ಬೆಂಗಳೂರು : ಮಹಿಳಾ ಇಂಜಿನಿಯರ್ಗೆ ಬೆದರಿಕೆ ಹಾಕಿದ ಗುತ್ತಿಗೆದಾರ ಸಂಗಮೇಶ್ ಎಂಬಾತನ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಗುತ್ತಿಗೆದಾರ ಸಂಗಮೇಶ್ ಇದೇ ತಿಂಗಳ 4ರಂದು ಕಛೇರಿಗೆ ತೆರಳಿ PWD ಇಂಜಿನಿಯರ್ ಪೂರ್ಣಿಮಾರಿಗೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಕಛೇರಿಗೆ ತೆರಳಿದ ಸಂಗಮೇಶ್ ಇಂಜಿನಿಯರ್ ಪೂರ್ಣಿಮಾ ಬಳಿ ‘ಬೈಯಪ್ಪನಹಳ್ಳಿ ಜುಡಿಷಿಯಲ್ ಕ್ವಾರ್ಟರ್ಸ್ ಎಕ್ಸಿಕ್ಯೂಶನ್’ ಬಗ್ಗೆ ವಿಚಾರಿಸಿದ್ದ. ಈ ವೇಳೆ ಆನ್ ಲೈನ್ ಮೀಟಿಂಗ್ ನಲ್ಲಿದ್ದ ಪೂರ್ಣಿಮಾ, ಸ್ವಲ್ಪ ಸಮಯದ ನಂತರ ಮಾತಾಡೋಣ ಎಂದಿದ್ದರು.
ಆಗ ಸಂಗಮೇಶ್ ಸಡನ್ ಆಗಿ ಕೋಪಗೊಂಡು ಕೂಗಾಡಿದ್ದಾನೆ. ಬೆರಳು ತೋರಿಸಿ ಏಕವಚನದಲ್ಲಿ ಬೈದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ದೂರಿನಲ್ಲಿ ಪೂರ್ಣಿಮಾ ಉಲ್ಲೇಖಿಸಿದ್ದಾರೆ. ಸಂಗಮೇಶ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ದೂರಿನಲ್ಲಿ ಕೋರಲಾಗಿದ್ದು, ಸದ್ಯ ದೂರನ್ನು ಆಧರಿಸಿ ವಿಧಾನಸೌಧ ಪೊಲೀಸರು ತನಿಖೆ ನಡೆಸ್ತಿದ್ದಾರೆ.
ಇದನ್ನೂ ಓದಿ : ಉಡುಪಿಯಲ್ಲಿ ಭೀಕರ ರಸ್ತೆ ಅಪಘಾತ – ಸವಾರ ಸ್ಥಳದಲ್ಲೇ ಸಾವು..!
Post Views: 24