ಬೆಂಗಳೂರು : ಬೆಂಗಳೂರಿನಲ್ಲಿ ಕಳೆದ 10 ತಿಂಗಳ ಅವಧಿಯಲ್ಲಿ 118 ಶಾಲಾ ವಾಹನ ಚಾಲಕರ ವಿರುದ್ಧ ಡ್ರಂಕ್ & ಡ್ರೈವ್ ಕೇಸ್ ದಾಖಲಾಗಿದೆ. ಈ ಎಲ್ಲ ಚಾಲಕರ ಡ್ರೈವಿಂಗ್ ಲೈಸನ್ಸ್ಗಳನ್ನು ರದ್ದುಪಡಿಸಲಾಗಿದೆ. ಜನವರಿಯಲ್ಲಿ 16, ಫೆಬ್ರವರಿಯಲ್ಲಿ 7, ಜುಲೈನಲ್ಲಿ 23, ಆಗಸ್ಟ್ನಲ್ಲಿ 26, ಸೆಪ್ಟೆಂಬರ್ನಲ್ಲಿ 22, ನವೆಂಬರ್ನಲ್ಲಿ 24 ಪ್ರಕರಣ ದಾಖಲಾಗಿವೆ.
ಕಳೆದ 10 ತಿಂಗಳಲ್ಲಿ 20 ಸಾವಿರಕ್ಕಿಂತ ಹೆಚ್ಚು ಶಾಲಾ ವಾಹನಗಳನ್ನು ಪರಿಶೀಲನೆ ನಡೆಸಲಾಗಿದ್ದು, ಪರಿಶೀಲನೆ ವೇಳೆ ನಿಯಮ ಮೀರಿ ಬಸ್ನಲ್ಲಿ ಹೆಚ್ಚುವರಿ ಶಾಲಾ ಮಕ್ಕಳ ಸಾಗಾಟ ಮಾಡಿರೋದು ಕೂಡ ಬೆಳಕಿಗೆ ಬಂದಿದೆ. ಈ ಕುರಿತು ಪ್ರಕರಣ ದಾಖಲಿಸಲಾಗಿದೆ.
ಕಾಂಟ್ರ್ಯಾಕ್ಟ್ ಶಾಲಾ ವಾಹನಗಳ ಚಾಲಕರಿಂದಲೇ ಹೆಚ್ಚು ರೂಲ್ಸ್ ಬ್ರೇಕ್ ಆಗಿದ್ದು, ಹಾಗಾಗಿ ಆಯಾ ಶಾಲಾ ಆಡಳಿತ ಮಂಡಳಿಗೆ ಸಂಚಾರಿ ಪೊಲೀಸರು ನೋಟಿಸ್ ನೀಡುತ್ತಿದ್ದಾರೆ. ಎಷ್ಟೇ ಕೇಸ್ ಹಾಕಿದ್ರೂ ಮತ್ತೆ ಮತ್ತೆ ಶಾಲಾ ವಾಹನ ಚಾಲಕರು ಸಿಕ್ಕಿಬಿಳ್ತಿದ್ದು, ಡಿಎಲ್ ಸಸ್ಪೆಂಡ್ ವಾರ್ನಿಂಗ್ಗೂ ಚಾಲಕರು ಡೋಂಟ್ ಕೇರ್ ಅನ್ನುತ್ತಿದ್ದಾರೆ. ಕುಡುಕ ಚಾಲಕರಿಂದ ಮಕ್ಕಳ ಸೇಫ್ಟಿ ಬಗ್ಗೆ ಪೋಷಕರಿಗೂ ಆತಂಕ ಹೆಚ್ಚಾಗಿದೆ.
ಇದನ್ನೂ ಓದಿ : ಟೀಕಿಸೋ ಭರದಲ್ಲಿ ಕುಮಾರಸ್ವಾಮಿಯನ್ನು ‘ಕರಿಯಾ’ ಎಂದು ಕರೆದ ಜಮೀರ್..!