ಬೆಂಗಳೂರು : ಗ್ಯಾಸ್ ಲೀಕೆಜ್ನಿಂದ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ 3 ಮೂರು ಮನೆಗಳು ಸಂಪೂರ್ಣ ಧ್ವಂಸಗೊಂಡು, ಒಂದೇ ಕುಟುಂಬದ ನಾಲ್ವರು ಗಾಯಗೊಂಡಿರುವ ಘಟನೆ ಡಿಜೆ ಹಳ್ಳಿಯ ಆನಂದ್ ಥಿಯೇಟರ್ ಬಳಿ ನಡೆದಿದೆ.
ನಿನ್ನೆ ಬೆಳಗ್ಗೆ 11:30ರ ಸುಮಾರಿಗೆ ಸಿಲಿಂಡರ್ ಸ್ಫೋಟಗೊಂಡಿದ್ದು, ಘಟನೆಯಲ್ಲಿ ಪತಿ ನಾಜೀರ್, ಪತ್ನಿ ಕುಲ್ಸುಮ್ ಹಾಗೂ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ದಂಪತಿಯ 5 ವರ್ಷದ ಮಗಳಿಗೆ ಗಂಭೀರವಾಗಿ ಗಾಯವಾಗಿದೆ ಎಂದು ತಿಳಿದು ಬಂದಿದೆ. ಸದ್ಯ ಗಾಯಾಳುಗಳಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನಾಜೀರ್ ಪಾನಿಪುರಿ ವ್ಯಾಪಾರ ಮಾಡಿಕೊಂಡಿದ್ದರು. ಸ್ಫೋಟದ ತೀವ್ರತೆಗೆ ಮೂರೂ ಮನೆಗಳು ಪುಡಿಪುಡಿಯಾಗಿದ್ದು, ರೆಗ್ಯುಲೇಟರ್ ಆನ್ ಆಗಿದ್ದರಿಂದ ಗ್ಯಾಸ್ ಲೀಕೇಜ್ ಆಗಿದೆ. ರೆಗ್ಯುಲೇಟರ್ ಡೇಟ್ 2016ರಲ್ಲೇ ಎಕ್ಸ್ಪೈರ್ ಆಗಿತ್ತು. ಅದರಿಂದಲೇ ಗ್ಯಾಸ್ ಲೀಕೇಜ್ ಆಗಿ ಮನೆ ತುಂಬ ಆವರಿಸಿದೆ.
ಶನಿವಾರ ಬೆಳಗ್ಗೆ 11:30ಕ್ಕೆ ಇದ್ದಕ್ಕಿದ್ದಂತೆ ಸ್ಫೋಟ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಡಿಜೆ ಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ : ತಮಿಳುನಾಡಿಗೆ ಅಪ್ಪಳಿಸಿದ ‘ಫೆಂಗಲ್’ ಚಂಡಮಾರುತ – ಜನಜೀವನ ಅಸ್ತವ್ಯಸ್ತ.. ಎಲ್ಲೆಲ್ಲಿ ಏನೇನಾಯ್ತು?