Download Our App

Follow us

Home » ರಾಷ್ಟ್ರೀಯ » ಮಗಳನ್ನೇ ಮದುವೆಯಾಗುವ ತಂದೆ.. ಇದೇನಿದು ವಿಚಿತ್ರ ಸಂಪ್ರದಾಯ..!

ಮಗಳನ್ನೇ ಮದುವೆಯಾಗುವ ತಂದೆ.. ಇದೇನಿದು ವಿಚಿತ್ರ ಸಂಪ್ರದಾಯ..!

ಇಂದಿಗೂ, ವಿಚಿತ್ರ ಸಂಪ್ರದಾಯಗಳು ಪ್ರಪಂಚದ ಕೆಲವು ಭಾಗಗಳಲ್ಲಿ ಕಂಡುಬರುತ್ತವೆ. ಅದರಲ್ಲೂ ಕೆಲವೊಂದು ಬುಡಕಟ್ಟು ಜನಾಂಗದ ವಿಚಿತ್ರ ಆಚರಣೆಗಳು ನಮ್ಮಲ್ಲಿ ಅಚ್ಚರಿಯನ್ನು ಮೂಡಿಸುತ್ತದೆ. ಈ ಪೈಕಿ ತಂದೆಯೇ ಮಗಳನ್ನು ಮದುವೆಯಾಗುವ ವಿಚಿತ್ರ ಸಂಪ್ರದಾಯ ಕೂಡಾ ಒಂದು.

ಹೌದು ವರದಿಗಳ ಪ್ರಕಾರ, ಈ ವಿಚಿತ್ರ ಸಂಪ್ರದಾಯ ಬಾಂಗ್ಲಾದೇಶದ ʼಮಂಡಿ ಬುಡಕಟ್ಟುʼ ಸಮುದಾಯದಲ್ಲಿ ರೂಢಿಯಲ್ಲಿದೆ. ಇಲ್ಲಿ ತಂದೆಯೇ ಮಗಳನ್ನು ಮದುವೆಯಾಗುತ್ತಾನಂತೆ.ಈ ಬುಡಕಟ್ಟು ಜನಾಂಗದಲ್ಲಿ ಹುಟ್ಟುವ ಹೆಣ್ಣು ತನ್ನ ಮಲತಂದೆಯನ್ನೇ ಮದುವೆಯಾಗಬೇಕು ಎಂಬ ಅನಿಷ್ಟ ಪದ್ಧತಿ ಆಚರಣೆ ಇಂದಿಗೂ ಚಾಲ್ತಿಯಲ್ಲಿದೆ.

ಅಂದರೆ ಒಂದು ವೇಳೆ ಈ ಬುಡಕಟ್ಟು ಜನಾಂಗದ ಮಹಿಳೆಯ ಗಂಡ ತೀರಿ ಹೋದರೆ ಆಕೆಗೆ ಇನ್ನೊಂದು ಮದುವೆಯಾಗುವ ಅವಕಾಶವಿದೆ. ಜೊತೆಗೆ ಆಕೆಯನ್ನು ಯಾರು ಎರಡನೇ ಮದುವೆಯಾಗುತ್ತಾನೋ ಆತ, ಆಕೆಗೆ ಮೊದಲ ಪತಿಯಿಂದ ಹುಟ್ಟಿರುವ ಹೆಣ್ಣು ಮಗಳನ್ನು ಕೂಡಾ ಮದುವೆಯಾಗಬೇಕು.

ಇವರ ಆಚರಣೆಯ ಪ್ರಕಾರ, ಚಿಕ್ಕ ವಯಸ್ಸಿನಲ್ಲಿಯೇ ಮಹಿಳೆ ವಿಧವೆಯಾದರೆ, ಆಕೆಯ ಮಗಳು ಕೂಡಾ ವಿಧವೆಯಾಗುತ್ತಾಳೆ. ಆಗ ತಾಯಿ ಎರಡನೇ ಮದುವೆಯಾದರೆ, ಮಗಳು ಸಹ ತನ್ನ ಮಲತಂದೆಯನ್ನು ಗಂಡನೆಂದು ಸ್ವೀಕರಿಸಬೇಕಂತೆ. ಮತ್ತು ಆಕೆ ಆತನಿಂದಲೇ ಮಕ್ಕಳನ್ನು ಪಡೆಯಬೇಕಂತೆ. ತಾಯಿ ಮತ್ತು ಮಗಳ ಭವಿಷ್ಯವನ್ನು ಸುರಕ್ಷಿತವಾಗಿರಿಸಲು ಈ ಸಂಪ್ರದಾಯವನ್ನು ಇಲ್ಲಿನ ಜನ ಪಾಲಿಸುತ್ತಾರಂತೆ.

ಇದನ್ನೂ ಓದಿ :  ವಾಪಸ್ ಕೊಟ್ಟ ಸೈಟ್ ರದ್ದು ಮಾಡಿದ್ದೇ ತಪ್ಪು – ಹೆಚ್​.ಡಿ ಕುಮಾರಸ್ವಾಮಿ..!

 

 

 

Leave a Comment

DG Ad

RELATED LATEST NEWS

Top Headlines

BBK11: ‘ನಿಮ್ಮ ರೀತಿಯ ಫೂಟೇಜ್ ನನಗೆ ಬೇಡ’ – ಮೋಕ್ಷಿತಾ ಖಡಕ್​ ಮಾತಿಗೆ ಜಗದೀಶ್ ಪುಲ್​ ಸೈಲೆಂಟ್..!

ಬಿಗ್‌ ಬಾಸ್‌ ಮನೆ ಈಗ ರಣರಂಗವಾಗಿದ್ದು, ಎರಡನೇ ವಾರಕ್ಕೆ ಕಾಲಿಟ್ಟಿದೆ. 16 ಸ್ಪರ್ಧಿಗಳ ಮಧ್ಯೆ ಒಂಟಿ ಮನೆಯಲ್ಲಿ ಆಟ ಮುಂದುವರಿದಿದೆ. ಮೊದಲ ವಾರ ಯಮುನಾ ಶ್ರೀನಿಧಿ ಎಲಿಮಿನೇಟ್

Live Cricket

Add Your Heading Text Here