ಶಿವಮೊಗ್ಗ : ಆನಂದ್ ಗುರೂಜಿ ಈಶ್ವರಪ್ಪನವರಮನೆಗೆ ಭೇಟಿಯಾಗಿ ಈಶ್ವರಪ್ಪನವರನ್ನು ಮಗಳ ಮದುವೆಗೆ ಆಹ್ವಾನಿಸಿದ್ದಾರೆ. ಈ ವೇಳೆ ಆನಂದ್ ಗುರೂಜಿ ಮಾತನಾಡಿ, ಈಶ್ವರಪ್ಪ ಧರ್ಮದ ಪರವಾಗಿ ಹೋರಾಟ ಮಾಡಿದವರು. ಅಂತಹ ನಾಯಕತ್ವದ ಅಗತ್ಯತೆ ಇದೆ. ಅಂತಹವರು ರಾಜಕಾರಣದಲ್ಲಿ ಇರಬೇಕು. ಈಶ್ವರಪ್ಪ ಅವರಿಗೆ ಅನ್ಯಾಯ ಆಗಬಾರದು. ನಮ್ಮೆಲ್ಲಾ ಮಠಾಧೀಶರ ಬೆಂಬಲ ಈಶ್ವರಪ್ಪ ಅವರಿಗಿದೆ. ಈಶ್ವರಪ್ಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು ಗೆಲ್ಲಬೇಕು ಎಂದರು.
ಇದೇ ವೇಳೆ ಈಶ್ವರಪ್ಪ ಮಾತನಾಡಿ, ಧರ್ಮಕ್ಕೆ ಹೋರಾಡುವವರನ್ನ ತುಳಿಯುವ ಕೆಲಸ ಆಗ್ತಿದೆ. ಶಾಸಕ ಬಸನಗೌಡ ಯತ್ನಾಳ್, ನಳಿನ್ ಕುಮಾರ್ ಕಟೀಲು, ಸಿ.ಟಿ.ರವಿ, ಈಶ್ವರಪ್ಪರನ್ನ ತುಳಿಯುವ ಕೆಲಸ ನಡೆಯುತ್ತಿದೆ. ನಮ್ಮನ್ನು ತುಳಿದರೆ ಅವರ ಮಗನ ದಾರಿ ಸಲೀಸಾಗುತ್ತದೆ. ನನ್ನ ಮನವೊಲಿಸಲು ಜ್ಞಾನೇಂದ್ರ ರವಿಕುಮಾರ್, ಅರುಣ್ ಬಂದಿದ್ದರು. ಮೊನ್ನೆ ಶಿವಮೊಗ್ಗದ ಕಾರ್ಯಕರ್ತರು ಹಿತೈಷಿಗಳು ಸಭೆ ಮಾಡಿ ಅಭಿಪ್ರಾಯ ಹೇಳಿದ್ದಾರೆ, ಅಷ್ಟು ಜನ ಸೇರುತ್ತಾರೆ ಅಂತಾ ನಾನು ಅಂದುಕೊಂಡಿರಲಿಲ್ಲ. ನಾನು ಈಗಾಗಲೇ ಘೋಷಣೆ ಮಾಡಿದ್ದೇನೆ ಚುನಾವಣೆಗೆ ಸ್ಪರ್ಧೆ ಮಾಡಿಯೇ ಮಾಡ್ತೇನೆ, ಹಿಂದುತ್ವದ ಪರವಾಗಿ ಕೆಲಸ ಮಾಡಿದವರಿಗೆ ಮೋಸ ಮಾಡಿದ್ದಾರೆ. ಯಡಿಯೂರಪ್ಪ ಅವರ ಕುಟುಂಬದ ಕೈಯಲ್ಲಿ ಪಕ್ಷ ಇದ್ದು ಒದ್ದಾಡುತ್ತಿದೆ, ಯಡಿಯೂರಪ್ಪ ಲಿಂಗಾಯ್ತ ನಾಯಕರು, ಅವರನ್ನು ವರಿಷ್ಠರು ನಂಬಿದ್ದಾರೆ ಎಂದು ಹೇಳಿದ್ದಾರೆ.
