Download Our App

Follow us

Home » ಸಿನಿಮಾ » ಮಾಸ್ ಆಗಿ ಎಂಟ್ರಿ ಕೊಟ್ಟ ಧರ್ಮ ಕೀರ್ತಿರಾಜ್ – ‘ದಾಸರಹಳ್ಳಿ’ ಚಿತ್ರದ ಟ್ರೇಲರ್ ಔಟ್..!

ಮಾಸ್ ಆಗಿ ಎಂಟ್ರಿ ಕೊಟ್ಟ ಧರ್ಮ ಕೀರ್ತಿರಾಜ್ – ‘ದಾಸರಹಳ್ಳಿ’ ಚಿತ್ರದ ಟ್ರೇಲರ್ ಔಟ್..!

ನಟ ಧರ್ಮ ಕೀರ್ತಿರಾಜ್ ಮುಖ್ಯಭೂಮಿಕೆಯಲ್ಲಿರುವ ದಾಸರಹಳ್ಳಿ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಮಾಸ್ ಪ್ರಿಯರಿಗೊಂದು ಕಿಕ್ಕೇರಿಸುವಂತ ಟ್ರೇಲರ್ ಇದಾಗಿದ್ದು, ಟ್ರೇಲರ್​​ನಲ್ಲಿ ಮಾಸ್ ಎಲಿಮೆಂಟ್ಸ್ ಎದ್ದು ಕಾಣಿಸುತ್ತಿದೆ. ಪಿ.ಉಮೇಶ ನಿರ್ಮಾಣದ ಎಂ. ಆರ್. ಶ್ರೀನಿವಾಸ್ ನಿರ್ದೇಶನದ ದಾಸರಹಳ್ಳಿ ಟ್ರೇಲರ್ ಲಾಂಚ್ ವೇಳೆ ಸಿನಿಮಾದ ಹಿರಿಯ ಕಲಾವಿದರು ಕೂಡ ಭಾಗಿಯಾಗಿದ್ದರು.

ಈ ವೇಳೆ ನಿರ್ದೇಶಕ ಎಂ. ಆರ್. ಶ್ರೀನಿವಾಸ್ ಅವರು, ‘ತಾಯಿ ಸಪೋರ್ಟ್ ಇದ್ದರು ತಂದೆ ಸಪೋರ್ಟ್ ಇಲ್ಲದೆ ಹೋದರೆ ಮಕ್ಕಳು ಏನಾಗುತ್ತವೆ ಎಂಬ ಸ್ಪಷ್ಟ ಸಂದೇಶವನ್ನ ಇದರಲ್ಲಿ ಹೇಳಲಾಗಿದೆ. ಮಕ್ಕಳು ಫೀಸ್ ಕಟ್ಟುವುದಕ್ಕೂ ಆಗದೆ ಕಳ್ಳತನಕ್ಕೆ ಇಳಿಯುವುದು ಸೇರಿ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಆಗ ನಾಯಕ ನಟ ಆ ದಾಸರಹಳ್ಳಿಯನ್ನ ಹೇಗೆ ಮೆಟ್ರೋ ರೇಂಜಿಗೆ ತೆಗೆದುಕೊಂಡು ಹೋಗ್ತಾನೆ ಅನ್ನೋದು ಸಿನಿಮಾದಲ್ಲಿ ಅದ್ಭುತವಾಗಿ ತೋರಿಸಲಾಗಿದೆ. ತುಂಬಾ ಕಷ್ಟಪಟ್ಟು ಸಿನಿಮಾವನ್ನು ಮಾಡಿದ್ದೀವಿ. ದೊಡ್ಡ ಕಲಾವಿದರು ನಮ್ಮ ಸಿನಿಮಾದಲ್ಲಿದ್ದಾರೆ. ಥ್ರಿಲ್ಲರ್ ಮಂಜು ಸರ್, ಕೌರವ ವೆಂಕಟೇಶ್ ಸರ್ ನಟನೆ ಮಾಡಿ, ಕೆಲಸವನ್ನು ಮಾಡಿದ್ದಾರೆ‌. ಈ ಸಿನಿಮಾವನ್ನು ನೀವೆಲ್ಲಾ ಗೆಲ್ಲಿಸಬೇಕು. ನಮಗೆ ಬೆನ್ನೆಲುಬಾಗಿ ಉಮೇಶ್ ಸರ್ ಜೊತೆಗೆ ನಿಂತಿದ್ದಾರೆ’ ಎಂದಿದ್ದಾರೆ.

