ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಇದೀಗ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷಗಳ ನಡುವೆ ಪರಸ್ಪರ ಭ್ರಷ್ಟಾಚಾರ ಆರೋಪ ಪ್ರತ್ಯಾರೋಪದ ತಿಕ್ಕಾಟ ಜೋರಾಗಿದೆ. ದಾಖಲೆಗಳನ್ನು ಮುಂದಿಟ್ಟುಕೊಂಡು ಪರಸ್ಪರ ಅಕ್ರಮಗಳ ಆರೋಪಗಳನ್ನು ಮಾಡಲಾಗುತ್ತಿದೆ. ಆ ಮೂಲಕ ಬಿಜೆಪಿ-ಕಾಂಗ್ರೆಸ್ ಪಕ್ಷದವರು ಒಬ್ಬರ ಮೇಲೊಬ್ಬರಂತೆ ಅಕ್ರಮಗಳ ಪ್ರತ್ಯಾಸ್ತ್ರಗಳನ್ನು ಛೂ ಬಿಡುತ್ತಿದ್ದಾರೆ. ಈ ಬೆನ್ನಲ್ಲೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ಈಗಾಗಲೇ ಭೂಸ್ವಾಧೀನ ಮಾಡಿಕೊಂಡಿರುವ ಜಮೀನನ್ನು ಡಿನೋಟಿಫಿಕೇಷನ್ ಮಾಡದಂತೆ ಡಿ.ಕೆ ಶಿವಕುಮಾರ್ ತಾಕೀತು ಮಾಡಿದ್ದಾರೆ.
ನನ್ನ ಗಮನಕ್ಕೆ ಬರದೇ ಯಾವ್ದೇ ಡಿನೋಟಿಫಿಕೇಷನ್ ಆಗಬಾರದು, ಬಿಡಿಎ ಸ್ವಾಧೀನಕ್ಕೆ ಪಡೆದ ಒಂದಿಂಚೂ ಡಿನೋಟಿಫೈ ಆಗಬಾರದು. ನನ್ನ ಜತೆ ಪತ್ರ ವ್ಯವಹಾರ ನಡೆಸಬೇಕು ಎಂದು ಡಿಸಿಎಂ ಡಿ.ಕೆ ಶಿವಕುಮಾರ್ BDAಗೆ ಖಡಕ್ ಆದೇಶ ಕೊಟ್ಟಿದ್ದಾರೆ.
ಬದಲಿ ಸೈಟ್ಗಳ ಹಂಚಿಕೆ-ಹರಾಜು ಬಗ್ಗೆಯೂ ನನ್ನ ಗಮನಕ್ಕೆ ತರ್ಬೇಕು, ನನ್ನ ಗಮನಕ್ಕೆ ಬಾರದೆ ಏನಾದ್ರು ನಡೆದ್ರೆ ಗ್ರಹಚಾರ ನೆಟ್ಟಗಿರೋಲ್ಲ ಎಂದು ಬಿಡಿಎ ಆಡಳಿತಕ್ಕೆ ಡಿಸಿಎಂ ಡಿಕೆಶಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಡಿಸಿಎಂ ಕಚೇರಿಯಿಂದ ಹೊರಬಿದ್ದಿರೋ ಆದೇಶದ ಪ್ರತಿ ಬಿಟಿವಿಗೆ ಲಭ್ಯವಾಗಿದೆ.
ಇದನ್ನೂ ಓದಿ : ವೀಕ್ಷಕರಿಗೆ ಗುಡ್ ನ್ಯೂಸ್ - ‘ಬಿಗ್ ಬಾಸ್’ ಟೀಮ್ ಜೊತೆ ಬಿಗ್ ಅಪ್ಡೇಟ್ ಹೊತ್ತು ತರ್ತಿದ್ದಾರೆ ಸುದೀಪ್.. ಏನದು?