ಬೆಂಗಳೂರು : ಮುಡಾ ಹಗರಣ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅನುಮತಿ ನೀಡಿದ್ದಾರೆ. ಪ್ರಾಸಿಕ್ಯೂಶನ್ಗೆ ಅನುಮತಿ ನೀಡಿದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು ಎಮೆರ್ಜೆನ್ಸಿ ಕ್ಯಾಬಿನೆಟ್ ಮೀಟಿಂಗ್ ಕರೆದಿದ್ದರು. ಆದರೆ ಇದೀಗ ಕ್ಯಾಬಿನೆಟ್ ಮೀಟಿಂಗ್ ರದ್ದು ಪಡಿಸಿ ಇಡೀ ಸಿದ್ದು ಸಂಪುಟ ರಾಜಭವನಕ್ಕೆ ತೆರಳಲಿದೆ.
ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸಿದ್ದರಾಮಯ್ಯ ಹೊರತು ಪಡಿಸಿ ಮತ್ತೆಲ್ಲರೂ ರಾಜಭವನಕ್ಕೆ ತೆರಳಲಿದ್ದಾರೆ. ಡಿಸಿಎಂ ಡಿಕೆಶಿ 12.30ಕ್ಕೆ ಭೇಟಿಗೆ ಅವಕಾಶ ಕೇಳಿದ್ದು, ಪ್ರಾಸಿಕ್ಯೂಶನ್ಗೆ ಅನುಮತಿ ಕೊಟ್ಟಿದ್ದಕ್ಕೆ ರಾಜಭವನದಲ್ಲಿ ಆಕ್ಷೇಪ ವ್ಯಕ್ತಪಡಿಸಲು ನಿರ್ಧರಿಸಿದ್ದಾರೆ.
ಪ್ರಾಸಿಕ್ಯೂಶನ್ ಅನುಮತಿ ರದ್ದುಪಡಿಸುವಂತೆ ಅಧಿಕೃತವಾಗಿ ಮನವಿ ಸಲ್ಲಿಸಲು ಸಚಿವರು ರಾಜಭವನಕ್ಕೆ ಹೋಗಲಿದ್ದಾರೆ. ರಾಜಭವನದ ವಿರುದ್ಧ ನೇರಾನೇರ ಸಂಘರ್ಷಕ್ಕೆ ಇಳಿಯಲು ನಿರ್ಧರಿಸಿದ್ದು, ಇಂದಿನಿಂದಲೇ ಕಾನೂನು ಮತ್ತು ರಾಜಕೀಯ ಹೋರಾಟಕ್ಕೆ ಸಿದ್ದು ಸಂಪುಟ ಸಿದ್ಧತೆ ನಡೆಸುತ್ತಿದೆ.
ಇದನ್ನೂ ಓದಿ : ಸರ್ಕಾರಿ ನೌಕರರು ಇನ್ನು ಕೆಂಪು-ಹಳದಿ ಬಣ್ಣದ ಐಡಿ ಕಾರ್ಡ್ ಟ್ಯಾಗ್ ಧರಿಸಲು ಆದೇಶಿಸಿದ ರಾಜ್ಯ ಸರ್ಕಾರ..!