ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ತನಿಖೆ ನಡೆಸಿದ ಪೊಲೀಸರು 17 ಆರೋಪಿಗಳ ವಿರುದ್ಧ 3991 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗಿದ್ದು, ಇಂಚಿಂಚು ಮಾಹಿತಿಯನ್ನು ಚಾರ್ಜ್‌ಶೀಟ್‌ನಲ್ಲಿ ಪೋಲಿಸರು ದಾಖಲಿಸಿದ್ದಾರೆ.
ಇನ್ನು ದರ್ಶನ್ ಹೀಗೆಲ್ಲಾ ಮಾಡಲು ಮಾಯಾಂಗನೆ ಪವಿತ್ರಗೌಡ ಕಾರಣ ಎಂಬುದು ಇಡೀ ನಾಡಿಗೆ ಗೊತ್ತಾಗಿದೆ. ಇವರಿಬ್ಬರ ಸಂಬಂಧ ಏನೆಂದು ಇದುವರೆಗೂ ಯಾರಿಗೂ ಗೊತ್ತಿಲ್ಲ. ಎಲ್ಲಾ ಗೌಪ್ಯವಾಗಿಯೇ ಇದೆ. ಹೀಗಾಗಿ ದರ್ಶನ್ ಹಾಗೂ ಪವಿತ್ರಗೌಡ ಗೆಳೆಯರೇ? ಪ್ರೇಮಿಗಳೇ? ಅಥವಾ ಗಂಡಹೆಂಡತಿಯರೇ? ಎಂಬುದು ಯಕ್ಷ ಪ್ರಶ್ನೆಯಾಗಿ ಉಳಿದಿತ್ತು. ಇದೀಗ ಪೊಲೀಸರು ಸಲ್ಲಿಸಿದ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಇವರಿಬ್ಬರ ಸಂಬಂಧ ಏನೆಂಬುದು ಬಯಲಾಗಿದೆ.
ಹೌದು, ರೇಣುಕಾಸ್ವಾಮಿ ಕೇಸ್ನ A1 ಪವಿತ್ರಾ ಗೌಡ, A2 ದರ್ಶನ್ ಸುಮಾರು ವರ್ಷಗಳಿಂದ ಒಡನಾಟ ಹೊಂದಿದ್ದಾರೆ. ಅಲ್ಲದೆ ಇವರು ಕೆಲ ವರ್ಷಗಳಿಂದ ಇಬ್ಬರು ಲಿವಿಂಗ್ ಇನ್ ರಿಲೇಷನ್ ಶಿಪ್ನಲ್ಲಿದ್ದರು ಎಂಬ ವಿಚಾರ ಬಯಲಾಗಿದೆ. ಇದು ನಾವ್ ಹೇಳ್ತಿರೋದಲ್ಲ ಖುದ್ದು ದರ್ಶನ್ ವಿಚಾರಣೆ ವೇಳೆ ಲಿವಿಂಗ್ ಇನ್ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.
DCP ಮುಂದೆ ವಿಚಾರಣೆ ವೇಳೆ ಪವಿತ್ರಾ ಸಂಬಂಧದ ಬಗ್ಗೆ ಹೇಳಿಕೆ ನೀಡಿದ ದರ್ಶನ್, ಮದುವೆ ಆಗಿಲ್ಲ ಸಾರ್..ಆದರೆ ಇಬ್ಬರು ಜೊತೆಯಲ್ಲಿದ್ದೇವೆ. ನಾನು-ಪವಿತ್ರಾ ಲಿವಿಂಗ್ ಟುಗೆದರ್ ಇದ್ದೇವೆ ಎಂದು ನಟ ದರ್ಶನ್ ಪೊಲೀಸ್ ವಿಚಾರಣೆ ವೇಳೆ ಪವಿತ್ರಾ ಜೊತೆಗಿನ ಸಂಬಂಧ ರಿವೀಲ್ ಮಾಡಿದ್ದಾರೆ.
ಇನ್ನು ವಿಚಾರಣೆ ವೇಳೆ ತನಿಖಾಧಿಕಾರಿಗೆ ಇದೇ ಮಾಹಿತಿ ನೀಡಿರುವ ಪವಿತ್ರಾಗೌಡ, ಸುಮಾರು ಆರೇಳು ವರ್ಷದಿಂದ ಜೀವನ ನಡೆಸುತ್ತಿದ್ದೇನೆ. ಸ್ನೇಹಿತರೊಬ್ಬರ ಮೂಲಕ ದರ್ಶನ್ ಪರಿಚಯ ಆಗಿತ್ತು. ಅಂದಿನಿಂದ ಇಬ್ಬರೂ ಸಹ ಜೀವನ ಮಾಡ್ತಿದ್ದೇವೆ ಎಂದು ತನಿಖಾಧಿಕಾರಿ ಮುಂದೆ ದರ್ಶನ್ ಸಂಬಂಧದ ಹೇಳಿಕೆ ನೀಡಿದ್ದು, ಈ ಎಲ್ಲಾ ಅಂಶಗಳನ್ನು ಪೊಲೀಸರು
ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ : ನಾಡಿನೆಲ್ಲೆಡೆ ಇಂದು ಗೌರಿ-ಗಣೇಶ ಹಬ್ಬದ ಸಂಭ್ರಮ : ಹೂ-ಹಣ್ಣು ದುಬಾರಿ, ಮಾರ್ಕೆಟ್ಗಳಲ್ಲಿ ಜನವೋ ಜನ..!