ಬಳ್ಳಾರಿ : ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ನನ್ನು ನೋಡಲು ತಾಯಿ ಮೀನಾ ತೂಗುದೀಪ ಬಳ್ಳಾರಿ ಜೈಲಿಗೆ ಆಗಮಿಸಿದ್ದಾರೆ. ಪರಪ್ಪನ ಅಗ್ರಹಾರದಲ್ಲಿದ್ದಾಗ ದರ್ಶನ್ರನ್ನು ಕಾಣಲು ಮಗ ದಿನಕರ್ ತೂಗುದೀಪ ಜೊತೆ ಬಂದಿದ್ದರು. ಬಳ್ಳಾರಿ ಜೈಲಿಗೆ ಇದೇ ಮೊದಲ ಬಾರಿಗೆ ತಾಯಿ ಮೀನಾ ತೂಗುದೀಪ ಬಂದಿದ್ದಾರೆ.
ಸಂದರ್ಶಕರ ಕೊಠಡಿಗೆ ಬಂದು ದರ್ಶನ್ ತಾಯಿಯನ್ನು ಮಾತ್ನಾಡಿಸಿ, ತಾಯಿಯನ್ನು ಅಪ್ಪಿಕೊಂಡು ದರ್ಶನ್ ಗಳ ಗಳನೆ ಕಣ್ಣೀರು ಹಾಕಿದ್ದಾರೆ. ಸಹೋದರನ ಸ್ಥಿತಿ ಕಂಡು ಅಕ್ಕ ದಿವ್ಯಾ ಭಾವುಕರಾಗಿದ್ದಾರೆ. ತಾಯಿ, ಅಕ್ಕ-ಭಾವ ದರ್ಶನ್ಗೆ ಮಾನಸಿಕ ಸ್ಥೈರ್ಯ ತುಂಬಿದ್ದಾರೆ.
ದರ್ಶನ್ಗೆ ಅಕ್ಕ ಮನೆಯಿಂದ ತಂದ ತಿನಿಸು, ಡ್ರೈಫ್ರೂಟ್ ನೀಡಿದ್ದು, ಅಕ್ಕನ ಮಕ್ಕಳು ಕೂಡ ಮಾವ ದರ್ಶನ್ನನ್ನು ಭೇಟಿ ಮಾಡಿದ್ದಾರೆ. ಮಡದಿ ವಿಜಯಲಕ್ಷ್ಮೀ, ಸ್ನೇಹಿತರು ಈಗಾಗಲೇ ದರ್ಶನ್ರನ್ನು ಭೇಟಿ ಮಾಡಿದ್ದಾರೆ. ಆದರೆ ಬೆಂಗಳೂರಿನಿಂದ ಬಳ್ಳಾರಿಗೆ 300ಕಿಮೀ ಅಂತರವಿರುವ ಕಾರಣ ತಾಯಿ ಮೀನಾ ತೂಗುದೀಪ್ ದರ್ಶನ್ರನ್ನು ಭೇಟಿ ಮಾಡಿರಲಿಲ್ಲ. ಆದರಿಂದು ಬಳ್ಳಾರಿಗೆ ಆಗಮಿಸಿದ್ದಾರೆ.
ಇದನ್ನೂ ಓದಿ : ಜಗನ್ಮೋಹನ್ ಸರ್ಕಾರದಲ್ಲಿ ತಿರುಪತಿ ಲಡ್ಡು ತಯಾರಿಸಲು ಪ್ರಾಣಿಗಳ ಕೊಬ್ಬು ಬಳಕೆ – ಆಂಧ್ರ ಸಿಎಂ ಗಂಭೀರ ಆರೋಪ..!