ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A2 ಆರೋಪಿಯಾಗಿ ಪರಪ್ಪನ ಅಗ್ರಹಾರ ಸೇರಿದ್ದ ನಟ ದರ್ಶನ್ಗೆ ರಾಜ್ಯಾತಿಥ್ಯ ಕೊಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದ ಬೆನ್ನಲ್ಲೇ ದರ್ಶನ್ನನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ.
ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ನಟ ದರ್ಶನ್ಗೆ ವಿಶೇಷ ಅತಿಥ್ಯ ನೀಡಿದ್ದ ಆರೋಪದಡಿ ಒಂಬತ್ತು ಸಿಬ್ಬಂದಿಯನ್ನು ಅಮಾನತು ಮಾಡಲಾಗಿತ್ತು. ಇದೀಗ ಜೈಲು ಸಿಬ್ಬಂಯ ಅಮಾನತು ಖಂಡಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ 100 ಕ್ಕೂ ಪ್ರತಿಭಟನೆ ನಡೆಸಿದರು.
ಕೆಲಸ ಮಾಡದೇ ಕುಳಿತ 100ಕ್ಕೂ ಹೆಚ್ಚು ಜೈಲು ಸಿಬ್ಬಂದಿಗಳು, KSISF ಅಧಿಕಾರಿಗಳ ವಿರುದ್ಧ ಕ್ರಮ ಏಕಿಲ್ಲ ಎಂದು ಪ್ರತಿಭಟನೆ ನಡೆಸಿದರು. ದರ್ಶನ್ ಅಷ್ಟೆ ಅಲ್ಲ ಯಾವುದೇ ವಿಚಾರ ಬಂದ್ರೂ ನಮ್ಮನ್ನೇ ಹೊಣೆ ಮಾಡ್ತಾರೆ.ಜೈಲು ಸಿಬ್ಬಂದಿ ತಪ್ಪೋ ಅನ್ನೋ ರೀತಿಯಲ್ಲಿ ಮಾತ್ರ ಸುದ್ದಿ ಹರಡುತ್ತದೆ ಎಂದಿದ್ದಾರೆ.
ಇನ್ನು KSISF ಬೆಲ್ಟ್, ಶೂ ತೆಗೆಸಿ ಚೆಕ್ ಮಾಡಿದ್ರೂ ನಿರ್ಬಂಧಿತ ವಸ್ತು ಹೇಗೆ ಬರ್ತವೆ? ಜೈಲಿನೊಳಗೆ ಮೊಬೈಲ್ ಸೇರಿದಂತೆ ಇನ್ನಿತರ ವಸ್ತುಗಳು ಬಂದಿವೆ. KSISF ಕುಮ್ಮಕ್ಕು, ಸಹಕಾರ ಇಲ್ಲದೇ ಬರಲಾದೀತೇ? ಜೈಲು ಅಧಿಕಾರಿಗಳಿಗೆ ಮಾತ್ರ ವರ್ಗಾವಣೆ ಶಿಕ್ಷೆ ಯಾಕೆ? KSISF ನವರನ್ನೂ ವರ್ಗಾವಣೆ ಮಾಡಲಿ ಎಂದು ಆಗ್ರಹಿಸಿ ಹಿರಿಯ ಅಧಿಕಾರಿಗಳ ಜೊತೆ ಸಿಬ್ಬಂದಿಗಳು ಜೈಲ್ಲಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪವಿತ್ರಾ ಗೌಡಗೆ ಜೈಲಾ-ಬೇಲಾ? ಇಂದು ಭವಿಷ್ಯ ನಿರ್ಧಾರ..!