ಧಾರವಾಡ : ಅಪರಿಚಿತ ವ್ಯಕ್ತಿಗಳ ಗ್ಯಾಂಗ್ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ಮನೆಗೆ ನುಗ್ಗಿ ಹಲ್ಲೆಗೆ ಯತ್ನಿಸಿದ್ದು, ಇದರ ಆಳವನ್ನ ಪತ್ತೆ ಹಚ್ಚುವಂತೆ ಇಸ್ಮಾಯಿಲ್ ಸಹೋದರ ಶಹರ ಪೊಲೀಸ್ ಠಾಣೆಗೆ ದೂರು ನೀಡಿರುವ ಘಟನೆ ನಡೆದಿದೆ.
ಧಾರವಾಡದಲ್ಲಿ ಅಂಜುಮನ್ ಸಂಸ್ಥೆಯನ್ನ ಕಟ್ಟಿ ಬೆಳೆಸುವ ಜೊತೆಗೆ ಸಾರ್ವಜನಿಕವಾಗಿ ಜಾತ್ಯಾತೀತ ಮನೋಭಾವನೆ ಹೊಂದಿರುವ ಇಸ್ಮಾಯಿಲ್ ಹಲ್ಲೆಗೆ ಷಢ್ಯಂತ್ರ ನಡೆದಿರುವ ಬಗ್ಗೆ ಅವರ ಸಹೋದರ ಇಕ್ಬಾಲ್ ಕಣ್ಣೀರಾಕಿದ್ದಾರೆ.
ಇಸ್ಮಾಯಿಲ್ ಹಲ್ಲೆಗೆ 10ಕ್ಕೂ ಹೆಚ್ಚು ಯುವಕರಿಂದ ಯತ್ನ ನಡೆದಿದ್ದು, ಅಂಜುಮನ್ ಸಂಸ್ಥೆಯ ಕಚೇರಿಯಲ್ಲಿಯೇ ಹಲ್ಲೆಗೆ ಗ್ಯಾಂಗ್ ಮುಂದಾಗಿತ್ತು. ಕಚೇರಿಯಲ್ಲಿ ಇಲ್ಲದೇ ಇದ್ದಾಗ ಚಾಕು ಹಿಡಿದುಕೊಂಡು ಡೈರೆಕ್ಟ್ ಆಗಿ ಇಸ್ಮಾಯಿಲ್ ಮನೆಗೆ ಬಂದ ಗ್ಯಾಂಗ್ ಕುಟುಂಸ್ಥರ ಜೊತೆ ಅಸಭ್ಯ ವರ್ತನೆ ತೋರಿದೆ. ಇನ್ನು, ಲಂಗೋಟಿ ಜಮಾದಾರ್ ಗಲ್ಲಿ, ಅಂಜುಮನ್ ಹಾಸ್ಟೆಲ್ ಬಳಿಯೂ ಹಲ್ಲೆಗೆ ಗ್ಯಾಂಗ್ ಸ್ಕೆಚ್ ಮಾಡಿಕೊಂಡಿತ್ತು ಎನ್ನಲಾಗಿದೆ.
ಈ ಘಟನೆಯ ಬಳಿಕ, ನನ್ನ ಅಣ್ಣನಿಗೆ ಏನಾದ್ರೂ ಆದ್ರೆ ಯಾರು ಹೊಣೆ? ನನ್ನ ಅಣ್ಣನಿಗೆ ರಕ್ಷಣೆ ಬೇಕು ಎಂದು ಸಹೋದರ ಇಕ್ಬಾಲ್ ಕಣ್ಣೀರು ಹಾಕಿದ್ದಾರೆ. ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ : ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್‌ನ ಚೈನ್ ಲಿಂಕ್ ಕಟ್ – ನದಿ ಪಾತ್ರದ ಜನರಲ್ಲಿ ಹೆಚ್ಚಿದ ಆತಂಕ..!