Download Our App

Follow us

Home » ಜೀವನಶೈಲಿ » ಬೇರು ಭೂಮಿ ತಂಡ ಕಟ್ಟಿ, ಚಿಕ್ಕ ವಯಸ್ಸಿನಿಂದಲೂ ಪರಿಸರ ಸಂರಕ್ಷಿಸುತ್ತಿರುವ ಪರಿಸರ ಸ್ನೇಹಿ ಯಶಸ್​ ಯಶೋಗಾಥೆ..!

ಬೇರು ಭೂಮಿ ತಂಡ ಕಟ್ಟಿ, ಚಿಕ್ಕ ವಯಸ್ಸಿನಿಂದಲೂ ಪರಿಸರ ಸಂರಕ್ಷಿಸುತ್ತಿರುವ ಪರಿಸರ ಸ್ನೇಹಿ ಯಶಸ್​ ಯಶೋಗಾಥೆ..!

ಪರಿಸರ ಉಳಿಸಿ.. ಪರಿಸರ ಸಂರಕ್ಷಿಸಿ.. ಕಾಡು ಬೆಳಸಿ.. ನಾಡು ಉಳಿಸಿ..ಅರಣ್ಯ ಸಂಪತ್ತು ನಮ್ಮೆಲ್ಲರ ಸಂಪತ್ತು.. ಈ ಎಲ್ಲಾ ನಾಣ್ನುಡಿಗೂ ಅನ್ವರ್ಥನಾಮವೇ ಪರಿಸರ ಸ್ನೇಹಿ ಯಶಸ್​​​.. ಇವರಿಗೆ ಪರಿಸರವೇ ಉಸಿರು.. ಪರಿಸರವೇ ಹಸಿರು.. ಪರಿಸರವೇ ಬದುಕು.. ಮೂಲತಃ ಪರಿಸರ ಸ್ನೇಹಿ ಯಶಸ್, ​​ಅರೆ ಮಲೆನಾಡು ಕೊನೆಯ ಗಡಿ ಭಾಗವಾದ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಕಬ್ಬಳ ಪಂಚಾಯಿತಿಯ ಹೊಸ ಹಟ್ಟಿ ಎಂಬ ಪುಟ್ಟ ಗ್ರಾಮದವರು.. ಚಿಕ್ಕ ವಯಸ್ಸಿನಿಂದ ಇವರಿಗೆ ಪರಿಸರ ಅಂದ್ರೆ ಬಲು ಇಷ್ಟ. ಅರಣ್ಯದ್ಮೇಲೆ.. ಸುತ್ತಮುತ್ತಲಿನ ವಾತಾವರಣದ ಮೇಲೆ ಅಗಾಧವಾದ ಪ್ರೀತಿ.. ಆಡುವ ವಯಸ್ಸಿನಿಂದಲೂ ಸಸಿಗಳನ್ನ ನೆಡೋದು.. ಅದನ್ನ ಪೋಷಣೆ ಮಾಡುವುದು.. ದೊಡ್ಡ ಹೆಮ್ಮರವಾಗಿ ಬೆಳಸುವುದು ಕಾಯಕವಾಗಿಸಿಕೊಂಡು ಬಂದಿದ್ದಾರೆ.

ಚಿತ್ರದುರ್ಗದಿಂದ ತಂದೆ-ತಾಯಿಯೊಂದಿಗೆ ಬೆಂಗಳೂರಿನ ಕೂಗಳತ್ತೆ ದೂರದಲ್ಲಿರೋ ನೆಲಮಂಗಲಕ್ಕೆ ಬಂದು ನೆಲೆಸಿದ್ರು.. ಬಿಕಾಂ ಪದವಿದರನಾದ ಯಶಸ್​​​, ಇಂಟೀರಿಯರ್ ಡಿಸೈನಲ್ಲೂ ಎಕ್ಸ್​​ಪರ್ಟ್​. ತಮ್ಮ ಬದುಕು ಸುಂದರವಾಗಿದ್ರು. ಒಂದೇ ಒಂದು ಕೊರಗು ಕಾಡುತ್ತಿತ್ತು.. ಪರಿಸರ ನಮ್ಮಗೆಲ್ಲಾ ಕೊಟ್ಟಿದೆ.. ಆದ್ರೆ ನಾವು ಪರಿಸರಕ್ಕಾಗಿ ಏನು ಕೊಟ್ಟಿಲ್ಲ ಅನ್ನೋದು ನಿದ್ದೆಗೆಡಿಸುತ್ತಿತ್ತು. ಹೀಗಾಗಿ 2018 ರಲ್ಲಿ ಕ್ರಾಂತಿಕಾರಿ ಹೆಜ್ಜೆ ಇಟ್ರು. ಪ್ರಾರಂಭದಲ್ಲಿ ಗಿಡ ನೆಡುವ ಕಾರ್ಯಕ್ರಮ ಮಾಡುತ್ತಾ ಮಾಡುತ್ತಾ.. ದೊಡ್ಡ ದೊಡ್ಡ ಮಟ್ಟದಲ್ಲಿ ಪರಿಸರ ಕೆಲಸವನ್ನ ಮಾಡುತ್ತಿದ್ದಾರೆ.

