ಪುಣೆ : ಭೀಕರ ದುರಂತವೊಂದರಲ್ಲಿ 10 ಮಂದಿ ಡ್ಯಾಂ ನೀರಿನಲ್ಲಿ ಕೊಚ್ಚಿಹೋದ ಘಟನೆ ಪುಣೆಯ ಭೂಷಿ ಡ್ಯಾಂನ ಲೋನಾವಾಲದಲ್ಲಿ ನಡೆದಿದೆ. 10 ಮಂದಿಯಲ್ಲಿ ಐವರು ಇನ್ನೂ ನಾಪತ್ತೆಯಾಗಿದ್ದು, ಐವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ನಿನ್ನೆ ಮಧ್ಯಾಹ್ನ 12:30 ರ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಜಲಪಾತದಂತೆ ಧುಮುಕುತ್ತಿದ್ದ ನೀರಿನಲ್ಲಿ 10ಮಂದಿ ಆಟವಾಡ್ತಿದ್ದ ವೇಳೆ ಒಂದೇ ಸಲ ಭಾರೀ ಪ್ರಮಾಣದ ನೀರು ನುಗ್ಗಿ ಬಂದಿದೆ. ಇದ್ರಿಂದಾಗಿ 10ಕ್ಕೂ ಹೆಚ್ಚು ಮಂದಿ ನಡುನೀರಲ್ಲಿ ಸಿಲುಕಿದ್ದರು. ಇಬ್ಬರು ಮಕ್ಕಳು ಸೇರಿದಂತೆ ಐವರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಇವರೆಲ್ಲರೂ ಒಂದೇ ಕುಟುಂಬದವರಾಗಿದ್ದು, ಪುಣೆ ನಗರದ ಸಯ್ಯದ್ ನಗರದಿಂದ ಫಾಲ್ಸ್ ನೋಡಲು ಹೋಗಿದ್ದರು.
ಡ್ಯಾಂ ಸುತ್ತಮುತ್ತಲ ಪ್ರದೇಶದಲ್ಲಿ ಭಾರೀ ಮಳೆಯಾಗ್ತಿದ್ದು, ಹೀಗಾಗಿ ದಿಢೀರನೆ ಮಳೆ ನೀರು ಹರಿದುಬಂದು ಈ ಅನಾಹುತ ನಡೆದಿದೆ. ಪೊಲೀಸರು 36 ವರ್ಷದ ಶಶಿಷ್ಟಾ, 13 ವರ್ಷದ ಅಮಿಮ್ ಅನ್ಸಾರಿ, 8 ವರ್ಷದ ಉಮೇರಾ ಅದಿಲ್ ಶವ ಪತ್ತೆ ಮಾಡಿದ್ದಾರೆ. ಇನ್ನು 4 ವರ್ಷದ ಅದ್ನಾನ್ ಅನ್ಸಾರಿ, 9 ವರ್ಷದ ಮಾರಿಯಾ ಅನ್ಸಾರಿ ನಾಪತ್ತೆಯಾಗಿದ್ದಾರೆ. ಲೋನಾವಾಲಾಗೆ ಪಿಕ್ನಿಕ್ಗಾಗಿ 15 ಮಂದಿ ಮಿನಿ ಬಸ್ನಲ್ಲಿ ಬಂದಿದ್ದರು.
ಇದನ್ನೂ ಓದಿ : ಇಂದು ದರ್ಶನ್ ನೋಡಲು ಪರಪ್ಪನ ಅಗ್ರಹಾರಕ್ಕೆ ಬರ್ತಿದ್ದಾರೆ ಅಮ್ಮ, ಸಹೋದರ..!