ಹಾಸನ : ನಟ ಡಾಲಿ ಧನಂಜಯ ಅವರ ಅಜ್ಜಿ ಮಲ್ಲಮ್ಮ (95) ವಯಸ್ಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಹಾಸನದ ಅರಸೀಕೆರೆಯ ಕಾಳೇನಹಳ್ಳಿಯಲ್ಲಿರುವ ನಿವಾಸದಲ್ಲಿ ಮಲ್ಲಮ್ಮ ಮೃತಪಟ್ಟಿದ್ದಾರೆ.
ಲಿಂಗದೇವರಾಜೇಗೌಡರ ಪತ್ನಿಯಾಗಿದ್ದ ಮಲ್ಲಮ್ಮ ಅವರಿಗೆ ಒಟ್ಟು ಐವರು ಮಕ್ಕಳು. ಇವರ ಎರಡನೇ ಪುತ್ರ ಅಡವಿಸ್ವಾಮಿ ಅವರ ಮಗನೇ ಡಾಲಿ ಧನಂಜಯ್. ಮಲ್ಲಮ್ಮ ಅವರು ಪ್ರತಿ ಬಾರಿ ಚುನಾವಣಾ ಸಂದರ್ಭದಲ್ಲಿ ಮೊಮ್ಮಗ ಡಾಲಿ ಧನಂಜಯ ಜೊತೆ ತೆರಳಿ ತಪ್ಪದೇ ಮತದಾನ ಮಾಡುತ್ತಿದ್ದರು.
ಕಾಳೇನಹಳ್ಳಿಗೆ ಹೋದಾಗಲೆಲ್ಲ ಅಜ್ಜಿಯ ಜತೆಗೆ ಹೆಚ್ಚು ಸಮಯ ಕಳೆಯುತ್ತಿದ್ದರು ಧನಂಜಯ್. ಇಂದು ಸಂಜೆ (ಜುಲೈ 24) ಕಾಳೇನಹಳ್ಳಿಯಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ.
ಇದನ್ನೂ ಓದಿ : ಮಕ್ಕಳ ಸಾಹಸದ ಕಥಾನಕ ‘ಭಗವತಿ’ ಚಿತ್ರಕ್ಕೆ ಚಾಲನೆ..!
Post Views: 89