Download Our App

Follow us

Home » ರಾಜ್ಯ » ‘ನ್ಯೂ ಇಯರ್’ ವಿಶ್​ ಮೆಸೇಜ್​​ನಲ್ಲೇ ಸೈಬರ್ ಅಟ್ಯಾಕ್! ಕ್ಷಣಮಾತ್ರದಲ್ಲೇ ನಿಮ್ಮನ್ನ ಯಾಮಾರಿಸ್ತಾರೆ.. ಎಚ್ಚರ ಎಚ್ಚರ!

‘ನ್ಯೂ ಇಯರ್’ ವಿಶ್​ ಮೆಸೇಜ್​​ನಲ್ಲೇ ಸೈಬರ್ ಅಟ್ಯಾಕ್! ಕ್ಷಣಮಾತ್ರದಲ್ಲೇ ನಿಮ್ಮನ್ನ ಯಾಮಾರಿಸ್ತಾರೆ.. ಎಚ್ಚರ ಎಚ್ಚರ!

2024ಕ್ಕೆ ಗುಡ್​ ಬೈ ಹೇಳಲು ಕೆಲವೇ ಗಂಟೆಗಳು ಬಾಕಿ ಉಳಿದಿದ್ದು, ಡಿಸೆಂಬರ್​​ 31ರ ರಾತ್ರಿಗೆ ಇಡೀ ವಿಶ್ವ ಕಾಯುತ್ತಿದೆ. ಈ ಹೊತ್ತಲ್ಲೇ, ಹೊಸವರ್ಷ ಆಚರಣೆ ನೆಪ ಬಳಸಿಕೊಂಡು ಸೈಬ‌ರ್ ವಂಚಕರು ಸಾರ್ವಜನಿಕರ ಮೊಬೈಲ್‌ಗಳಿಗೆ ಅಪಾಯಕಾರಿ ಲಿಂಕ್, APK ಫೈಲ್ ಕಳುಹಿಸಿ ಹ್ಯಾಕ್ ಮಾಡುವ ಸಾಧ್ಯತೆಯಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ಪೊಲೀಸರು ಸೂಚನೆ ನೀಡಿದ್ದಾರೆ.

ಹೌದು.. ಸಾರ್ವಜನಿಕರು ತಮ್ಮ ಮೊಬೈಲ್‌ಗೆ ಈ ರೀತಿಯ ಹೊಸ ವರ್ಷದ ಶುಭಾಶಯ ಕೋರುವ ಯಾವುದೇ ಹಾನಿಕಾರಕ ಲಿಂಕ್‌ಗಳು, APK ಫೈಲ್‌ಗಳನ್ನ ವಾಟ್ಸ್‌ಆ್ಯಪ್ ಸೇರಿದಂತೆ ಯಾವುದೇ  ಸಾಮಾಜಿಕ ಜಾಲತಾಣ ಮಾಧ್ಯಮದಿಂದ ಸ್ವೀಕರಿಸಿಕೊಂಡಲ್ಲಿ ಅದನ್ನು ತಕ್ಷಣ ಡಿಲೀಟ್ ಮಾಡಲು ಸೈಬ‌ರ್ ಕ್ರೈಮ್​ ಪೊಲೀಸರು ತಿಳಿಸಿದ್ದಾರೆ.

