ಕನ್ನಡ ಚಿತ್ರರಂಗದಲ್ಲಿ ಈ ತಲೆಮಾರಿನ ಹೀರೋಗಳ ನಡುವೆ ಕುಚಿಕು ಗೆಳೆಯರೆಂದೇ ಫೇಮಸ್ಸ್ ಆಗಿದ್ದವರು ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್. ದರ್ಶನ್ ಮತ್ತು ಕಿಚ್ಚ ಸುದೀಪ್ ಗೆಳೆತನಕ್ಕೆ ಸಾಟಿನೇ ಇರಲಿಲ್ಲ. ಇನ್ನು ಇವರ ಸ್ನೇಹದ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಯಾವುದೇ ಕಾರ್ಯಕ್ರಮಗಳಿರಲಿ, ಕ್ರಿಕೆಟ್ ಇರಲಿ ಜೊತೆಯಾಗಿಯೇ ಕಾಣಿಸಿಕೊಳ್ಳುತ್ತಿದ್ದರು.
ಆದರೆ, ಇವರ ಸ್ನೇಹದ ಮೇಲೆ ಯಾರ ಕಣ್ಣು ಬಿತ್ತೋ ಏನೋ? ಜೊತೆಯಾಗಿದ್ದವರ ಸ್ನೇಹ ಬಿರುಕು ಬಿಟ್ಟು ಹಲವು ವರ್ಷಗಳೇ ಕಳೆದಿವೆ. ಇದಕ್ಕೆ ಕಾರಣ ಏನು ಅನ್ನೋದು ಹೆಚ್ಚಿನವರಿಗೆ ಗೊತ್ತೊರಲಿಲ್ಲ. ಸಂಗೊಳ್ಳಿ ರಾಯಣ್ಣ ಸಿನಿಮಾ ಆದ್ಮೇಲೆ ಇವರ ದೋಸ್ತಿ ಮುಗಿದೆ ಹೋಯಿತು. ಅಂದಿನಿಂದ ಇಂದಿನವರೆಗೂ ಇಬ್ಬರ ನಡುವೆ ಮಾತುಕತೆಯೇ ಇಲ್ಲ. ಆದರೆ ಇದೀಗ ನಟ ದರ್ಶನ್ ಮತ್ತು ಕಿಚ್ಚ ಸುದೀಪ್ ಸ್ನೇಹ ಮುರಿದು ಬಿದ್ದಿದ್ದು ಹೇಗೆ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಹೌದು, ಇತ್ತೀಚೆಗೆ ನಡೆದ ಖಾಸಗಿ ಮಾಧ್ಯಮದ ಸಂದರ್ಶನವೊಂದರಲ್ಲಿ ಕಿಚ್ಚ ಸುದೀಪ್ ಅವರು ದರ್ಶನ್ ಜೊತೆಗಿನ ಮನಸ್ತಾಪದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ದರ್ಶನ್ ಮತ್ತು ಸುದೀಪ್ ಅವರ ಆತ್ಮೀಯತೆ ಬಗ್ಗೆ ಕೇಳಿದಾಗ, ಆ ವೇಳೆ ‘ಹೌದು, ಚೆನ್ನಾಗಿಯೇ ಇದ್ದೆವು. ಸ್ನೇಹ ಎಂದ ಮೇಲೆ ನಿಷ್ಕಲ್ಮಶವಾಗಿರಬೇಕು. ನಾನು ದೊಡ್ಡವನು, ನೀನು ದೊಡ್ಡವನು ಎನ್ನುವ ಮಾತು ಬರುವುದಿಲ್ಲ ಎಂದು ಹೇಳಿದ್ದಾರೆ.
ಇನ್ನೂ ಕೆಲವೊಮ್ಮೆ ನಮ್ಮ ಸ್ನೇಹಿತರು ಮಾಡುವ ತಪ್ಪಿಗೆ ನಾವು ತಲೆಬಾಗಬೇಕಾಗುತ್ತದೆ. ಅವಮಾನದಿಂದ ತಲೆತಗ್ಗಿಸುವುದಲ್ಲ, ಪ್ರೀತಿಯಿಂದ ತಲೆತಗ್ಗಿಸುವುದು. ಅನಗತ್ಯ ಕಾರಣಗಳಿಂದ ಏನೇನೋ ನಡೆದಾಗ ದೂರ ಇರಬೇಕು ಅನಿಸುತ್ತೆ. ನಾನು ಒಳ್ಳೆಯದನ್ನೇ ಮಾಡಿದ್ದೇನೆ ಹೊರತು ಬೇರೇನು ಮಾಡಿಲ್ಲ ಎಂದರು.
ನಾನು ಯಾರ ಬಗ್ಗೆನೂ ಕೆಟ್ಟದಾಗಿ ಮಾತಾಡಲ್ಲ. ಹಾಗಂತ ನೋವಿಲ್ಲ ಎಂದು ಅಂದುಕೊಳ್ಳಬೇಡಿ. ಎಲ್ಲಾ ಒಳ್ಳೆಯದೇ ನಡೆದರೆ ದೂರು ಯಾಕೆ ಆಗ್ತೀನಿ? ಯಾರದೋ ಭುಜದ ಮೇಲೆ ಗನ್ ಇಟ್ಟು ಫೈರ್ ಮಾಡೋ ವ್ಯಕ್ತಿ ನಾನಲ್ಲ. ಆ ರೀತಿ ಆಪಾದನೆಗಳು ನನ್ನ ಮೇಲೆ ಬಂತು. ನಾನು ದರ್ಶನ್ಗೆ ಕೊಟ್ಟಿರೋ ಸ್ಥಾನ ಯಾವತ್ತು ಕಿತ್ತಿಲ್ಲ. ಹಾಗಂತ ಅವರಿಂದ ಏನು ನಿರೀಕ್ಷೆ ಕೂಡ ಮಾಡಿಲ್ಲ. ಹಾಗಾಗಿ ನಾನು ದೂರ ಆದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ‘ನಾ ನಿನ್ನ ಬಿಡಲಾರೆ’ ಚಿತ್ರದ ಟೀಸರ್ ರಿಲೀಸ್ ಮಾಡಿದ ನಟ ಶರಣ್..!