ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಪಾಲಾಗಿರುವ ದರ್ಶನ್, ಕಳೆದ ಮೂರು ತಿಂಗಳಿನಿಂದಲೂ ಜೈಲು ವಾಸ ಅನುಭವಿಸುತ್ತಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ದರ್ಶನ್ನನ್ನು ಬಳ್ಳಾರಿ ಶಿಫ್ಟ್ ಮಾಡಲಾಗಿದೆ. ಇದೀಗ ದರ್ಶನ್ ಮತ್ತು ಗ್ಯಾಂಗ್ ನ್ಯಾಯಾಂಗ ಬಂಧನ ಅವಧಿ ಮತ್ತೆ ವಿಸ್ತರಣೆಯಾಗಿದ್ದು, ಸೆಪ್ಟೆಂಬರ್ 30ರವರೆಗೂ ದರ್ಶನ್ ಗ್ಯಾಂಗ್ಗೆ ಜೈಲೇ ಗತಿ.
ಸತತ ಏಳನೇ ಬಾರಿ ನ್ಯಾಯಾಂಗ ಬಂಧನ ವಿಸ್ತರಣೆಯಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್ನ 17 ಆರೋಪಿಗಳು ಬೇರೆ-ಬೇರೆ ಜೈಲುಗಳಲ್ಲಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರ್ ಆಗಿದ್ದರು. ದರ್ಶನ್ ಬಳ್ಳಾರಿ ಜೈಲಿನಿಂದ ವಿಚಾರಣೆಗೆ ಭಾಗಿಯಾಗಿದ್ದರು. ಈ ವೇಳೆ ಕೋರ್ಟ್ ಆರೋಪಿಗಳಿಗೆ CFSL ವರದಿ ಪ್ರತಿ ನೀಡಲು ಸೂಚನೆ ನೀಡಿದ್ದು, ಇದೀಗ ಆರೋಪಿಗಳು CFSL ಝೆರಾಕ್ಸ್ ಪ್ರತಿಗಳನ್ನು ಕೇಳಿದ್ದಾರೆ. ಮುಚ್ಚಿದ ಲಕೋಟೆಯಲ್ಲಿ ಕೋರ್ಟ್ಗೆ CFSL ವರದಿ ಸಲ್ಲಿಕೆ ಮಾಡಲಾಗಿದೆ.
ಕೋರ್ಟ್ ಅನುಮತಿ ನೀಡಿದರೆ 17 ಆರೋಪಿಗಳಿಗೂ ನಕಲು ಪ್ರತಿ ನೀಡಲಾಗುವುದು, ಈ ಬಗ್ಗೆ ಸರ್ಕಾರಿ ವಕೀಲರಿಂದ 24ನೇ ACMM ಕೋರ್ಟ್ಗೆ ಮಾಹಿತಿ ಲಭ್ಯವಾಗಿದೆ. ಸೀಲ್ ಓಪನ್ ಮಾಡಿ ಝೆರಾಕ್ಸ್ ಪ್ರತಿ ನೀಡಲು ಕೋರ್ಟ್ ಸಮ್ಮತಿ ನೀಡಿದ್ದು, ಮುಂದಿನ ವಿಚಾರಣೆಯ ಒಳಗೆ CFSL ಪ್ರತಿ ನೀಡಲು ಅನುಮತಿ ಕೊಟ್ಟಿದೆ.
ಇದನ್ನೂ ಓದಿ : ದೆಹಲಿಯ ನೂತನ ಸಿಎಂ ಆಗಿ ಅತಿಶಿ ಸಿಂಗ್ ಆಯ್ಕೆ..!