ಬೆಂಗಳೂರು : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣದಲ್ಲಿ ಬಿಜೆಪಿ ಎಂಎಲ್ಸಿ ಸಿ.ಟಿ ರವಿ ಅವರನ್ನು ಪೊಲೀಸರು ಇಂದು ಬೆಳಗಾವಿ ಜೆಎಂಎಫ್ಸಿ ಕೋರ್ಟ್ಗೆ ಹಾಜರುಪಡಿಸಿದರು. ಸಿ.ಟಿ ರವಿ ವಿರುದ್ಧದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಸ್ಪರ್ಶಾ ಡಿಸೋಜಾ ಅವರು, ಸಿ.ಟಿ.ರವಿ ಪ್ರಕರಣ ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ಗೆ ವರ್ಗಾವಣೆ ಮಾಡಿ ಆದೇಶಿಸಿದ್ದಾರೆ.
ಸಿ.ಟಿ.ರವಿ ಅವರನ್ನು ಬೆಳಗಾವಿಯಿಂದ ಗೌರವಯುತವಾಗಿ ಕರೆತರಲು ಕೋರ್ಟ್ ಸೂಚನೆ ನೀಡಿದೆ. ಜೊತೆಗೆ ಟ್ರಾನ್ಸಿಟ್ ವಾರೆಂಟ್ ಕೊಟ್ಟಿದ್ದು, 24 ಗಂಟೆಯೊಳಗೆ ಬೆಂಗಳೂರು ಕೋರ್ಟ್ಗೆ ಸಿ.ಟಿ.ರವಿ ಅವರನ್ನು ಹಾಜರು ಪಡಿಸಲು ಆದೇಶಿಸಿದೆ. ಈ ಆದೇಶದ ಬೆನ್ನಲ್ಲೇ ಬೆಳಗಾವಿಯಿಂದ ಸಿ.ಟಿ.ರವಿ ಅವರನ್ನು ಬೆಂಗಳೂರಿಗೆ ಕರೆತರಲು ಪೊಲೀಸರು ಸಿದ್ದತೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಡಿಕೆಶಿ, ಲಕ್ಷ್ಮಿ ಹೆಬ್ಬಾಳ್ಕರ್ ನಿನಗೊಂದು ಗತಿ ಕಾಣಿಸ್ತೀವಿ ಎಂದಿದ್ರು – ಜಡ್ಜ್ ಮುಂದೆ ಸಿ.ಟಿ ರವಿ ಗಂಭೀರ ಆರೋಪ!
Post Views: 169