Download Our App

Follow us

Home » ಅಪರಾಧ » ಬೆಂಗಳೂರು : ಚಿನ್ನದ ಮಳಿಗೆ ಮೇಲೆ ನಕಲಿ‌ ಬಿಐಎಸ್ ಅಧಿಕಾರಿಗಳು ದಾಳಿ – ನಾಲ್ವರು ಅರೆಸ್ಟ್..!

ಬೆಂಗಳೂರು : ಚಿನ್ನದ ಮಳಿಗೆ ಮೇಲೆ ನಕಲಿ‌ ಬಿಐಎಸ್ ಅಧಿಕಾರಿಗಳು ದಾಳಿ – ನಾಲ್ವರು ಅರೆಸ್ಟ್..!

ಬೆಂಗಳೂರು : ಚಿನ್ನದ ಮಳಿಗೆ ಮೇಲೆ ಬಿಐಎಸ್ ಅಧಿಕಾರಿಗಳೆಂದು ಹೇಳಿ ದಾಳಿ ನಡೆಸಿದ ನಕಲಿ ಬಿಐಎಸ್ ಅಧಿಕಾರಿಗಳನ್ನ ಕೆಆರ್ ಪುರ ಪೊಲೀಸರು ಬಂಧಿಸಿದ್ದಾರೆ. ಕೆಆರ್ ಪುರದ ಮಹಾಲಕ್ಷ್ಮೀ ಜ್ಯುವೆಲ್ಲರಿ ಮೇಲೆ ಜನವರಿ 27 ರಂದು ನಕಲಿ ದಾಳಿ ಮಾಡಿ ಪರಿಶೀಲನೆ ನಡೆಸಿದ್ದರು. ಹಾಲ್ ಮಾರ್ಕ್ ಮತ್ತು ಜಿ ಎಸ್ ಟಿ ಅಧಿಕಾರಿಗಳು ಎಂದು ಹೇಳಿಕೊಂಡು ದರೋಡೆ ಮಾಡಲು ಮುಂದಾಗಿದ್ದರು.

ನಾಲ್ಕು ಜನ ನಕಲಿ ಅಧಿಕಾರಿಗಳಿಂದ ಈ ದಾಳಿ ನಡೆದಿದ್ದು, ನಕಲಿ ಅಧಿಕಾರಿಗಳ ಗ್ಯಾಂಗ್ ಇನೋವಾ ಕಾರಿನಲ್ಲಿ ಬಂದು ದಾಳಿ ಮಾಡಿ 1 ಕೆಜಿಗೂ ಅಧಿಕ ಚಿನ್ನ ತೆಗೆದುಕೊಂಡು ಹೋಗಲು ಯತ್ನಿಸಿದ್ದಾರೆ. ನಗರದ ಹಲವು ಜ್ಯುವೆಲರ್ಸ್ ಮೇಲೆ ದಾಳಿ ಆಗಿವೆ. ಅದರಲ್ಲಿ‌ ನಿಮ್ಮದೂ ಒಂದು ಹೇಳಿ ಈ ಗ್ಯಾಂಗ್ ದಾಳಿ ಮಾಡಿದೆ.

ಅಧಿಕಾರಿಗಳ ಸೋಗಿನಲ್ಲಿ ಹಾಲ್ ಮಾರ್ಕ್ ಇಲ್ಲದ ಅಕ್ರಮ ಚಿನ್ನದ ಪರಿಶೀಲನೆ ಮಾಡಿದ್ದು, ದಾಳಿ ಹೆಸರಲ್ಲಿ ಈ ಅಸಾಮಿಗಳು ಸುಮಾರು 40 ನಿಮಿಷ ಕೆಆರ್ ಪುರದ ಮಹಾಲಕ್ಷ್ಮೀ ಜ್ಯುವೆಲ್ಲರಿ ಸರ್ಚ್ ಮಾಡಿದೆ. ಬಳಿಕ ಜ್ಯುವೆಲ್ಲರಿಯಲ್ಲಿದ್ದ 1 ಕೆಜಿಗೂ ಅಧಿಕ ಚಿನ್ನ ತೆಗೆದುಕೊಂಡು ಹೋಗಲು ಪ್ಲಾನ್‌ ಹಾಕಿದೆ.