ಈ ಸಿನಿಮಾ ತಂಡದವರು ಒಂದು ಹೆಮ್ಮೆಯ ಕೆಲಸ ಮಾಡಿದ್ದಾರೆ. ಅನ್ನ ಹಾಕೋನು ರೈತ.. ದೇಶ ಕಾಯೋನು ಯೋಧ. ಇವತ್ತು ಅವರನ್ನ ವೇದಿಕೆ ಮೇಲೆ ಕರೆಸಿರುವುದು ತುಂಬಾ ಖುಷಿ ಇದೆ. ಪಿ.ಉಮೇಶ್ ಅವರು ಹಾಗೂ ನಿರ್ದೇಶಕರ ಒಳ್ಳೆ ಸಿನಿಮಾ ಮಾಡಿದ್ದಾರೆ. ಕಷ್ಟ ಪಟ್ಟು ಎಲ್ಲಾ ಕಲಾವಿದರನ್ನು ಸೇರಿಸಿದ್ದಾರೆ. ನಮ್ಮ ಹಳೆಯ ಗೆಳೆಯರೆಲ್ಲಾ ಒಂದೇ ಸಿನಿಮಾದಲ್ಲಿ ಸಿಕ್ಕಿದ್ದಾರೆ. ಇವತ್ತು ನಿರ್ಮಾಪಕ, ನಿರ್ದೇಶಕ, ತಾಂತ್ರಿಕ ವರ್ಗ ಇದ್ದರೆ ಮಾತ್ರ ಒಬ್ಬ ಕಲಾವಿದ. ಅವರೆಲ್ಲಾ ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ. ನೀವೆಲ್ಲ ಥಿಯೇಟರ್ ಗೆ ಹೋಗಿ ನೋಡಿದರೆ ಖಂಡಿತ ಸಿನಿನಾ ಇಷ್ಟವಾಗುತ್ತೆ ಎಂದು ಹಿರಿಯ ನಟ ಉಮೇಶ್ ಹೇಳಿದ್ದಾರೆ.

ನಟ ಧರ್ಮ ಕೀರ್ತಿರಾಜ್ ಅವರು, ‘ಉಮೇಶ್ ಸರ್ ನಂಗೆ ಮೊದಲಿನಿಂದ ಪರಿಚಯವಿದ್ರು. ನಾನೊಂದು ಸಿನಿಮಾ ಮಾಡ್ತಾ ಇದ್ದೀನಿ ನೀವೂ ಅದರಲ್ಲಿ ಮುಖ್ಯ ಪಾತ್ರದಲ್ಲಿ ಇರಬೇಕು ಅಂದ್ರು. ನಾನು ಕೂಡ ಖುಷಿಯಿಂದ ಒಪ್ಪಿಕೊಂಡೆ. ಈ ಸಿನಿಮಾದಲ್ಲಿ ಒಂದೊಳ್ಳೆ ಮೆಸೇಜ್ ಇದೆ. ಕುಡಿತದಿಂದ ಏನಾಗುತ್ತೆ ಎಂಬುದೇ ಕಥೆ. ನಾಲ್ಕು ಕಥೆ ಬರುತ್ತೆ ಸಿನಿಮಾದಲ್ಲಿ. ಒಂದೊಂದು ನೋಡುಗರನ್ನು ಕಾಡುತ್ತದೆ. ಹಾಡುಗಳು ಮಾತ್ರ ತುಂಬಾ ಚೆನ್ನಾಗಿ ಬಂದಿದೆ. ಸಿನಿಮಾವನ್ನು ಫೆಬ್ರವರಿ ರಿಲೀಸ್​​ಗೆ ಪ್ಲ್ಯಾನ್ ಮಾಡ್ತಾ ಇದಾರೆ. ಎಲ್ಲರು ಸಿನಿಮಾವನ್ನು ಥಿಯೇಟರ್​​ನಲ್ಲಿಯೇ ನೋಡಿ’ ಎಂದಿದ್ದಾರೆ.

ನಾನು ಹೊಸ ಹುಡುಗಿ ಆಗಿದ್ರು ಕೂಡ ತುಂಬಾ ಸಪೋರ್ಟಿವ್ ಆಗಿದ್ರು. ದಾಸರಹಳ್ಳಿ ಎಂದಾಕ್ಷಣ ಒಂದು ಕ್ಯೂರಿಯಾಸಿಟಿ ಇದೆ. ಯಾಕಂದ್ರೆ ಅದೊಂದು ಏರಿಯಾ ಇರುವ ಕಾರಣ ಎಲ್ಲರಿಗೂ ಕುತೂಹಲ. ನನಗೂ ಈ ಕುತೂಹಲ ಇದೆ. ಈ ಸಿನಿಮಾದಲ್ಲಿ ಅವಕಾಶ ಕೊಟ್ಟಿದ್ದಕ್ಕೆ ಥ್ಯಾಂಕ್ಯೂ. ಮಿಸ್ ಮಾಡದೆ ಸಿನಿಮಾ ನೋಡಿ ಎಂದು ನಟಿ ನೇಹಾ ಹೇಳಿದರು.

