Download Our App

Follow us

Home » ರಾಜಕೀಯ » ಮುಡಾ ಫೈಟ್​ ಹೊತ್ತಲ್ಲೇ ಮತ್ತೆ ಸಿಎಂ ಕನಸು ಬಿಚ್ಚಿಟ್ಟ ಡಿಸಿಎಂ ಡಿಕೆಶಿ – ಹೇಳಿದ್ದೇನು?

ಮುಡಾ ಫೈಟ್​ ಹೊತ್ತಲ್ಲೇ ಮತ್ತೆ ಸಿಎಂ ಕನಸು ಬಿಚ್ಚಿಟ್ಟ ಡಿಸಿಎಂ ಡಿಕೆಶಿ – ಹೇಳಿದ್ದೇನು?

ರಾಮನಗರ : ತಿಂಗಳಾಂತ್ಯದ ಶನಿವಾರದಲ್ಲಿ ಕ್ಷೇತ್ರ ಪ್ರವಾಸ ಹಮ್ಮಿಕೊಂಡಿದ್ದ ಡಿಸಿಎಂ ಡಿ.ಕೆ ಶಿವಕುಮಾರ್‌ ಅವರು ಕಾರ್ಯಕ್ರಮದ ಭಾಷಣವೊಂದರಲ್ಲಿ ಮಾತನಾಡುತ್ತಾ ಸಿಎಂ ಆಗುವ ಕನಸು ಬಿಚ್ಚಿಟ್ಟಿದ್ದಾರೆ. ನಿನ್ನೆ ಡಿಸಿಎಂ ಡಿಕೆ ಶಿವಕುಮಾರ್‌, ಸಾತನೂರು ಬಳಿ ಜನಸ್ಪಂದನಾ ಸಭೆ ನಡೆಸಿ, ಕ್ಷೇತ್ರದ ಜನರ ಕುಂದುಕೊರತೆಗಳನ್ನು ಆಲಿಸಿದರು.

ಇದೇ ವೇಳೆ ವೇದಿಕೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಕನಕಪುರದ ಜನ ನನಗೆ ಆಶೀರ್ವಾದ ಮಾಡಿದ್ದಾರೆ. ನಾನು ರಾಜ್ಯಕ್ಕೆ ಸೇವೆ ಮಾಡಬೇಕು ಅಂತ ದೊಡ್ಡ ಪ್ರಯತ್ನ, ಹೋರಾಟ ಆಗ್ತಿದೆ. ಜನರ ಹಾರೈಕೆ, ಆಶೀರ್ವಾದಿಂದ ಶುಭ ಘಳಿಗೆ ಬರಲಿದೆ. ಮುಂದೆ ಅಂತಾ ದಿನಗಳನ್ನೂ ಕಾಣುತ್ತೇನೆ. ಸದ್ಯ ನಾನು ಇಲ್ಲಿ ಡಿಸಿಎಂ ಆಗಿ ಬಂದಿಲ್ಲ, ನಿಮ್ಮ ಶಾಸಕನಾಗಿ ಬಂದಿದ್ದೇನೆ. ಡಿಸಿಎಂ ಏನಿದ್ರೂ ವಿಧಾನಸೌಧದಲ್ಲಿ. ಇಲ್ಲಿ ನೀವೆಲ್ಲ ನಮ್ಮ ಮನೆ ಮಕ್ಕಳು ಎಂದು ಹೇಳಿದ್ದಾರೆ.

ಸದ್ಯ ಮುಡಾ ಹಗರಣದಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಡ ಮತ್ತು ರಾಜ್ಯದಲ್ಲಿ ಸಿಎಂ ಸ್ಥಾನದ ಜಟಾಪಟಿ ನಡೆಯುತ್ತಿರುವ ಹೊತ್ತಲ್ಲೇ ಡಿಸಿಎಂ ಡಿಕೆಶಿ  ಹೇಳಿದ ಮಾರ್ಮಿಕ ಮಾತಿನ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗಳಾಗುತ್ತಿವೆ. ರಾಜ್ಯದಲ್ಲಿ ಸಿಎಂ ಬದಲಾವಣೆ ಆಗುತ್ತಾ? ಡಿಸಿಎಂ ಡಿಕೆಶಿ ಮಾತಿನ ಮರ್ಮ ಏನು? ಸಿಎಂ ಸ್ಥಾನಕ್ಕೆ ಪ್ರಯತ್ನ, ಹೋರಾಟ ನಡೀತಿದೆಯಾ.? ಎಂಬೆಲ್ಲ ರೀತಿಯಲ್ಲಿ ಜನ ಚರ್ಚೆ ಮಾಡುತ್ತಿದ್ದಾರೆ.

ಇದನ್ನೂ ಓದಿ : ಮುಡಾ ಕೇಸ್ ​: ಸಿಎಂ ಸಿದ್ದರಾಮಯ್ಯ ವಿರುದ್ಧ EDಗೂ ದೂರು ನೀಡಿದ ಸ್ನೇಹಮಯಿ ಕೃಷ್ಣ..!

Leave a Comment

DG Ad

RELATED LATEST NEWS

Top Headlines

4 ಅಂತಸ್ತಿನ ಕಟ್ಟಡ ಕುಸಿತ – ಕೂದಲೆಳೆ ಅಂತರದಲ್ಲಿ ಪಾರಾದ ತಾಯಿ, ಮಗು..!

ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ತಾಯಿ ಮಗು ಪ್ರಾಣಾಪಾಯದಿಂದ ಪಾರಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಆಘಾತಕಾರಿ ಘಟನೆಯ ಸಂಪೂರ್ಣ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೀಡಿಯೊದಲ್ಲಿ

Live Cricket

Add Your Heading Text Here