ಮೊದಲು ಸೇವ್ ಟ್ರೀಸ್ ಟ್ರಸ್ಟ್​​ ಶುರು ಮಾಡಿದ್ರು. ಅದನ್ನ ಕೊಂಚ ಬದಲಾವಣೆ ಮಾಡಿ, ಬೇರುಭೂಮಿ ಎಂಬ ಬೃಹತ್​ ಸಂಸ್ಥೆಯನ್ನ ಕಟ್ಟಿದ್ದಾರೆ.. ಈ ಸಂಸ್ಥೆಯ ಮೂಲಕ ಕರ್ನಾಟಕದಾದ್ಯಂತ ಸಣ್ಣ ಸಣ್ಣ ಸ್ವಯಂಸೇವಕರು ಮೂಲಕ, ಇದುವರೆಗೂ ಸುಮಾರು 8000 ಗಿಡಗಳನ್ನು ನೆಡಲಾಗಿದೆ. ಕಳೆದ ವರ್ಷ ಸುಮಾರು 5000 ಸಾವಿರಕ್ಕೂ ಹೆಚ್ಚು ಗಿಡಗಳನ್ನ ನೆಟ್ಟಿದಲ್ಲದೆ, ಪ್ಲಾಸ್ಟಿಕ್ ಸ್ವಚ್ಛತೆ ಅಭಿಯಾನವನ್ನು ಸಹ ಮಾಡಿದ್ದಾರೆ.

ಅದರಲ್ಲಿ ಸುಮಾರು ಒಂದು ಟನ್ ಪ್ಲಾಸ್ಟಿಕ್ ಪಶ್ಚಿಮ ಘಟ್ಟಗಳಲ್ಲಿ ದೇವರ ಮನೆ ಎಂಬ ಬಳಿ ಪ್ಲಾಸ್ಟಿಕ್ ಕಸವನ್ನು ಎತ್ತಿದ್ದಾರೆ. ಇದರ ಜೊತೆಗೆ ಸುಮಾರು 50 ಜನ ಬೆಂಗಳೂರಿನಲ್ಲಿ ಕಳೆದ ತಿಂಗಳು ಬರೋಬರಿ 5,000 ಗಿಡಗಳನ್ನು ನೆಟ್ಟಿದ್ದಾರೆ. ಇಷ್ಟೇ ಅಲ್ಲಾ ಕೊಟ್ಟೂರು ತಾಲೂಕು ಕುಡುತಿನಿ ಮಗ್ಗಿ ಗ್ರಾಮ ಹಾಗೂ ವಿಜಯನಗರ ಜಿಲ್ಲೆ ಬೇಸಿಗೆಗಾಲದಲ್ಲಿ ವನ್ಯಜೀವಿಗಳಿಗೆ ಜೀವ ಜಲ ಕಾರ್ಯಕ್ರಮವನ್ನು ಮಾಡಿದ್ದಾರೆ.

ಪರಿಸರ ಸ್ನೇಹಿ ಯಶಸ್​ ಕನ್ನಡ ಮನಸುಗಳು ಕರ್ನಾಟಕ ಅಂತ​ ಮತ್ತೊಂದು ತಂಡವನ್ನು ಕಟ್ಟಿದ್ದಾರೆ. ಈ ತಂಡದಿಂದ ಸರ್ಕಾರಿ ಶಾಲೆ ಉಳಿಸಿ ಅಂತ ಅಭಿಯಾನ ಮೂಲಕ, ಸುಮಾರು 50 ಶಾಲೆಗಳಿಗೆ ಹೊಸ ರೂಪ ನೀಡಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಆಸರೆಯಾಗಿದ್ದಾರೆ. ಪರಿಸರ ಸ್ನೇಹಿ ಯಶಸ್​ಗೆ ಪರಿಸರ ಮತ್ತು ಕನ್ನಡ ಎರಡು ಕಣ್ಣುಗಳಿದಂತೆ. ಜೀವನ ಪೂರ್ತಿ ಪರಿಸರ ಮತ್ತು ಕನ್ನಡ ಉಳಿಸುವುದನ್ನು ಧ್ಯೇಯವಾಗಿಸಿಕೊಂಡಿದ್ದಾರೆ. ಅದಕ್ಕಾಗಿಯೇ ಜೀವನ ಮುಡಿಪಾಗಿಟ್ಟಿದ್ದಾರೆ. ಈ ಪರಿಸರ ಸ್ನೇಹಿ ಯಶಸ್​ಗೆ ಜೀವನದುದ್ದಕ್ಕೂ ಯಶಸ್ಸು ಸಿಗಲಿ ಅನ್ನೋದೆ ಎಲ್ಲರ ಹಾರೈಕೆ.

ಇದನ್ನೂ ಓದಿ : ಕಿರುತೆರೆಯ ಖ್ಯಾತ ನಟ ವಿಕಾಸ್​ ಸೇಥಿ ಹೃದಯಾಘಾತದಿಂದ ನಿಧನ..!

Leave a Comment

DG Ad

RELATED LATEST NEWS

Top Headlines

BBK11: ‘ನಿಮ್ಮ ರೀತಿಯ ಫೂಟೇಜ್ ನನಗೆ ಬೇಡ’ – ಮೋಕ್ಷಿತಾ ಖಡಕ್​ ಮಾತಿಗೆ ಜಗದೀಶ್ ಪುಲ್​ ಸೈಲೆಂಟ್..!

ಬಿಗ್‌ ಬಾಸ್‌ ಮನೆ ಈಗ ರಣರಂಗವಾಗಿದ್ದು, ಎರಡನೇ ವಾರಕ್ಕೆ ಕಾಲಿಟ್ಟಿದೆ. 16 ಸ್ಪರ್ಧಿಗಳ ಮಧ್ಯೆ ಒಂಟಿ ಮನೆಯಲ್ಲಿ ಆಟ ಮುಂದುವರಿದಿದೆ. ಮೊದಲ ವಾರ ಯಮುನಾ ಶ್ರೀನಿಧಿ ಎಲಿಮಿನೇಟ್

Live Cricket

Add Your Heading Text Here