Download Our App

Follow us

Home » ರಾಜಕೀಯ » ಈ ಹೋರಾಟ ರಾಜ್ಯದ ಹಿತಕ್ಕಾಗಿ, ನ್ಯಾಯವಾಗಿ ಪಾಲುಕೊಡಿ ಎಂದು ಕೇಳೋದು ತಪ್ಪಾ? ಸಿಎಂ ಸಿದ್ದರಾಮಯ್ಯ..!

ಈ ಹೋರಾಟ ರಾಜ್ಯದ ಹಿತಕ್ಕಾಗಿ, ನ್ಯಾಯವಾಗಿ ಪಾಲುಕೊಡಿ ಎಂದು ಕೇಳೋದು ತಪ್ಪಾ? ಸಿಎಂ ಸಿದ್ದರಾಮಯ್ಯ..!

ದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್‌ನಲ್ಲಿ ಇಂದು ಕೇಂದ್ರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಕನ್ನಡಿಗರ ನ್ಯಾಯಯುತ ತೆರಿಗೆ ಪಾಲು ಮತ್ತು ಅನುದಾನ ಹಂಚಿಕೆಯಲ್ಲಿ ತಾರತಮ್ಯ ಆಗ್ತಿದೆ ಎಂದು ಕಾಂಗ್ರೆಸ್ ಆರೋಪಿಸಿ ಪ್ರತಿಭಟನೆ ಹಮ್ಮಿಕೊಂಡಿದೆ.

ಈ ಕುರಿತು ಸಿದ್ದರಾಮಯ್ಯ ಮಾತನಾಡಿ, ಕೇಂದ್ರದಿಂದ ರಾಜ್ಯಕ್ಕೆ ಭಾರೀ ಅನ್ಯಾಯವಾಗಿದೆ. ನ್ಯಾಯವಾಗಿ ಪಾಲುಕೊಡಿ ಎಂದು ಕೇಳೋದು ತಪ್ಪಾ? ಇದು ಐತಿಹಾಸಿಕ ಪ್ರತಿಭಟನೆಯಾಗಿದೆ. ರಾಜ್ಯದ ಹಿತಕ್ಕಾಗಿ ನಡೆಯುತ್ತಿರುವ ಪ್ರೊಟೆಸ್ಟ್​ ಇದು. ಈ ಹೋರಾಟ ಯಾರ ವಿರುದ್ಧವೂ ಅಲ್ಲ, ಇದು ರಾಜ್ಯದ ಹಾಗೂ ಕನ್ನಡಿಗರ ಹಿತಕ್ಕಾಗಿ ಎಂದು ಹೇಳಿದ್ದಾರೆ.

ಪಕ್ಷಾತೀತವಾಗಿ ಎಲ್ಲರೂ ಈ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಬೇಕೆಂದು ಕಾಂಗ್ರೆಸ್​ ನಾಯಕರು ಕೂಡ ಮನವಿ ಮಾಡಿದ್ದಾರೆ. ರಾಜ್ಯಕ್ಕೆ 1.87 ಲಕ್ಷ ಕೋಟಿ ನಷ್ಟ ಆಗಿದೆ. 100 ರೂಪಾಯಿಯಲ್ಲಿ ನಮಗೆ ಸಿಗ್ತಿರೋದು 12 ರೂ. ಮಾತ್ರ ಎಂದು ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರತಿಭಟನೆಗೆ ರಾಜ್ಯ ಸರ್ಕಾರದ ಎಲ್ಲಾ ಸಚಿವರು, ಎಲ್ಲಾ ಶಾಸಕರು, ವಿಧಾನಸಭಾ ಸದಸ್ಯರು ಬಂದಿದ್ದಾರೆ. ಬಿಜೆಪಿ ಸಂಸದರಿಗೂ ಆಹ್ವಾನ ನೀಡಿದ್ದೇವೆ. ಅನಿವಾರ್ಯವಾಗಿ ದೆಹಲಿಯಲ್ಲಿ ಪ್ರತಿಭಟನೆ ಮಾಡ್ತಿದ್ದೀವಿ ಎಂದರು. ಇದು ರಾಜಕೀಯಕ್ಕೋಸ್ಕರ ಮಾಡ್ತಿರೋ ಪ್ರತಿಭಟನೆ ಅಲ್ಲ. ಇದು ಕರ್ನಾಟಕದ ಹಿತವನ್ನ ಕಾಪಾಡಲು ಮಾಡ್ತಿರುವ ಚಳವಳಿ ಎಂದರು.

ಇದನ್ನೂ ಓದಿ : ಲಕ್ಷ್ಮಣ ಸವದಿ ಫ್ಲೆಕ್ಸ್ ಗಳಲ್ಲಿ ಕೇಸರಿ ವಾಪಸ್ : ಬಿಜೆಪಿಯತ್ತ ಹೊರಟ್ರಾ ಕಾಂಗ್ರೆಸ್ ಎಂಎಲ್ಎ?

Btv Kannada1
Author: Btv Kannada1

Leave a Comment

RELATED LATEST NEWS

Top Headlines

ಸುರಪುರ ಕಾಂಗ್ರೆಸ್ MLA ರಾಜಾ ವೆಂಕಟಪ್ಪ ನಾಯಕ್ ವಿಧಿವಶ..!

ಯಾದಗಿರಿ : ಸುರಪುರ ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ. ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 67 ವರ್ಷದ ಶಾಸಕ ರಾಜಾ ವೆಂಕಟಪ್ಪ

Live Cricket

Add Your Heading Text Here