ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಕುಡಿದು ವಾಹನ ಚಲಾಯಿಸೋದರಿಂದ ಅಪಘಾತಗಳು ಹೆಚ್ಚಾಗಿದ್ದು, ಇದಕ್ಕೆ ಕಡಿವಾಣ ಹಾಕಲು ನಗರ ಸಂಚಾರ ಪೊಲೀಸರು ದಿಟ್ಟ ಕ್ರಮವನ್ನು ತೆಗೆದುಕೊಂಡಿದ್ದಾರೆ. ನಿನ್ನೆ ಒಂದೇ ದಿನದಲ್ಲಿ 324 ಡ್ರಂಕ್ & ಡ್ರೈವ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಿನ್ನೆ ನಗರದೆಲ್ಲೆಡೆ 697 ಪೊಲೀಸ್ ಸಿಬ್ಬಂದಿಯಿಂದ 18,769ವಾಹನ ಚಾಲಕರ ತಪಾಸಣೆ ನಡೆದಿದ್ದು, ಈ ಪೈಕಿ 324 ಮಂದಿ ಮದ್ಯ ಸೇವಿಸಿ ವಾಹನ ಚಾಲನೆ ಮಾಡಿರೋದು ಪತ್ತೆಯಾಗಿದೆ. ಈ ಬಗ್ಗೆ ಬೆಂಗಳೂರು ಸಂಚಾರಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ಮಾಹಿತಿ ನೀಡಿದ್ದಾರೆ.
ಎಂಜಿ ರಸ್ತೆ, ಹೆಬ್ಬಾಳ, ಇಂದಿರಾನಗರ, ಕೋರಮಂಗಲ, ಮಲ್ಲೇಶ್ವರ, ಉಪ್ಪಾರಪೇಟೆ ಸೇರಿದಂತೆ ನಗರದದ್ಯಾಂತ ತಪಾಸಣೆ ನಡೆಸಿದ್ದಾರೆ. ಈ ಪೈಕಿ 324 ಮಂದಿ ಮದ್ಯ ಸೇವಿಸಿ ವಾಹನ ಚಾಲನೆ ಪತ್ತೆಯಾಗಿದೆ. ಒಂದೇ ರಾತ್ರಿಯಲ್ಲಿ ದಾಖಲೆಯ 324 ಡ್ರಂಕ್ & ಡ್ರೈವ್ ಕೇಸ್ ರಿಜಿಸ್ಟರ್ ಆಗಿದೆ.
ಇದನ್ನೂ ಓದಿ : ಝಿಯೂ ಹೋಮ್ಸ್ ಹೆಸರಲ್ಲಿ ನೂರಾರು ಮನೆ ಮಾಲೀಕರಿಗೆ ವಂಚಿಸಿದ್ದ ಖತರ್ನಾಕ್ ದಂಪತಿ ಅರೆಸ್ಟ್..!
Post Views: 255