ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿದ್ದು, ಜಿದ್ದಾಜಿದ್ದಿನ ಬೈ ಎಲೆಕ್ಷನ್ ಫಲಿತಾಂಶಕ್ಕೆ ಕೇವಲ ಒಂದು ದಿನ ಮಾತ್ರ ಬಾಕಿ ಉಳಿದಿದೆ. ಆದರೆ ರಾಜಕೀಯ ಜಂಜಾಟ ಎಲ್ಲವನ್ನು ಬದಿಗಿಟ್ಟು, ಡಿಸಿಎಂ ಡಿಕೆಶಿ ಅವರು ಮನಶಾಂತಿಗಾಗಿ ಪ್ರವಾಸ ಕೈಗೊಂಡಿದ್ದಾರೆ.
ಒಂದು ಬಾರಿ ರಾಜಕೀಯ ಜೀವನಕ್ಕೆ ಎಂಟ್ರಿ ಕೊಟ್ಟರೇ ಮುಗಿತು. ಪ್ರತಿ ನಿತ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗಳು, ಪತಿಪಕ್ಷಗಳ ಆರೋಪಗಳು ನಡೆಯುತ್ತಲೇ ಇರುತ್ತದೆ. ಈ ಮಧ್ಯೆ ರಾಜಕೀಯ ನಾಯಕರು ತಮ್ಮ ಫ್ಯಾಮಿಲಿಗೆ ಸಮಯ ಕೊಡುವುದು ಬಹಳ ಕಡಿಮೆ ಎಂದೇ ಹೇಳಬಹುದು. ಆದ್ರೆ ರಾಜಕೀಯ ಜೀವನದ ನಡುವೆಯು ತಮ್ಮ ಫ್ಯಾಮಿಲಿ ಸಮಯ ಮೀಸಲಿಟ್ಟು ಕುಟುಂಬದ ಜೊತೆ ಟೈಮ್ ಸ್ಪೆಂಡ್ ಮಾಡುವ ರಾಜಕೀಯ ನಾಯಕರಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಅಗ್ರ ಸ್ಥಾನದಲ್ಲಿದ್ದಾರೆ.
ಹೌದು, ರಾಜಕೀಯ ತಲೆಬಿಸಿಯನ್ನು ಬದಿಗಿರಿಸಿ ಡಿಸಿಎಂ ಡಿಕೆಶಿಯವರು ಫ್ಯಾಮಿಲಿ ಜೊತೆ ಕರಾವಳಿ ಸಮುದ್ರ ತೀರದಲ್ಲಿ ಫುಲ್ ಜಾಲಿ ಮಾಡುತ್ತಿದ್ದಾರೆ. ಪತ್ನಿ ಉಷಾ ಜೊತೆ ಸಮುದ್ರ ದಂಡೆಯಲ್ಲಿ ಸಂಚಾರಿಸಿದ ಡಿಕೆ ಶಿವಕುಮಾರ್ ಅವರು, ಸಮುದ್ರ ತೀರ ಸಂಚಾರದ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ‘ಸಮುದ್ರ ತೀರಕ್ಕೆ ಬಂದ್ಮೇಲೆ ಮನಶಾಂತಿ ಸಿಕ್ಕಿದೆ’ ಎಂದು ಟ್ವೀಟ್ ಮಾಡಿದ್ದಾರೆ.
ಕರಾವಳಿಯಲ್ಲಿ ಕಳೆದ ಕ್ಷಣಗಳನ್ನು ಹಂಚಿಕೊಂಡ ಡಿ.ಕೆ.ಶಿವಕುಮಾರ್, ಸಮುದ್ರಕ್ಕೆ ಎಂತಹ ಆಯಾಸ, ಬೇಸರ ದೂರ ಮಾಡೋ ಶಕ್ತಿ ಇದೆಯಂತೆ. ಇದು ನಿಜ, ನಿರಂತರ ಕಾರ್ಯಕ್ರಮಗಳ ಮಧ್ಯೆ ಮುರುಡೇಶ್ವರ ಬೀಚ್ಗೆ ಬಂದಿದ್ದೆ. ಪತ್ನಿ ಉಷಾ ಅವರೊಂದಿಗೆ ಭೇಟಿ ನೀಡಿ, ಸಮಯ ಕಳೆದೆ. ಸಮುದ್ರ ದಂಡೆಯಲ್ಲಿ ಕಾಲ ಕಳೆದ ನಂತರ ಸ್ವಲ್ಪ ಮನಶಾಂತಿ ಸಿಕ್ಕಿದೆ ಎಂದು ಬರೆದುಕೊಂಡಿದ್ದಾರೆ.
ಇನ್ನು ನೇತ್ರಾಣಿ ದ್ವೀಪದಲ್ಲಿ ಸಚಿವ ಮಂಕಾಳ ವೈದ್ಯ ಕೂಡಾ ಜೊತೆಗಿದ್ದರು. ನಿಸರ್ಗಕ್ಕೆ ಹತ್ತಿರವಾಗಿರುವ ಈ ಐಲ್ಯಾಂಡ್‌ಗೆ ಪಾರಿವಾಳ ದ್ವೀಪ ಅಂತಾರೆ. ಸ್ಕೂಬಾ ಡೈವಿಂಗ್‌ಗೆ ನೇತ್ರಾಣಿ ದ್ವೀಪ ಅತ್ಯುತ್ತಮ ಸ್ಥಳವಾಗಿದ್ದು, ಪಾರಿವಾಳಗಳಿಗೆ ಆಶ್ರಯ ತಾಣವೂ ಹೌದು. ಪ್ರಶಾಂತವಾದ ಈ ದ್ವೀಪ ಮನಸ್ಸಿಗೆ ಆಹ್ಲಾದಕರ ಅನುಭವ ನೀಡಿದೆ ಎಂದು ಡಿ.ಕೆ.ಶಿವಕುಮಾರ್ ಕರಾವಳಿಯಲ್ಲಿ ಕಳೆದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : ನಾನು ಸರ್ಕಾರ ಬಿದ್ದೋಗುತ್ತೆ ಅಂತಾ ಎಲ್ಲೂ ಹೇಳಿಲ್ಲ- ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ..!