ಮದ್ಯಪಾನಕ್ಕಾಗಿ ಮನೆಯಲ್ಲಿಟ್ಟಿದ್ದ ಹಣ, ಚಿನ್ನಾಭರಣ ಕದ್ದು ಹೋಗಿದ್ದು, ಮಕ್ಕಳ ಸ್ಕೂಲ್ ಫೀಸ್‌ಗಾಗಿ ಇಟ್ಟ ಹಣವನ್ನು ತೆಗೆದುಕೊಂಡು ಹೆಂಡ ಖರೀದಿಸಿದ್ದ ಸುದ್ದಿಗಳನ್ನು ಕೇಳಿರುತ್ತೀರಿ. ಆದರೆ ಇಲ್ಲೊಂದು ದಂಪತಿ ಬೀರ್ ಕುಡಿಯೋದಕ್ಕಾಗಿ ತಮ್ಮ ಮಗುವನ್ನೇ ಮಾರಾಟ ಮಾಡಿರುವ ಘಟನೆ ನಡೆದಿದೆ.
ಹೌದು ಅಮೆರಿಕದ ವಾಷಿಂಗ್ಟನ್‌ನ ದಂಪತಿ ತಮ್ಮ ಮೂರು ತಿಂಗಳ ಮಗುವನ್ನು ಬಿಯರ್ ಹಾಗೂ ಹಣಕ್ಕೆ ಮಾರಾಟ ಮಾಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ರೋಜರ್ಸ್‌ನ ಕ್ಯಾಂಪ್‌ಗೌಂಡ್‌ಗೆ ತೆರಳಿ ಮಗುವನ್ನು ರಕ್ಷಿಸಿದ್ದಾರೆ. ಮಗುವಿನ ಪೋಷಕರಾದ ಡೇರಿಯನ್ ಅರ್ಬನ್ ಮತ್ತು ಶಲೇನ್ ಎಹ್ಲರ್ರನ್ನು ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಸೆಪ್ಟೆಂಬರ್ 21 ರಂದು ಹಸುಗೂಸನ್ನು ಸುಮಾರು 83 ಸಾವಿರ ರೂ. ನಗದು ಹಣ ಮತ್ತು ಬಿಯರ್ಗೆ ಮಾರಾಟ ಮಾಡಿದ್ದರು. ಈ ಬಗ್ಗೆ ಸ್ಥಳೀಯರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದು, ದೂರಿನ ಆಧಾರದ ಮೇಲೆ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಮಗುವನ್ನು ರಕ್ಷಿಸಿದ್ದಾರೆ. ಆದರೆ ಅದಾಗಲೇ ಮಗುವಿನ ಪೋಷಕರು ಅಲ್ಲಿಂದ ಪರಾರಿಯಾಗಿದ್ದಾರೆ.
ಈ ದಂಪತಿ ಸಾವಿರ ಡಾಲರ್‌ಗಳಿಗೆ ಮಾರಾಟ ಮಾಡಲು ಒಪ್ಪಿದ ಪತ್ರ ವಾಸಿಸುತ್ತಿದ್ದ ಟೆಂಟ್‌ನಲ್ಲಿ ಪತ್ತೆಯಾಗಿವೆ. ಇದರಲ್ಲಿ ನಗದು ಜೊತೆಗೆ ಬಿಯರ್ ನೀಡಲು ಒಪ್ಪಂದ ಮಾಡಿಕೊಂಡಿರುವುದನ್ನು ಕಂಡು ಪೊಲೀಸರು ದಂಗಾಗಿ ಹೋಗಿದ್ದಾರೆ. ಇಬ್ಬರೂ ಪೋಷಕರು ಪತ್ರಕ್ಕೆ ಸಹಿ ಹಾಕಿರುವ ಸೆಲ್‌ಫೋನ್ ವಿಡಿಯೋವನ್ನು ಅಧಿಕಾರಿಗಳು ಸಂಗ್ರಹಿಸಿದ್ದಾರೆ. ಇದೀಗ ಮಗುವಿನ ಪೋಷಕರಾದ ಡೇರಿಯನ್ ಅರ್ಬನ್ ಮತ್ತು ಶಲೇನ್ ಎಹ್ಲರ್ನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ : ಮುಡಾ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಸೇಡಿನ ರಾಜಕಾರಣ ಮಾಡ್ತಾ ಇದೆ – ಡಾ.ಜಿ ಪರಮೇಶ್ವರ್..!