Download Our App

Follow us

Home » ಜಿಲ್ಲೆ » ಬಿಟಿವಿ ವರದಿ ಬೆನ್ನಲ್ಲೇ ಎಚ್ಚೆತ್ತ ದೇವನಹಳ್ಳಿ ತಹಶೀಲ್ದಾರ್ – ರಾತ್ರೋರಾತ್ರಿ ಜಮೀನು ಒತ್ತುವರಿ ಮಾಡಿದ್ದವರ ವಿರುದ್ಧ ಕ್ರಮ..!

ಬಿಟಿವಿ ವರದಿ ಬೆನ್ನಲ್ಲೇ ಎಚ್ಚೆತ್ತ ದೇವನಹಳ್ಳಿ ತಹಶೀಲ್ದಾರ್ – ರಾತ್ರೋರಾತ್ರಿ ಜಮೀನು ಒತ್ತುವರಿ ಮಾಡಿದ್ದವರ ವಿರುದ್ಧ ಕ್ರಮ..!

ದೇವನಹಳ್ಳಿ : ದೇವನಹಳ್ಳಿ ತಾಲೂಕು ಬೂದಿಗೆರೆ ಸಮೀಪದ ಹಿತ್ತರಹಳ್ಳಿ ಕೆರೆ ನೀರು ಮುಳುಗಡೆ ಜಮೀನು ಒತ್ತುವರಿ ಮಾಡಿದ್ದ ರಿಯಲ್ ಎಸ್ಟೇಟ್ ಕಿಂಗ್​ಪಿನ್ ಭಾಸ್ಕರ್ ರೆಡ್ಡಿ & ಗ್ಯಾಂಗ್​ ವಿರುದ್ದ ಇದೀಗ ದೇವನಹಳ್ಳಿ ತಾಲೂಕು ಆಡಳಿತ ಕ್ರಮ ಕೈಗೊಂಡಿದೆ.

ಬಿಟಿವಿ ವರದಿಯ ಬೆನ್ನಲ್ಲೇ ಎಚ್ಚೆತ್ತುಕೊಂಡ ದೇವನಹಳ್ಳಿ ತಹಶೀಲ್ದಾರ್ ಬಾಲಕೃಷ್ಣ ಅವರು, ರಾತ್ರೋರಾತ್ರಿ ಕೆರೆ ನೀರು ಮುಳುಗಡೆ ಪ್ರದೇಶ ಒತ್ತುವರಿ ಮಾಡಿದ್ದವರ ವಿರುದ್ಧ ಕ್ರಮ ಜರುಗಿಸಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಭಾಸ್ಕರ್ ರೆಡ್ಡಿ & ಗ್ಯಾಂಗ್ ಒತ್ತುವರಿ ಮಾಡಿ ನಿರ್ಮಿಸಿದ್ದ ಶೆಡ್ ಹಾಗೂ ತೆಂಗಿನ ಮರಗಳನ್ನು ಜಿಸಿಬಿಗಳ ಮೂಲಕ ತೆರವು ಮಾಡಿಸಿದ್ದಾರೆ.

ಭಾಸ್ಕರ್ ರೆಡ್ಡಿ & ಗ್ಯಾಂಗ್ ಸುಮಾರು ಎರಡು ಎಕರೆ ಜಮೀನನ್ನು ಒತ್ತುವರಿ ಮಾಡಿದ್ದಲ್ಲದೇ, ಇದನ್ನು ಕೇಳಲು ಬಂದ ರೈತರ ಮೇಲೆ ಹಲ್ಲೆಗೆ ಯತ್ನಿಸಿತ್ತು. ಈ ಕುರಿತು ಬಿಟಿವಿ ನ್ಯೂಸ್ ಸಮಗ್ರ ವರದಿ ಮಾಡಿತ್ತು.

ಆ ಬಳಿಕ ಎಚ್ಚೆತ್ತುಕೊಂಡ ದೇವನಹಳ್ಳಿ ತಾಲ್ಲೂಕು ಆಡಳಿತ, ಒತ್ತುವರಿದಾರರ ವಿರುದ್ಧ ಕಂದಾಯ ಇಲಾಖೆಯಿಂದ ಎಫ್ಐಆರ್ ದಾಖಲಿಸಿತ್ತು. ಹಾಗೆಯೇ ಇಂದು ಬೆಳ್ಳಂಬೆಳಗ್ಗೆ ದೇವನಹಳ್ಳಿ ತಹಶೀಲ್ದಾರ್ ಬಾಲಕೃಷ್ಣ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಭಾಸ್ಕರ್ ರೆಡ್ಡಿ ಗ್ಯಾಂಗ್​ ನಿರ್ಮಿಸಿದ್ದ ಶೆಡ್​ನ್ನು ತೆರವು ಮಾಡಿಸಿದ್ದಾರೆ.

ಇದನ್ನೂ ಓದಿ : ಜಾತಿ ನಿಂದನೆ ಕೇಸ್ : ಬಿಜೆಪಿ ಶಾಸಕ ಮುನಿರತ್ನ ಧ್ವನಿ ಎಂದು FSL ವರದಿಯಲ್ಲಿ ಧೃಡ..!

Leave a Comment

DG Ad

RELATED LATEST NEWS

Top Headlines

ನಟ ದರ್ಶನ್​ಗೆ ನಾಳೆ ನಿರ್ಣಾಯಕ ದಿನ – ಏನಾಗಲಿದೆ ಬೇಲ್ ಭವಿಷ್ಯ?

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A2 ಆರೋಪಿಯಾಗಿರುವ ನಟ ದರ್ಶನ್​​ಗೆ ನಾಳೆ ನಿರ್ಣಾಯಕ ದಿನವಾಗಿದೆ. ಮಧ್ಯಂತರ ಜಾಮೀನು ಪಡೆದು ಜೈಲಿಂದ ಹೊರಗೆ ಬಂದಿರುವ ನಟ ದರ್ಶನ್ ಸದ್ಯ

Live Cricket

Add Your Heading Text Here