Download Our App

Follow us

Home » ಜಿಲ್ಲೆ » ನಂಜುಂಡೇಶ್ವರನ ಹುಂಡಿಗೆ ಭಕ್ತರಿಂದ ವಿಚಿತ್ರ ಬೇಡಿಕೆಯ ಪತ್ರ – ಎಲ್ಲೆಡೆ ವೈರಲ್​..!

ನಂಜುಂಡೇಶ್ವರನ ಹುಂಡಿಗೆ ಭಕ್ತರಿಂದ ವಿಚಿತ್ರ ಬೇಡಿಕೆಯ ಪತ್ರ – ಎಲ್ಲೆಡೆ ವೈರಲ್​..!

ಮೈಸೂರು : ನಂಜುಂಡೇಶ್ವರ ಸ್ವಾಮಿಗೆ ಭಕ್ತರೊಬ್ಬರು ವಿಚಿತ್ರವಾದ ಬೇಡಿಕೆ ಪತ್ರ ಬರೆದಿದ್ದು, ಈ ಪತ್ರ ಇದೀಗ ಎಲ್ಲೆಡೆ ವೈರಲ್​ ಆಗ್ತಿದೆ. ಕೋಟಿ ಕೋಟಿ ಹಣ ಸಂಗ್ರಹಿಸುವ ನಂಜುಂಡೇಶ್ವರನ ಹುಂಡಿಯಲ್ಲಿ ಪತ್ರಗಳ ಸರಮಾಲೆಯೆ ಬರುತ್ತವೆ. ಆದರೆ ಇಲ್ಲೊಂದು ವಿಚಿತ್ರ ವಿರಾಳತೀತ ಕೋರಿಕೆ ಪತ್ರ ಸಿಕ್ಕಿದೆ.

ಪತ್ರದಲ್ಲಿ ನಿನ್ನ ನೋಡಲು ಬರುವ ಲಕ್ಷಾಂತರ ಭಕ್ತರಿಗೆ ಕೆಟ್ಟ ವ್ಯವಸ್ಥೆ ಇದೆ. ನಾವು ಬಹಳ ದೂರದಿಂದ ಪ್ರತಿ ಹುಣ್ಣಿಮೆ, ವಿಶೇಷ ದಿನಗಳಲ್ಲಿ ಬರುತ್ತೇವೆ. ನಿನ್ನ ನೋಡಲು ಬರುವಾಗ ತುಂಬಾ ಕಷ್ಟವಾಗುತ್ತಿದೆ. ರಾತ್ರಿ ಮಲಗುವುದಕ್ಕೆ ಚಿಕ್ಕ ಜಾಗವೂ ಇರುವುದಿಲ್ಲ. ಬೆಳಿಗ್ಗೆ ಸ್ನಾನಕ್ಕೆ ಕಪಿಲಾ ನದಿಗೆ ಹೋದರೆ ಎಲ್ಲಿ ನೋಡಿದರೂ ಕಸದ ರಾಶಿ, ಸ್ನಾನ ಮಾಡಿದರೆ ನನ್ನ ಮಡದಿಗೆ, ತಾಯಿಗೆ ಬಟ್ಟೆ ಬದಲಿಸಲೂ ಜಾಗವಿಲ್ಲ. ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ಪತ್ರ ಬರೆದು ಸಾಕಾಗಿದೆ. ನಮ್ಮಂತಹ ಲಕ್ಷಾಂತರ ಭಕ್ತರಿಗೆ ಕೆಟ್ಟ ವ್ಯವಸ್ಥೆಯಿಂದ ಪರಿಹಾರ ಕೊಡು. ಭಕ್ತರಿಗೆ ಆಡಳಿತ ಮಂಡಳಿ ಮೂಲಭೂತ ಸೌಕರ್ಯ ಕಲ್ಪಿಸುತ್ತಿಲ್ಲ. ದೇವಾಲಯದ ಸಿಬ್ಬಂದಿ ಭಕ್ತರನ್ನ ನಿಕೃಷ್ಟವಾಗಿ ಕಾಣುತ್ತಿದ್ದಾರೆ. ವಸತಿ ಸಂಕೀರ್ಣ ನಿರ್ಮಿಸಲು ಆಡಳಿತ ಮಂಡಳಿಗೆ ಪ್ರೇರಣೆ ನೀಡು ಎಂದು ಪತ್ರ ಬರೆದಿದ್ದಾರೆ.

