ಬೆಂಗಳೂರು : ಮಾಜಿ ಸಚಿವ ವಿ.ಸೋಮಣ್ಣನವರ ದೆಹಲಿ ಭೇಟಿಗೆ ಡೇಟ್ ಫಿಕ್ಸ್ ಆಗಿದ್ದು, ವಿ.ಸೋಮಣ್ಣನವರು ಜನವರಿ 8ರಂದು ದೆಹಲಿಗೆ ಹೋಗಲಿದ್ದಾರೆ.
ವಿ.ಸೋಮಣ್ಣ ಮೂರು ದಿನ ದೆಹಲಿಯಲ್ಲಿರಲಿದ್ದು, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಜತೆಗೂ ಮಾತುಕತೆ ನಡೆಸಲಿದ್ದಾರೆ. ಸೋಮಣ್ಣ ಪ್ರಧಾನಿ ಮೋದಿಯವರ ಭೇಟಿಗೂ ಯತ್ನಿಸಲಿದ್ದಾರೆ.
ಸೋಮಣ್ಣ ಅಸೆಂಬ್ಲಿ ಎಲೆಕ್ಷನ್ನಲ್ಲಿ ಎರಡು ಕ್ಷೇತ್ರದಲ್ಲಿ ನಿಂತು ಸೋತಿದ್ದರು. ಸೋಮಣ್ಣನವರು ಸೋಲಿಗೆ ಕಾರಣವಾದ ಅಂಶಗಳನ್ನು ವರಿಷ್ಠರಿಗೆ ತಿಳಿಸಲಿದ್ದಾರೆ. ವರಿಷ್ಠರ ಭೇಟಿ ನಂತರ ರಾಜಕೀಯ ತೀರ್ಮಾನ ಸಾಧ್ಯತೆಗಳಿವೆ. ಇದೇ ವೇಳೆ ಲೋಕಸಭೆ ಎಲೆಕ್ಷನ್ ಬಗ್ಗೆಯೂ ವರಿಷ್ಠರ ಜತೆ ಚರ್ಚೆ ಸಾಧ್ಯತೆಗಳಿವೆ. ಸೋಮಣ್ಣ ಸ್ಪರ್ಧೆ ವಿಚಾರ ತುಮಕೂರು ಕ್ಷೇತ್ರದಿಂದ ಕೇಳಿ ಬರ್ತಿದೆ.
ಇದನ್ನೂ ಓದಿ : ಇಂದು ಶ್ರೀಕಾಂತ್ ಪೂಜಾರಿ ಬೇಲ್ ಭವಿಷ್ಯ..
Post Views: 140