ಅಹಂಕಾರ, ದುರಹಂಕಾರ, ದರ್ಪ, ದುಡ್ಡಿನ ಮದದಿಂದ ಮೆರೆದಾಡಿದ ದರ್ಶನ್ ಪಾಪದಕೊಡ ತುಂಬಿ ಹೋಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಸೆರೆಮನೆವಾಸ ಅನುಭವಿಸಿರೋ ದಾಸ ಈಗ ನರಳುತ್ತಿದ್ದಾನೆ. ಮಾಡಿದ ಪಾಪದ ಕೃತ್ಯಕ್ಕೆ ಕತ್ತಲೆ ಕೋಣೆಯಲ್ಲಿ ಕೊರಗುತ್ತಿದ್ದಾನೆ.
ದರ್ಶನ್ ಆಪ್ತ ಗೆಳತಿ ಪವಿತ್ರಾಗೆ ರೇಣುಕಾ ಸ್ವಾಮಿ ಫೇಕ್ ಖಾತೆ ಮೂಲಕ ಅಶ್ಲೀಲ ಮೆಸೇಜ್ ಮಾಡಿದ್ದರು. ಈ ಒಂದು ಕಾರಣಕ್ಕೆ ಕೋಪಗೊಂಡ ದರ್ಶನ್, ಸಹಚರರ ಮೂಲಕ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ ಬೆಂಗಳೂರಿಗೆ ಕರೆತಂದಿದ್ದರು. ಬಳಿಕ ಆರ್ ಆರ್ ನಗರದಲ್ಲಿರುವ ಪಟ್ಟಣಗೆರೆ ಶೆಡ್‍ಗೆ ಕರೆದೊಯ್ದು ರೇಣುಕಾಸ್ವಾಮಿ ದೇಹಕ್ಕೆ ಸಿಗರೇಟ್ನಿಂದ ಸುಟ್ಟು, ಮರ್ಮಾಂಗಕ್ಕೆ ಮೆಗ್ಗರ್’ನಿಂದ ಕರೆಂಟ್ ಶಾಕ್ ಕೊಟ್ಟು, ತಲೆಗೆ ರಾಡ್ನಿಂದ ಬಲವಾಗಿ ಹೊಡೆದು ಕೊಲೆ ಮಾಡಿದ್ದಾರೆ.
ದರ್ಶನ್ ಆ್ಯಂಡ್ ಗ್ಯಾಂಗ್ ಮಾಡಿರೋ ಕೌರ್ಯಕ್ಕೆ ರೇಣುಕಾಸ್ವಾಮಿ ನರಳಿ ನರಳಿ ಜೀವಬಿಟ್ಟಿದ್ದಾರೆ. ಈ ಕೊಲೆಗಡುಕರ ಗ್ಯಾಂಗ್ ಲೀಡರ್ ದರ್ಶನ್ಗೆ ಬಳ್ಳಾರಿ ಜೈಲಿನಲ್ಲಿ ರೇಣುಕಾಸ್ವಾಮಿ ಆತ್ಮ ಕಾಡುತ್ತಿದೆ. ದರ್ಶನ್ಗೆ ಮಧ್ಯರಾತ್ರಿ ಎಚ್ಚರವಾಗೋದು. ಯಾರೋ ಕರೆದಂತೆ ಕೇಳೋದು ಆಗುತ್ತಿದೆ ಅಂತೆ. ಆದರೆ ಇಷ್ಟಕ್ಕೆ ಮುಗಿದಿಲ್ಲ. ಯಾಕೆ ಅಂದರೆ ದರ್ಶನ್ ವಿರುದ್ಧ ಸೇಡು ತೀರಿಸಿಕೊಳ್ಳೋಕೆ ರೇಣುಕಾಸ್ವಾಮಿ ಪುತ್ರ ಜನಿಸಿದ್ದಾನೆ.
ರೇಣುಕಾಸ್ವಾಮಿ ಪತ್ನಿ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ನಿತ್ಯ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದ ಕುಟುಂಬಸ್ತರಿಗೆ ರೇಣುಕಾಸ್ವಾಮಿ ಇಲ್ಲದ ನೋವಿನ ಜೊತೆಗೆ ಗಂಡು ಮಗು ಆಗಿರೋ ಸಂತೋಷವು ಸಿಕ್ಕಿದೆ. ಇದೀಗ ಇಡೀ ಕುಟುಂಬ ಶಾಶ್ವತ ನೆಮ್ಮದಿ ಕಿತ್ತುಕೊಂಡ ದರ್ಶನ್ ವಿರುದ್ಧ ರೇಣುಕಾಸ್ವಾಮಿ ಪುತ್ರ ಸೇಡು ತೀರಿಸಿಕೊಳ್ಳುತ್ತಾನೆ ಅಂತ ಜನರ ಮಾತನಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ : ನ.13ಕ್ಕೆ ಬೈಎಲೆಕ್ಷನ್ ವಾರ್ – ಟಫ್ ಫೈಟ್ ಚನ್ನಪಟ್ಟಣಕ್ಕೆ ಯಾರು ರಣಕಲಿಗಳು?