ಹಾಗೆಯೇ, ನಾನು ಚುನಾವಣೆಗೆ ಏಕೆ ಸ್ಪರ್ಧೆ ಮಾಡ್ತಿದ್ದೇನೆ ಎಂಬುದನ್ನು ಅವರ ಗಮನಕ್ಕೆ ತಂದಿದ್ದೇನೆ, ಯಡಿಯೂರಪ್ಪ ಹಠ ಹಿಡಿದು ತಮ್ಮ ಮಗನ ಮಾಡಿದ್ರು. ಯಡಿಯೂರಪ್ಪ ಕೆಜೆಪಿ ಕಟ್ಟಿದ್ದಾಗ ಪಡೆದಿದ್ದು 6 ಸೀಟ್ ಮಾತ್ರ, ಇದು ಯಡಿಯೂರಪ್ಪ ಅವರ ನಾಯಕತ್ವ. ಒಕ್ಕಲಿಗರನ್ನು ರಾಜ್ಯಾಧ್ಯಕ್ಷ ಮಾಡುವುದಾದರೆ ಸಿ.ಟಿ.ರವಿ ಮಾಡಬಹುದಿತ್ತು, ಹಿಂದುಳಿದ ವರ್ಗದ ನಾಯಕನನ್ನು ಅಧ್ಯಕ್ಷರಾಗಿ ಮಾಡುವುದಾದರೆ ನನ್ನ ಏಕೆ ಮಾಡಲಿಲ್ಲ. ನಾನು ಯಾವುದರಲ್ಲಿ ಕಡಿಮೆ ಇದ್ದೆ, ನಾನು ಯಾವಾಗ ಪಕ್ಷ ತೊರೆದು ಹೊರಗೆ ಹೋಗಿದ್ದೆ. ಪಕ್ಷ ಹೇಳಿದಾಗಲೆಲ್ಲಾ ನಾನು ಅಧಿಕಾರದ ಸ್ಥಾನಕ್ಕೆ ರಾಜೀನಾಮೆ ನೀಡಿದೆ ಎಂದಿದ್ದಾರೆ.
ಸಿ.ಟಿ. ರವಿ ಯಾವುದರಲ್ಲಿ ಕಡಿಮೆ ಆಗಿದ್ದರು ಅವರಿಗೆ ಏಕೆ ಟಿಕೆಟ್ ತಪ್ಪಿಸಿದರು, ನೊಂದ ಕಾರ್ಯಕರ್ತರ ಧ್ವನಿಯಾಗಿ ಚುನಾವಣೆಗೆ ಸ್ಪರ್ಧೆ ಮಾಡ್ತಿದ್ದೇನೆ. ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯಬೇಡಿ ಅಂತ ರಾಜ್ಯದಿಂದ ಹಲವರು ಪೋನ್ ಮಾಡ್ತಿದ್ದಾರೆ, ಅವರ ಎಲ್ಲರ ಒತ್ತಾಯಕ್ಕಾಗಿ ಸ್ಪರ್ಧೆ ಮಾಡ್ತಿದ್ದೇನೆ ಯಾರು ಮನವೊಲಿಸಿದರು ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ. ಯಡಿಯೂರಪ್ಪ, ವಿಜಯೇಂದ್ರ ತಾಯಿಯಂತಿರುವ ಪಕ್ಷದ ಕುತ್ತಿಗೆ ಹಿಸುಕುತ್ತಿದ್ದಾರೆ, ಆ ಪಕ್ಷ ರಕ್ಷಣೆಗೆ ನಾನು ಸ್ಪರ್ಧೆ ಮಾಡ್ತಿದ್ದೇನೆ ಯಡಿಯೂರಪ್ಪ ಹಾಗು ಕುಟುಂಬದಿಂದ ಪಕ್ಷವನ್ನ ರಕ್ಷಣೆ ಆಗಬೇಕಿದೆ ಆದ್ದರಿಂದ ನಾನು ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ : ಮೊಹಮ್ಮದ್ ನಲಪಾಡ್ಗೆ ಬೆಂಗಳೂರು ಸೆಂಟ್ರಲ್ ಟಿಕೆಟ್ : ಪ್ರಿಯಾಂಕ ಗಾಂಧಿ ಸೂಚನೆ..!