Download Our App

Follow us

Home » ಸಿನಿಮಾ » ನನಗೆ ಗೊತ್ತಿಲ್ಲದೆ ಡಿವೋರ್ಸ್ ಘೋಷಿಸಿದ್ದಾರೆ – ಜಯಂ ರವಿ ವಿರುದ್ಧ ಆರತಿ ಆಕ್ರೋಶ..!

ನನಗೆ ಗೊತ್ತಿಲ್ಲದೆ ಡಿವೋರ್ಸ್ ಘೋಷಿಸಿದ್ದಾರೆ – ಜಯಂ ರವಿ ವಿರುದ್ಧ ಆರತಿ ಆಕ್ರೋಶ..!

ನವದೆಹಲಿ : ತಮಿಳಿನ ಖ್ಯಾತ ನಟ ಜಯಂ ರವಿ ಅವರು ಪತ್ನಿ ಆರತಿಗೆ ವಿಚ್ಛೇದನ ನೀಡುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡ ಬೆನ್ನಲ್ಲೇ ‘ನನಗೆ ಗೊತ್ತಿಲ್ಲದೆ ವಿಚ್ಛೇದನ ಘೋಷಿಸಿದ್ದಾರೆ’ ಎಂದು ಆರತಿ ಅವರು ಪೋಸ್ಟ್ ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಿವೋರ್ಸ್ ಕುರಿತು ಸುದೀರ್ಘವಾಗಿ ಆರತಿ ಪತ್ರ ಬರೆದಿದ್ದಾರೆ. ಅದರಲ್ಲಿ, ಇತ್ತೀಚೆಗೆ ನಮ್ಮ ಮದುವೆ ಬಗ್ಗೆ ಸಾರ್ವಜನಿಕವಾಗಿ ಮಾಡಿದ ಘೋಷಣೆಯಿಂದ ನನಗೆ ಶಾಕ್ ಆಗಿದೆ. ಯಾಕೆಂದರೆ ನನಗೆ ಗಮನಕ್ಕೆ ತರದೆ, ನನ್ನ ಅನುಮತಿಯನ್ನು ಪಡೆಯದೆ ಇಂತಹ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. 18 ವರ್ಷಗಳ ಕಾಲ ದಾಂಪತ್ಯದ ಇತಿಹಾಸವಿರುವ ವಿಷಯವನ್ನು ಗೌರವಯುತವಾಗಿ, ಖಾಸಗಿಯಾಗಿ ಹ್ಯಾಂಡಲ್ ಮಾಡಬಹುದಿತ್ತು ಎಂದಿದ್ದಾರೆ.

‘ಇಬ್ಬರ ಕುಟುಂಬವನ್ನು ಗೌರವಿಸುವ ದೃಷ್ಟಿಯಿಂದ ನನ್ನ ಪತಿಯೊಂದಿಗೆ ನೇರವಾಗಿ ಮಾತನಾಡಲು ಹಲವಾರು ಬಾರಿ ಪ್ರಯತ್ನಿಸಿದೆ. ಆದರೆ ಬೇಸರದ ವಿಷಯವೆಂದರೆ ಪರಸ್ಪರ ಮಾತನಾಡಲು ಸಾಧ್ಯವಾಗಲೇ ಇಲ್ಲ. ಈಗ ಅವರು ಮಾಡಿರುವ ದಿಢೀರ್ ಘೋಷಣೆಯಿಂದ ನನಗೆ ಮತ್ತು ನನ್ನ ಮಕ್ಕಳಿಗೆ ಕತ್ತಲೆ ಕವಿದಂತಾಗಿದೆ. ಇದು ಒಂದು ಕಡೆಯ ನಿರ್ಧಾರವಾಗಿದೆ, ಇದರಿಂದ ನಮ್ಮ ಕುಟುಂಬಕ್ಕೆ ಯಾವ ಪ್ರಯೋಜನವಿಲ್ಲ’ ಎಂದಿದ್ದಾರೆ.

ಜಯಂ ಅವರ ಘೋಷಣೆಯಿಂದ ಹಲವು ಟ್ರೋಲ್ಗಳು ಕಾಮೆಂಟ್ಗಳು ಕೇಳಿಬಂದ ಹಿನ್ನೆಲೆ ಪ್ರತಿಕ್ರಿಯಿಸುತ್ತಿರುವುದಾಗಿ ಹೇಳಿರುವ ಆರತಿ, ‘ಈ ರೀತಿಯ ಘೋಷಣೆಯಿಂದ ಸಾರ್ವಜನಿಕವಾಗಿ ಟೀಕೆಗಳು ವ್ಯಕ್ತವಾಗಿವೆ, ಅನ್ಯಾಯವಾಗಿ ನನ್ನ ಮೇಲೆ ಆರೋಪ ಹೊರಿಸಿ ನನ್ನ ಮೇಲೆ ಸಾರ್ವಜನಿಕವಾಗಿ ಕೆಟ್ಟ ಅಭಿಪ್ರಾಯ ಮೂಡುವಂತೆ ಮಾಡಿರುವುದನ್ನು ಸಹಿಸಿಕೊಳ್ಳುವುದು ಕಷ್ಟಕರವಾಗಿದೆ’ ಎಂದಿದ್ದಾರೆ. ‘ಒಬ್ಬ ತಾಯಿಯಾಗಿ ನನಗೆ ನನ್ನ ಮಕ್ಕಳೇ ಮೊದಲ ಆದ್ಯತೆ. ಈ ನಿರ್ಧಾರ ಮಕ್ಕಳ ಮೇಲೆ ಪರಿಣಾಮ ಬೀರಲು ಅವಕಾಶ ಕೊಡುವುದಿಲ್ಲ, ಅಲ್ಲದೆ ಈ ಆಧಾರರಹಿತ ಆರೋಪಗಳನ್ನೂ ಹೀಗೆಯೇ ಬಿಡುವುದಿಲ್ಲ’ ಎಂದಿದ್ದಾರೆ.

ಇದನ್ನೂ ಓದಿ : ಇಂದು ಹೈಕೋರ್ಟ್​ನಲ್ಲಿ ಮುಡಾ ಕೇಸ್​ ವಿಚಾರಣೆ.. ಸಿಎಂ ಸಿದ್ದರಾಮಯ್ಯಗೆ ಇಂದೇ ನಿರ್ಣಾಯಕ ದಿನನಾ?

Leave a Comment

DG Ad

RELATED LATEST NEWS

Top Headlines

4 ಅಂತಸ್ತಿನ ಕಟ್ಟಡ ಕುಸಿತ – ಕೂದಲೆಳೆ ಅಂತರದಲ್ಲಿ ಪಾರಾದ ತಾಯಿ, ಮಗು..!

ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ತಾಯಿ ಮಗು ಪ್ರಾಣಾಪಾಯದಿಂದ ಪಾರಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಆಘಾತಕಾರಿ ಘಟನೆಯ ಸಂಪೂರ್ಣ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೀಡಿಯೊದಲ್ಲಿ

Live Cricket

Add Your Heading Text Here