ಇನ್ನೊಂದು ಪತ್ರದಲ್ಲಿ, “ಅಸಂಖ್ಯಾತ ಭಕ್ತರನ್ನು ಹೊಂದಿರುವ ನಿನಗೆ ಪ್ರತಿ ತಿಂಗಳು ಕೋಟ್ಯಂತರ ಹಣ ನಿನ್ನ ಮಡಿಲಿಗೆ ಹಾಕುತ್ತಿದ್ದಾರೆ. ದೇವಾಲಯಕ್ಕೆ ಬರುವ ಭಕ್ತರಿಗೆ ಆಡಳಿತ ಮಂಡಳಿಯಿಂದ ಮೂಲ ಸೌಕರ್ಯ ದೊರೆಯುತ್ತಿಲ್ಲ ಎಂಬ ಯಾತನೆ ಹಾಗೂ ತಳಮಳ ತರುವ ವಿಷಯವಾಗಿದೆ. ಭಕ್ತರು ತಂಗಲು ವ್ಯವಸ್ಥೆ ಇಲ್ಲ ಎಂಬ ಕೊರಗು ಇದೆ. ಇನ್ನು ದೇವಾಲಯದ ಸಿಬ್ಬಂದಿಗಳು ಭಕ್ತರನ್ನು ನಿಕೃಷ್ಟವಾಗಿ ಕಾಣುತ್ತಿದ್ದಾರೆ. ಅವರಿಗೆ ಒಳ್ಳೆಯ ಬುದ್ದಿ ಕೊಡು. ಭಕ್ತರಿಂದ ಸಂಗ್ರಹವಾಗುವ ದೇಣಿಗೆ ಹಣದಲ್ಲಿ ವಸತಿ ಸಂಕೀರ್ಣ ನಿರ್ಮಿಸುವುದಾಗಿ ಹೇಳಿದ್ದರು. ಇದೀಗ ವಸತಿ ಸಂಕೀರ್ಣಕ್ಕೆ ಜಾಗವಿಲ್ಲ ಎಂದು ಹೇಳುತ್ತಿರುವ ಆಡಳಿತ ಮಂಡಳಿಗೆ ವಸತಿ ಸಂಕೀರ್ಣ ನಿರ್ಮಿಸಲು ಪ್ರೇರಣೆ ನೀಡು ಹಾಗೂ ವಿವೇಕ ನೀಡು. ವಿಶೇಷ ದಿನಗಳಲ್ಲಿ ಬರುವ ಭಕ್ತರು ಪಡುವ ಕಷ್ಟಗಳನ್ನು ಅಧಿಕಾರಿಗಳು ನೋಡಿದರೆ ಅವರಿಗೆ ವಾಸ್ತವಾಂಶ ಅರಿವಾಗಲಿದೆ. ಹಾಗಾಗಿ ತುರ್ತಾಗಿ ವಸತಿ ಸಂಕೀರ್ಣ ನಿರ್ಮಿಸುವ ಯೋಜನೆಗೆ ಚಾಲನೆ ನೀಡಲು ಅವರಿಗೆ ಬುದ್ಧಿ ಕೊಡು ಎಂದು ಶ್ರೀಕಂಠೇಶ್ವರನಾದ ನಿಮ್ಮ ಬಳಿ ಪ್ರಾರ್ಥಿಸಿಕೊಳ್ಳುತ್ತೇನೆ. ಇಂತಿ ಪರಮ ಭಕ್ತ” ಎಂದು ಬರೆದಿದ್ದಾರೆ.

ಇದನ್ನೂ ಓದಿ : ದಿಗಂತ್-ಧನ್ಯಾರಾಮ್‌ ನಟನೆಯ ‘ಪೌಡರ್’ ಚಿತ್ರದ ಟ್ರೇಲರ್ ರಿಲೀಸ್..!

Leave a Comment

DG Ad

RELATED LATEST NEWS

Top Headlines

ದರ್ಶನ್​​ ಮನೆ ಊಟ ಕೋರಿ ಸಲ್ಲಿಸಿದ್ದ ಅರ್ಜಿ ವಾಪಸ್​​..!

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಜೈಲು ಸೇರಿರುವ ನಟ ದರ್ಶನ್​​ ಮನೆ ಊಟ ಕೋರಿ ಸಲ್ಲಿಸಿದ್ದ ಅರ್ಜಿ ವಾಪಸ್​​ ಪಡೆದಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ

Live Cricket

Add Your Heading Text Here