ಬಿಗ್ಬಾಸ್ ಸೀಸನ್ 11 ಮೂರನೇ ವಾರಕ್ಕೆ ಕಾಲಿಟ್ಟಿದ್ದು, ಈ ವಾರದ ನಾಮಿನೇಷನ್ ವಿಚಾರಕ್ಕೆ ಬಿಗ್ಬಾಸ್ ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ಮತ್ತೆ ಜಗಳ ಶುರುವಾಗಿದೆ. ಇದೀಗ ರಿಲೀಸ್ ಆದ ಹೊಸ ಪ್ರೋಮೋದಲ್ಲಿ ಕ್ಯಾಪ್ಟನ್ ಶಿಶಿರ್ ಅನುಷಾ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ. ಅದಕ್ಕಾಗಿ ಅನುಷಾ ನಮಗೆ ಅವರ ತರ ಬಕೆಟ್ ಹಿಡಿಯೋದಕ್ಕೆ ಬರಲ್ಲ, ನಾವು ಇರೋದೇ ಹಿಂಗೆ ಅಂತ ಹೇಳಿದ್ದಾರೆ.
ಬಳಿಕ ಮಗುವನ್ನು ಚಿವುಟಿ ತೊಟ್ಟಿಲು ತೂಗುವ ಕೆಲಸ ಮಾಡ್ತಾ ಇದ್ದಾರೆ ಇಲ್ಲಿ. ನೇರವಾಗಿ ಐಶ್ವರ್ಯಾಗೆ ಬಕೆಟ್ ಹಿಡಿಯೋದನ್ನು ಬಿಡ್ರಿ ಎಂದು ಅನುಷಾ ಐಶ್ವರ್ಯಾಗೆ ಮಾತಿನಲ್ಲೇ ಟಾಂಗ್ ನೀಡಿದ್ದಾರೆ. ಅದಕ್ಕೆ ಸಿಡಿದೆದ್ದ ಐಶ್ವರ್ಯಾ ನನಗೆ ಬಕೆಟ್ ಹಿಡಿಯೋ ಅವಶ್ಯಕತೆನೆ ಇಲ್ಲ, ಎಲ್ಲಾ ಕೇಳಿಸ್ಕೊಂಡು ಸುಮ್ನೇ ಕುಳಿತುಕೊಳ್ಳುವುದಕ್ಕೆ ನಾನಿಲ್ಲಿಗೆ ಬಂದಿಲ್ಲ ಎಂದು ಕೋಪ ಮಾಡಿಕೊಂಡು ಅಲ್ಲಿಂದ ಹೊರಟು ಹೋಗಿದ್ದಾರೆ.
ಸದ್ಯ ಬಿಗ್ಬಾಸ್ ಮನೆಯಲ್ಲಿ ಒಟ್ಟು 16 ಮಂದಿ ಉಳಿದುಕೊಂಡಿದ್ದಾರೆ. ಮುಂದಿನ ವಾರ ಯಾವ ಸ್ಪರ್ಧಿ ಬಿಗ್ಬಾಸ್ ಮನೆಯಿಂದ ಆಚೆ ಬರಬಹುದು ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ : ಚಿಕ್ಕಬಳ್ಳಾಪುರ : KSRTC ಬಸ್ಗೆ ಟಿಪ್ಪರ್ ಲಾರಿ ಡಿಕ್ಕಿ – ಮಹಿಳೆಗೆ ಗಂಭೀರ ಗಾಯ..!