ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಹಲವರು ಅರೆಸ್ಟ್ ಆಗಿದ್ದಾರೆ. ಜೈಲಿನಲ್ಲಿದ್ದರು ನಟ ದರ್ಶನ್ ಅವರ ಬಿಡುಗಡೆಗೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಅವರು ಕಾನೂನು ಹೋರಾಟವನ್ನ ನಡೆಸುತ್ತಿದ್ದಾರೆ. ಇದೀಗ ವಿಜಯಲಕ್ಷ್ಮೀ ಅವರು ಡಿಸಿಎಂ ಡಿ ಕೆ ಶಿವಕುಮಾರ್ನ್ನು ಭೇಟಿ ಮಾಡಿದ್ದಾರೆ.
ಡಿಕೆಶಿ ಭೇಟಿ ವೇಳೆ ವಿಜಯಲಕ್ಷ್ಮೀಗೆ ದರ್ಶನ್ ಸಹೋದರ ದಿನಕರ್ ಸಾಥ್ ನೀಡಿದ್ದು, ನಿರ್ದೇಶಕ, ನಟ ಪ್ರೇಮ್ ಕೂಡಾ ಈ ವೇಳೆ ಹಾಜರಾಗಿದ್ದರು. ದರ್ಶನ್ ಕುರಿತ ಎಲ್ಲ ಘಟನೆಗಳನ್ನು ವಿಜಯಲಕ್ಷ್ಮಿ ಡಿಕೆಶಿಗೆ ವಿವರಿಸಲಿದ್ದಾರೆ. ಈ ವಿಚಾರದ ಕುರಿತು ವಿಜಯಲಕ್ಷ್ಮೀ ಅವರು ಇಂದು ಸದಾಶಿವನಗರದಲ್ಲಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದ್ದು, ಕುತೂಹಲ ಮೂಡಿಸಿದೆ.
ಇದನ್ನೂ ಓದಿ : ಯಲಹಂಕ ಸಬ್ರಿಜಿಸ್ಟ್ರಾರ್ ಕಚೇರಿಯಲ್ಲಿ ಹಗಲು ಲೂಟಿ, ತಿಂಗಳಿಗೆ 25 ಕೋಟಿ ಕಲೆಕ್ಷನ್ – ಇದು BTVಯ ಸ್ಫೋಟಕ ಸುದ್ದಿ..!
Post Views: 73