ಬೆಂಗಳೂರು : ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಅವರನ್ನು ನೋಡಲು ಪತ್ನಿ ವಿಜಯಲಕ್ಷ್ಮಿ ಅವರು ತಮ್ಮ ವಕೀಲರ ತಂಡದ ಸದಸ್ಯರ ಜೊತೆಗೆ ಬಳ್ಳಾರಿಯ ಕಾರಾಗೃಹಕ್ಕೆ ಭೇಟಿ ನೀಡಿದರು.
ಕಳೆದೆರಡು ದಿನಗಳ ಹಿಂದೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A2 ಆರೋಪಿಯಾಗಿ ಪರಪ್ಪನ ಅಗ್ರಹಾರ ಸೇರಿದ್ದ ನಟ ದರ್ಶನ್ಗೆ ರಾಜ್ಯಾತಿಥ್ಯ ಕೊಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದ ಬೆನ್ನಲ್ಲೇ ದರ್ಶನ್ನನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಿದ ಮೂರು ದಿನದ ಬಳಿಕ ವಿಜಯಲಕ್ಷ್ಮಿ ಅವರು ಇಲ್ಲಿಗೆ ಭೇಟಿ ನೀಡಿದರು.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಜೈಲು ಸೇರಿ ದಿನ ಕಳೆಯುತ್ತಲೇ ಇದೆ. ಪತಿ ದರ್ಶನ್ನನ್ನು ಹೊರತರಲು ವಿಜಯಲಕ್ಷ್ಮಿ ಕೂಡ ಸಾಕಷ್ಟು ಕಾನೂನು ಹೋರಾಟ ಮಾಡುತ್ತಲೇ ಇದ್ದಾರೆ. ಇನ್ನು ದರ್ಶನ್ರನ್ನು ಹೊರ ತರುವ ಉದ್ದೇಶದಿಂದ ನ್ಯಾಯಾಲಯ, ಕೇಸ್, ದೇವರು ಹೀಗೆ ಹಲವು ರೀತಿ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ಇದೀಗ ದರ್ಶನ್ ನೋಡಲು ಬಳ್ಳಾರಿ ಜೈಲಿಗೆ ಬಂದ ವಿಜಯಲಕ್ಷ್ಮಿ ಎರಡು ಬ್ಯಾಗ್ ತೆಗೆದುಕೊಂಡು ಬಂದಿದ್ದಾರೆ.
ಇನ್ನು ವಿಜಯಲಕ್ಷ್ಮಿ ಬಳಿ ದರ್ಶನ್ರನ್ನು ಜೈಲಿನ ಸಿಬ್ಬಂದಿಗಳು ಕರೆದುಕೊಂಡು ಬಂದಿದ್ದಾರೆ. ಅದೇ ಪೂಮಾ ಟೀ ಶರ್ಟ್ನಲ್ಲಿ ಪತ್ನಿ ಭೇಟಿ ಮಾಡಿದ ಪೊರ್ಕಿ, ಪತ್ನಿ ವಿಜಯಲಕ್ಷ್ಮಿ ಕಂಡು ಭಾವುಕರಾಗಿದ್ದಾರೆ.
ಪತ್ನಿ ವಿಜಯಲಕ್ಷ್ಮಿ ಕೈ ಹಿಡಿದು ಕಣ್ಣೀರು ಹಾಕಿದ ದರ್ಶನ್, ನಾನೇನೂ ಮಾಡಿಲ್ಲ. ಎಲ್ಲವೂ ವಿರುದ್ಧವೇ ಆಗ್ತಿದೆ. ಎಲ್ಲಾ ನನ್ನ ಹಣೆಬರಹ ಎಂದು ತಲೆ ಚಚ್ಚಿಕೊಂಡಿದ್ದಾರೆ. ಇನ್ನು 30 ನಿಮಿಷಗಳ ಕಾಲ ವಿಜಯಲಕ್ಷ್ಮಿ ಜೊತೆ ಚರ್ಚೆ ನಡೆಸಿದ ದರ್ಶನ್ ಕೋರ್ಟ್, ಮಗನ ಆರೋಗ್ಯ ವಿಚಾರಿಸಿದ್ದಾರೆ. ವಿಜಯಲಕ್ಷ್ಮಿ ಜೊತೆ ಮಾತಾಡಿ ಬಳಿಕ ಕೊಲೆ ಆರೋಪಿ ದರ್ಶನ್ ತಮ್ಮ ಲಗೇಜ್ ತಾವೇ ಹಿಡಿದು ಸೆಲ್ ಒಳಗೆ ವಾಪಸ್ ಆಗಿದ್ದಾರೆ.
ಇದನ್ನೂ ಓದಿ : ಪವಿತ್ರಾಗೌಡ ಜಾಮೀನು ಅರ್ಜಿ ವಜಾ – ಲಿಪ್ಸ್ಟಿಕ್ ಸುಂದರಿಗೆ ಜೈಲೇ ಗತಿ..!