Download Our App

Follow us

Home » ಸಿನಿಮಾ » ಬಹುನಿರೀಕ್ಷಿತ “ಡಬಲ್ ಇಸ್ಮಾರ್ಟ್” ಸಿನಿಮಾದ ‘ಬಿಗ್ ಬುಲ್’ ಸಾಂಗ್ ರಿಲೀಸ್..!

ಬಹುನಿರೀಕ್ಷಿತ “ಡಬಲ್ ಇಸ್ಮಾರ್ಟ್” ಸಿನಿಮಾದ ‘ಬಿಗ್ ಬುಲ್’ ಸಾಂಗ್ ರಿಲೀಸ್..!

ಟಾಲಿವುಡ್​ನ ಬಹುನಿರೀಕ್ಷಿತ ಹೈ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ “ಡಬಲ್ ಇಸ್ಮಾರ್ಟ್” ಥಿಯೇಟ್ರಿಕಲ್ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಉಸ್ತಾದ್ ರಾಮ್ ಪೋತಿನೇನಿ ಮತ್ತು ಡೈನಾಮಿಕ್ ಡೈರೆಕ್ಟರ್ ಪೂರಿ ಜಗನ್ನಾಥ್ ಜೋಡಿಯ ಈ ಚಿತ್ರವು ಆಗಸ್ಟ್ 15 ರಂದು ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದೆ.

ಇನ್ನು, ಡೈನಾಮಿಕ್ ಡೈರೆಕ್ಟರ್ ಪೂರಿ ಜಗನ್ನಾಥ್ ಅವರು ತಮ್ಮ ಸಿನಿಮಾದಲ್ಲಿ ಖಳನಾಯಕರನ್ನು ಶಕ್ತಿಶಾಲಿ ಪಾತ್ರಗಳಲ್ಲಿ ಪ್ರಸ್ತುತಪಡಿಸಲು ಹೆಸರುವಾಸಿಯಾಗಿದ್ದಾರೆ. ಅಂತೆಯೇ ಡಬಲ್ ಇಸ್ಮಾರ್ಟ್ ನಲ್ಲಿ ಮುಖ್ಯ ಖಳನಾಯಕನ ಮೇಲೆ ಹಾಡನ್ನು ತಯಾರಿಸಿದ್ದಾರೆ. ನಿನ್ನೆ ಚಿತ್ರತಂಡ ‘ಬಿಗ್ ಬುಲ್’ ಎಂಬ ವಿಶೇಷ ಹಾಡನ್ನು ಬಿಡುಗಡೆ ಮಾಡಿದ್ದು, ಈ ಹಾಡಲ್ಲಿ ಬಿಗ್ ಬುಲ್ ಪಾತ್ರವನ್ನು ಸಂಜಯ್ ದತ್ ನಿರ್ವಹಿಸಿದ್ದಾರೆ.

ಭಾಸ್ಕರಭಟ್ಲ ರವಿಕುಮಾರ್ ಅವರ ಸಾಹಿತ್ಯವು ಬಿಗ್ ಬುಲ್ ಪಾತ್ರವನ್ನು ಪರಿಚಯಸಿದೆ. ಪೃಧ್ವಿ ಚಂದ್ರ ಮತ್ತು ಸಂಜನಾ ಕಲ್ಮಂಜೆ ಅವರ ಗಾಯನವು ಹಾಡಿಗೆ ಮತ್ತಷ್ಟು ಶಕ್ತಿಯನ್ನು ತುಂಬಿದೆ. ಮಣಿ ಶರ್ಮಾ ಸಂಗೀತ ಒದಗಿಸಿದ್ದಾರೆ.

ಡಬಲ್ ಇಸ್ಮಾರ್ಟ್ ಚಿತ್ರ ಪುರಿ ಕನೆಕ್ಟ್ಸ್ ಬ್ಯಾನರ್ ಅಡಿಯಲ್ಲಿ ಪುರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್ ನಿರ್ಮಿಸಿದ್ದಾರೆ. ಸ್ಯಾಮ್ ಕೆ ನಾಯ್ಡು ಮತ್ತು ಗಿಯಾನಿ ಗಿಯಾನ್ನೆಲಿ ಕ್ಯಾಮೆರಾ ಹಿಡಿದಿದ್ದಾರೆ. ಸ್ವಾತಂತ್ರ್ಯ ದಿನದಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರವು ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ : ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ 5ನೇ ಪದಕ – ಜಾವೆಲಿನ್​ನಲ್ಲಿ ಬೆಳ್ಳಿ ಗೆದ್ದ ಚಿನ್ನದ ಹುಡುಗ ನೀರಜ್ ಚೋಪ್ರಾ..!

Leave a Comment

DG Ad

RELATED LATEST NEWS

Top Headlines

ಮಾಜಿ ಪ್ರಿಯತಮೆಗೆ ಖಾಸಗಿ ವಿಡಿಯೋ ವೈರಲ್ ಮಾಡೋದಾಗಿ ಬೆದರಿಕೆ – ಸೀರಿಯಲ್​ ನಟ ವರುಣ್​ ಆರಾಧ್ಯ ವಿರುದ್ಧ FIR..!

ಬೆಂಗಳೂರು: ಸೋಶಿಯಲ್‌ ಮೀಡಿಯಾದ ಮೂಲಕ ಫೇಮಸ್​​ ಆಗಿದ್ದ ವರ್ಷಾ ಕಾವೇರಿ ಮತ್ತು ವರುಣ್‌ ಆರಾಧ್ಯ ಕಳೆದ ವರ್ಷ ಇಬ್ಬರು ಬ್ರೇಕಪ್ ಬಗ್ಗೆ ಅಧಿಕೃತವಾಗಿ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದರು.

Live Cricket

Add Your Heading Text Here