ಚಿನ್ನ ತೆಗೆದುಕೊಂಡು ಮುಂದಿನ ವಾರ ತಮಿಳುನಾಡಿನ ಕಚೇರಿಗೆ ಬರುವಂತೆ ನಕಲಿ ನೋಟಿಸ್ ಕೂಡ ನೀಡಿತ್ತು. ವಾಪಸ್ ಹೋಗುವ ವೇಳೆ ನಕಲಿ ಅಧಿಕಾರಿಗಳ ಎಡವಟ್ಟು ಮಾಡಿಕೊಂಡು ಜ್ಯುವೆಲ್ಲರಿ ಶಾಪ್ ನ ಸಿಸಿಟಿವಿ ಡಿವಿಆರ್ ತೆಗೆದುಕೊಂಡಿದೆ. ಇದನ್ನ ಕಂಡು ಅನುಮಾನಗೊಂಡ ಸಿಬ್ಬಂದಿಗಳು ನಕಲಿ ಅಧಿಕಾರಿಗಳ ಕಾರು ಪಾಲೋ ಮಾಡಿದ್ದಾರೆ. ಈ ವೇಳೆಸಿಬ್ಬಂದಿ ಕಂಡು ಯರ್ರಾಬಿರ್ರಿ ಕಾರು ಚಲಾಯಿಸಿ ಎಸ್ಕೇಪ್ ಆಗಲು ಯತ್ನ ಮಾಡಿದ್ದಾರೆ.

ಸಿಬ್ಬಂದಿ ತಕ್ಷಣವೇ ಎಚ್ಚೆತ್ತು ನಕಲಿ ಅಧಿಕಾರಿಗಳ ಬಗ್ಗೆ  ಪೊಲೀಸರ ಗಮನಕ್ಕೆ ತಂದಿದ್ದಾರೆ. ಕೂಡಲೇ ಅಲರ್ಟ್ ಆದ ಕೆ ಆರ್ ಪುರ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಮೂರು ಸಬ್ ಇನ್ಸ್‌ಪೆಕ್ಟರ್ ಗಳು ಟಿಸಿ ಪಾಳ್ಯ ಜಂಕ್ಷನ್ ಗೆ ದೌಡಯಿಸಿದ್ದಾರೆ. ನಂತರ ಪ್ಲಾನ್ ಮಾಡಿ ಸ್ವಲ್ಪ ದೂರದಲ್ಲೇ ನಕಲಿ ಅಧಿಕಾರಿಗಳ ಎಡೆಮುರಿ ಕಟ್ಟಿದ್ದಾರೆ. ಸಂಪತ್ ಕುಮಾರ್, ಜೋಶಿ ಥಾಮಸ್, ಅವಿನಾಶ್, ಸಂದೀಪ್ ಬಂಧಿತ ಆರೋಪಿಗಳಾಗಿದ್ದು, ಈ ಬಗ್ಗೆ ಕೆ ಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಸರ್ಕಾರಿ ಕೆಲಸ ಕೊಡಿಸೋದಾಗಿ 11.20 ಲಕ್ಷ ರೂ. ವಂಚನೆ – ಕಾಂಗ್ರೆಸ್​ ನಾಯಕಿ ಸಂಧ್ಯಾ ಪವಿತ್ರಾ ನಾಗರಾಜ್ ವಿರುದ್ದ FIR ದಾಖಲು..!

Btv Kannada1
Author: Btv Kannada1

Leave a Comment

RELATED LATEST NEWS

Top Headlines

ಬೈಕ್ ಸವಾರನ ಶವವನ್ನು 18 ಕಿ.ಮೀ​ ಎಳೆದೊಯ್ದು ಪರಾರಿಯಾದ ಕಾರು ಚಾಲಕ..!

ಕಾರು ಚಾಲಕನೊಬ್ಬ ಬೈಕ್​ಗೆ ಡಿಕ್ಕಿ ಹೊಡೆದು ಸವಾರನನ್ನು ಬರೋಬ್ಬರಿ 18 ಕಿಲೋ. ಮೀಟರ್​ ದೂರಕ್ಕೆ ಎಳೆದೊಯ್ದು ಪರಾರಿಯಾಗಿರುವ ಘಟನೆ ಅನಂತಪುರದಲ್ಲಿ ನಡೆದಿದೆ. ಈ ಘಟನೆ ಭಾನುವಾರ ರಾತ್ರಿ

Live Cricket

Add Your Heading Text Here