ಯಾವುದೇ ಕಾರಣಕ್ಕೂ ಇಂತಹಾ ಹಾನಿಕರ ಲಿಂಕ್ ಮತ್ತು APK ಫೈಲ್​ಗಳನ್ನು ಯಾರಿಗೂ ಶೇರ್ ಮಾಡದಿರಿ. ಹಾನಿಕಾರಕ ಲಿಂಕ್ ಮತ್ತು APK ಫೈಲ್ ವಾಟ್ಸ್ ಆ್ಯಪ್ ಗ್ರೂಪ್‌ಗಳಿಗೆ ನಿಮ್ಮ ಪರಿಚಿತ ವಾಟ್ಸ್‌ಆ್ಯಪ್‌ನಿಂದ ಪೋಸ್ಟ್ ಮಾಡಿದಲ್ಲಿ ಆಯಾ ಗ್ರೂಪ್ ಅಡ್ಮಿನ್​ಗಳು ಅಂತಹ ಲಿಂಕ್, ಫೈಲ್ ಪರಿಶೀಲನೆ ಮಾಡಿ ಡಿಲೀಟ್ ಮಾಡುವಂತೆ ಕೂಡಾ ಪೊಲೀಸರು ತಿಳಿಸಿದ್ದಾರೆ.

2025ನೇ ಹೊಸ ವರ್ಷದ ಸಂದರ್ಭವನ್ನು ಬಳಸಿಕೊಂಡು ಸಾರ್ವಜನಿಕರ ಮೊಬೈಲ್​ಗಳಿಗೆ ಸೈಬ‌ರ್ ಕ್ರಿಮಿನಲ್‌ಳು ಹಾನಿಕಾರಕ ಲಿಂಕ್, ಅಪ್ಲಿಕೇಶನ್​ಗಳನ್ನು ಕಳುಹಿಸಿ ಬಳಿಕ ಅವರ ಮೊಬೈಲ್‌ಗಳನ್ನು ಹ್ಯಾಕ್ ಮಾಡುವ ಸಾಧ್ಯತೆ ಇರುತ್ತದೆ. ನಂತರ ಹ್ಯಾಕ್ ಮಾಡಿದ ಮೊಬೈಲಿನಿಂದ ಅವರ ವಾಟ್ಸ್‌ಆ್ಯಪ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಹಾನಿಕಾರಕ ಲಿಂಕ್ ಮತ್ತು APK ಫೈಲ್‌ಗಳನ್ನು ದೊಡ್ಡಮಟ್ಟದಲ್ಲಿ ಶೇರ್ ಮಾಡುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಂಚನೆಗೊಳಗಾದರೆ 1930ಕ್ಕೆ ಕರೆ ಮಾಡಿ : ಸೈಬರ್ ಕ್ರೈಮ್ ವಂಚನೆಗೆ ಒಳಗಾದಲ್ಲಿ ಕೂಡಲೇ 1930ಕ್ಕೆ ಕರೆ ಮಾಡಿ ಅಥವಾ www.cyber- crime.gov.in ವೆಬ್‌ಸೈಟ್‌ನಲ್ಲಿ ದೂರು ದಾಖಲಿಸಬಹುದಾಗಿದೆ.

ಇದನ್ನೂ ಓದಿ : ಹೊಸ ವರ್ಷ ಸಂಭ್ರಮಾಚರಣೆಗೆ ಕ್ಷಣಗಣನೆ.. ರಾಜ್ಯಾದ್ಯಂತ ಹೇಗಿದೆ ಸಿದ್ಧತೆ?

 

 

Leave a Comment

DG Ad

RELATED LATEST NEWS

Top Headlines

ಸ್ಯಾಂಡಲ್​ವುಡ್​​ನಲ್ಲಿ ‘ಮಲ್ಟಿ’ ಸ್ಟಾರ್ಸ್​ ಹಂಗಾಮಾ – ಸ್ವಾತಂತ್ರ್ಯ ದಿನಾಚರಣೆಗೆ ಬಹುನಿರೀಕ್ಷಿತ ‘45’ ಸಿನಿಮಾ ರಿಲೀಸ್..!

2025ರ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ “45” ಚಿತ್ರ ಆಗಸ್ಟ್ 15 ಸ್ವಾತಂತ್ರ್ಯ ದಿನೋತ್ಸವದಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಸಾಮಾನ್ಯವಾಗಿ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ರಿಲೀಸ್ ಡೇಟ್​​ನ ಅನೌನ್ಸ್

Live Cricket

Add Your Heading Text Here