ಚಾಮರಾಜನಗರ : ನಾನು ಈಗ ಅಧಿಕಾರದ ಕೊನೆಗಾಲದಲ್ಲಿದ್ದೇನೆ. ಜನರ ಪ್ರೀತಿ, ಅಭಿಮಾನ ಗಳಿಸದೆ ಇದ್ದರೆ ರಾಜಕೀಯದಲ್ಲಿ ಉಳಿಗಾಲವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಬಗ್ಗೆ ಚಾಮರಾಜನಗರದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ನಾನು ಏನಿಲ್ಲ ಅಂದ್ರು 20 ಬಾರಿ ಚಾಮರಾಜನಗರಕ್ಕೆ ಬಂದಿದ್ದೇನೆ. ನಾನು ಚಾಮರಾಜನಗರಕ್ಕೆ ಬಂದಾಗಲೆಲ್ಲ ಅಧಿಕಾರ ಕಳೆದುಕೊಂಡಿಲ್ಲ. ಬದಲಿಗೆ ಸಿಎಂ ಖುರ್ಚಿ ಗಟ್ಟಿಯಾಗಿದೆ. ನಾನು ಈಗ ರಾಜಕೀಯ ಕೊನೆಗಾಲದಲ್ಲಿದ್ದೇನೆ. ಜನರ ಪ್ರೀತಿ ಅಭಿಮಾನ ಗಳಿಸದೆ ಇದ್ರೆ ರಾಜಕೀಯದಲ್ಲಿ ಉಳಿಗಾಲ ಸಾಧ್ಯವಿಲ್ಲ ಎಂದಿದ್ದಾರೆ.
ಈ ಬಿಜೆಪಿಯವ್ರು ನಾವು ಕೊಡೊ ಗೃಹಲಕ್ಷ್ಮಿ ಯೋಜನೆಯಿಂದ ಅತ್ತೆ-ಸೊಸೆಗೆ ಜಗಳ ತಂದಿಟ್ರು ಎಂದು ಅಪಪ್ರಚಾರ ಮಾಡಿದ್ರು. ಬಿಜೆಪಿಯವರಿಗೆ ಬರಿ ಇದೆ ಕೆಲಸ. ನಿಮಗೆ ಉಚಿತವಾಗಿ ಅಕ್ಕಿ ಕೊಡ್ತಾಯಿರೋರು ಯಾರು? ನಾನು ಮೊದಲು ಬಾರಿ ಸಿಎಂ ಆದಾಗ 5 ಕೆಜಿ ಉಚಿತವಾಗಿ ಕೊಟ್ಟೆ. ಈಗ 10 ಕೆಜಿ ನೀಡುತ್ತೇವೆ ಅಂದ್ರೆ ಕೇಂದ್ರದವರು ಅಡ್ಡಗಾಲು ಹಾಕಿದ್ದಾರೆ. ಫ್ರೀಯಾಗಿ ಏನನ್ನೂ ಕೊಡ್ಬೇಡಿ ಮೋದಿಯವರೇ, ಒಂದು ಕೆಜಿಗೆ 34 ರೂಪಾಯಿ ಕೊಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ : ‘ನಿಮ್ಮ ಅಸ್ತ್ರದಿಂದ, ನಮ್ಮ ವಸ್ತ್ರ ಬೀಳುತ್ತಿದೆ’ – ಚೈತ್ರಾ ಕಾಲೆಳೆದ ಕಿಚ್ಚ ಸುದೀಪ್..!