ವೈಷ್ಣವಿ ವಸುಂಧರೆ ಕ್ರಿಯೇಷನ್ಸ್ ಬ್ಯಾನರ್ ನಡಿ ಪಿ. ಉಮೇಶ ಅವರು ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಧರ್ಮ ಕೀರ್ತಿರಾಜ್, ನೇಹಾ, ಉಮೇಶ್ ರಾಜ್, ಥ್ರಿಲ್ಲರ್ ಮಂಜು, ಕೌರವ ವೆಂಕಟೇಶ್, ಜಾಗ್ವಾರ್ ಸಣ್ಣಪ್ಪ , ಎಂ ಎಸ್ ಉಮೇಶ್, ಹೊನ್ನವಳ್ಳಿ ಕೃಷ್ಣ, ಬಿರಾದರ್, ಬೆಂಗಳೂರು ನಾಗೇಶ್, ಶಿವಕುಮಾರ್ ಆರಾಧ್ಯ, ಮಿಮಿಕ್ರಿ ಗೋಪಿ, ಮಜಾ ಟಾಕೀಸ್ ಪವನ್, ಪದ್ಮಾವಸಂತಿ, ರೇಖಾ ದಾಸ್, ಸಿತಾರ, ಕವನ, ಮೈಸೂರು ಮಂಜುಳಾ, ಪ್ರೇಮ ಗೌಡ , ವಿಕ್ಟರಿ ವಾಸು, ಕಿಲ್ಲರ್ ವೆಂಕಟೇಶ್,ಅರಸಿಕೆರೆ ರಾಜು ಸೇರಿದಂತೆ 150ಕ್ಕೂ ಹೆಚ್ಚು ಹಿರಿಯ ಕಲಾವಿದರು ಇದ್ದಾರೆ.

ಉಳಿದಂತೆ ಸಂಗೀತ – ಎಂ. ಎಸ್. ತ್ಯಾಗರಾಜ, ಛಾಯಾಗ್ರಹಣ -ಸಿ ನಾರಾಯಣ್ ಮತ್ತು ಬಾಲು, ಸಂಕಲನ -ಆರ್. ಡಿ. ರವಿ (ದೊರೆರಾಜ್), ಸಾಹಸ – ಥ್ರಿಲ್ಲರ್ ಮಂಜು, ಕೌರವ ವೆಂಕಟೇಶ್, ಜಾಗ್ವಾರ್ ಸಣ್ಣಪ್ಪ, ಚಿತ್ರಕಥೆ, ಸಂಭಾಷಣೆ – ಶಿವರಾಜ್, ಸಾಯಿ ಕೃಷ್ಣ ಹೆಬ್ಬಾಳ, ತಾಂತ್ರಿಕ ನಿರ್ದೇಶನ – ಶರಣ್ ಗದ್ವಾಲ್, ಸಹ ನಿರ್ದೇಶನ – ಗಹನ್ ನಾಯಕ್ ನಿರ್ವಹಿಸಿದ್ದಾರೆ. ಮುಂದಿನ ವರ್ಷ ಅಂದ್ರೆ 2025ರ ಫೆಬ್ರವರಿ‌ಯಲ್ಲಿ ಸಿನಿಮಾ ತೆರೆಗೆ ತರಲು ಚಿತ್ರತಂಡ ಸಜ್ಜಾಗಿದೆ.

ಇದನ್ನೂ ಓದಿ : ‘ದಿ ಗರ್ಲ್ ಫ್ರೆಂಡ್’ ಪರಿಚಯಿಸಿದ ವಿಜಯ್ ದೇವರಕೊಂಡ – ಪ್ರೇಮಕಥೆಯೊಂದಿಗೆ ಬಂದ ರಶ್ಮಿಕಾ ಮಂದಣ್ಣ..!

Leave a Comment

DG Ad

RELATED LATEST NEWS

Top Headlines

ಸ್ಯಾಂಡಲ್​ವುಡ್​​ನಲ್ಲಿ ‘ಮಲ್ಟಿ’ ಸ್ಟಾರ್ಸ್​ ಹಂಗಾಮಾ – ಸ್ವಾತಂತ್ರ್ಯ ದಿನಾಚರಣೆಗೆ ಬಹುನಿರೀಕ್ಷಿತ ‘45’ ಸಿನಿಮಾ ರಿಲೀಸ್..!

2025ರ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ “45” ಚಿತ್ರ ಆಗಸ್ಟ್ 15 ಸ್ವಾತಂತ್ರ್ಯ ದಿನೋತ್ಸವದಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಸಾಮಾನ್ಯವಾಗಿ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ರಿಲೀಸ್ ಡೇಟ್​​ನ ಅನೌನ್ಸ್

Live Cricket

Add Your Heading Text Here