ್ನ ಪಾತ್ರ ಕೂಡ ವಿಭಿನ್ನವಾಗಿದೆ. “ಬ್ಯಾಡ್ ಮ್ಯಾನರ್ಸ್” ಚಿತ್ರದ ನಂತರ ಈ ಚಿತ್ರದಲ್ಲಿ ನಟಿಸುತ್ತಿದ್ದೇನೆ ಎಂದರು”ಪದ್ಮಾವತಿ ” ಧಾರಾವಾಹಿ ಖ್ಯಾತಿಯ ತ್ರಿವಿಕ್ರಮ್. ಹಾಗೆಯೇ ನಟಿಯರಾದ ದೀಪ ಜಗದೀಶ್ , ಸೃಷ್ಟಿ ಹಗೂ ನಿಹಾರಿಕಾ ಕೂಡ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.

ಇದನ್ನೂ ಓದಿ : ಯಶವಂತಪುರದಲ್ಲಿ ಹಣದ ಜೊತೆ ಈರುಳ್ಳಿ ಕದ್ದ ಖತರ್ನಾಕ್ ಕಳ್ಳ – ಖದೀಮನ ಕೈಚಳಕ ಸಿಸಿಟಿವಿಯಲ್ಲಿ ಸೆರೆ..!

Leave a Comment

DG Ad

RELATED LATEST NEWS

Top Headlines

4 ಅಂತಸ್ತಿನ ಕಟ್ಟಡ ಕುಸಿತ – ಕೂದಲೆಳೆ ಅಂತರದಲ್ಲಿ ಪಾರಾದ ತಾಯಿ, ಮಗು..!

ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ತಾಯಿ ಮಗು ಪ್ರಾಣಾಪಾಯದಿಂದ ಪಾರಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಆಘಾತಕಾರಿ ಘಟನೆಯ ಸಂಪೂರ್ಣ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೀಡಿಯೊದಲ್ಲಿ

Live Cricket

Add Your Heading Text Here