ಬಳ್ಳಾರಿ : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಸ್ಯಾಂಡಲ್ವುಡ್ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಹೀಗಿರುವಾಗ ಅರ್ಚಕರೊಬ್ಬರು ದೇವಸ್ಥಾನದಲ್ಲಿ ನಟ ದರ್ಶನ್ ಫೋಟೋಗೆ ಪೂಜೆ ಮಾಡಿ ಸಸ್ಪೆಂಡ್ ಆಗಿದ್ದಾರೆ.
ಕುರುಗೋಡು ದೊಡ್ಡಬಸವೇಶ್ವರ ದೇಗುಲದ ಅರ್ಚಕ ಬಸವರಾಜ್ ಗರ್ಭಗುಡಿಯಲ್ಲಿ ಕೊಲೆ ಆರೋಪಿ ದರ್ಶನ್ ಫೋಟೋ ಇಟ್ಟು ಪೂಜೆ ಮಾಡಿದ್ದಾರೆ. ಇದೀಗ ದರ್ಶನ್ ಫೋಟೋ ಇಟ್ಟು ಪೂಜೆ ಮಾಡಿದ್ದ ಮಲ್ಲಿ ಬಸವರಾಜ್ ಅರ್ಚಕ ಸ್ಥಾನದಿಂದ ಅಮಾನತು ಆಗಿದ್ದಾರೆ.
ಅರ್ಚಕನ ವಿರುದ್ಧ ಸಂಪ್ರದಾಯಬದ್ಧವಾಗಿ ಪೂಜೆ ಮಾಡದೇ ಕರ್ತವ್ಯಲೋಪ ಎಸಗಿದ ಆರೋಪ ಕೇಳಿಬಂದಿದೆ. ಕಳೆದ ಎರಡು ದಿನಗಳ ಹಿಂದೆ ಪೂಜೆ ಮಾಡಿದ್ದ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ವೈರಲ್ ದೃಶ್ಯ ನೋಡಿ ಅರ್ಚಕ ಮಲ್ಲಿ ವಿರುದ್ದ ಭಕ್ತರು ಆಕ್ರೋಶ ಹೊರಹಾಕಿದ್ದಾರೆ. ಧಾರ್ಮಿಕ ಮತ್ತು ದತ್ತಿ ಇಲಾಖೆ ಕಾರ್ಯನಿರ್ವಾಹಕ ಅಧಿಕಾರಿ ಅರ್ಚಕ ಮಲ್ಲಿಯನ್ನು ಸಸ್ಪೆಂಡ್ ಮಾಡಿ ಆದೇಶ ನೀಡಿದ್ದಾರೆ.
ಇದನ್ನೂ ಓದಿ : ಇಡೀ ಮಲ್ಲೇಶ್ವರಂ ಅನ್ನೇ ಬೆಚ್ಚಿ ಬೀಳಿಸಿದ ಮಹಿಳೆ ಆತ್ಮಹ*ತ್ಯೆ – ಎಲ್ಲಿಂದಲೋ ಬಂದು ಅಪಾರ್ಟ್ಮೆಂಟ್ನಲ್ಲಿ ಸೂಸೈ*ಡ್..!