Download Our App

Follow us

Home » ಅಪರಾಧ » ದರ್ಶನ್​​ಗಾಗಿ ಬಳ್ಳಾರಿ ಜೈಲಿಗೆ ಬಂತು ಸರ್ಜಿಕಲ್​​ ಚೇರ್..!

ದರ್ಶನ್​​ಗಾಗಿ ಬಳ್ಳಾರಿ ಜೈಲಿಗೆ ಬಂತು ಸರ್ಜಿಕಲ್​​ ಚೇರ್..!

ಬಳ್ಳಾರಿ : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A2 ಆರೋಪಿಯಾಗಿ ಪರಪ್ಪನ ಅಗ್ರಹಾರ ಸೇರಿದ್ದ ನಟ ದರ್ಶನ್​​ಗೆ ರಾಜ್ಯಾತಿಥ್ಯ ಕೊಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದ ಹಿನ್ನಲೆ ದರ್ಶನ್​ನನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ.

ಇದೀಗ ಬಳ್ಳಾರಿ ಜೈಲಿನಲ್ಲಿ ಬಂಧಿಯಾಗಿರುವ  ದರ್ಶನ್​​, ಅನಾರೋಗ್ಯದ ಕಾರಣದಿಂದಾಗಿ ತನಗೆ ಜೈಲಿನಲ್ಲಿ ಸರ್ಜಿಕಲ್ ಚೇರ್ ಬೇಕು ಎಂದು ಮನವಿ ಮಾಡಿಕೊಂಡಿದ್ದರು. ಮನವಿಯನ್ನು ಪುರಸ್ಕರಿಸಿರೋ ಡಿಐಜಿ ಸರ್ಜಿಕಲ್ ಚೇರ್ ಕೂಲಂಕುಷವಾಗಿ ಆರೋಗ್ಯ ತಪಾಸಣೆ ಹಾಗೂ ರಿಪೋರ್ಟ್ ಪರಿಶೀಲನೆ ಬಳಿಕ ಚೇರ್ ಕೊಡಲು ಅಸ್ತು ಎಂದಿದ್ದಾರೆ.

ದರ್ಶನ್​​ಗೆ  ಬೆನ್ನು ನೋವು ಸಮಸ್ಯೆ ಇರುವುದು ಹಳೆಯ ಕಡತಗಳಲ್ಲಿ ಕಂಡುಬಂದಿದೆ. ಹೊಸ ಪರೀಕ್ಷೆಯಲ್ಲೂ ಸಮಸ್ಯೆ ಇರುವುದು ದೃಢಪಟ್ಟಿದೆ. ಹೀಗಾಗಿ ಇಂದು ದರ್ಶನ್ ಮನವಿ ಮೇರಿಗೆ  ಜಿಲ್ಲಾಸ್ಪತ್ರೆಯಿಂದ ಬಳ್ಳಾರಿ ಜೈಲಿಗೆ ಸರ್ಜಿಕಲ್​​ ಚೇರ್​ ತರಲಾಗಿದೆ.

ಇದನ್ನೂ ಓದಿ : ಗೌರಿ-ಗಣೇಶ ಹಬ್ಬಕ್ಕೆ ಸಿಎಂ ಸಿದ್ದರಾಮಯ್ಯಗೆ ಬಿಗ್ ರಿಲೀಫ್​​​ – ಅರ್ಜಿ ವಿಚಾರಣೆ ಸೆ.9ಕ್ಕೆ ಮುಂದೂಡಿಕೆ..!

Leave a Comment

DG Ad

RELATED LATEST NEWS

Top Headlines

ಬೆಂಗಳೂರಿನ ವಿದ್ಯಾರ್ಥಿ ಕೇರಳದಲ್ಲಿ ನಿಫಾ ವೈರಸ್​ಗೆ ಬಲಿ – ರಾಜ್ಯದಲ್ಲಿ ಹೆಚ್ಚಿದ ಆತಂಕ..!

ಬೆಂಗಳೂರು : ಬೆಂಗಳೂರಿನ ವಿದ್ಯಾರ್ಥಿಯೊಬ್ಬ ಕೇರಳದಲ್ಲಿ ಮಾರಣಾಂತಿಕ ನಿಫಾ ವೈರಸ್​ಗೆ ಬಲಿಯಾಗಿದ್ದಾನೆ. ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಮಲಪ್ಪುರಂನ ವಿದ್ಯಾರ್ಥಿ ಊರಿಗೆ ಹೋಗಿದ್ದಾಗ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದ. ಕಳೆದ

Live Cricket

Add Your Heading Text Here