ಬೆಂಗಳೂರು : ಕುಡಿದ ಮತ್ತಿನಲ್ಲಿ ಸ್ನೇಹಿತರ ನಡುವೆ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿಯ ಬಾರ್ನಲ್ಲಿ ನಡೆದಿದೆ. 25 ವರ್ಷದ ಯೋಗೇಂದರ್ ಅಲಿಯಾಸ್ ಸೋನು ಕೊಲೆಯಾದ ವ್ಯಕ್ತಿ.
ಕಸ್ತೂರಿ ನಗರದಲ್ಲಿ ವಾಸವಿದ್ದ ಯೋಗೇಂದರ್ ಅಲಿಯಾಸ್ ಸೋನು, ತಡರಾತ್ರಿ ಸ್ನೇಹಿತ ಉಮೇಶ್ ಜೊತೆಗೂಡಿ ಮದ್ಯಪಾನ ಮಾಡಿದ್ದರು. ಪಾನಮತ್ತರಾಗಿದ್ದ ಇಬ್ಬರೂ ಸ್ನೇಹಿತರು ಹಳೆಯ ಜಗಳದ ವಿಚಾರವಾಗಿ ಮತ್ತೆ ಗಲಾಟೆ ಮಾಡಿಕೊಂಡಿದ್ದರು. ಅದೇ ವೇಳೆ ಉಮೇಶ್ ಬಾಟಲಿಯಿಂದ ಯೋಗೇಂದರ್ ಕುತ್ತಿಗೆ ಇರಿದಿದ್ದಾನೆ. ಘಟನೆಯ ಪರಿಣಾಮ ಯೋಗೇಂದ್ರ ಸಿಂಗ್ ಮೃತಪಟ್ಟಿದ್ದಾನೆ.
ಇನ್ನು ಮೃತ ಯೋಗೇಂದ್ರ ಸಿಂಗ್‌ನ ತಂದೆ ನೀಡಿದ ದೂರಿನ ಅನ್ವಯ ಬ್ಯಾಟರಾಯನಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ಆರೋಪಿ ಉಮೇಶ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಬಿಗ್ಬಾಸ್ ನಿರೂಪಣೆಗೆ ವಿದಾಯ.. ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಭಾರೀ ಬೇಸರ..!
Post Views: 14