ಮಿಲ್ಕಿ ಬ್ಯೂಟಿ ನಟಿ ತಮನ್ನಾ ಭಾಟಿಯಾ ಅವರು ವಿಜಯ್ ವರ್ಮಾ ಜೊತೆ ಎಂಗೇಜ್ ಆಗಿದ್ದಾರೆ. ನಟಿ ಮದುವೆಯ ಗುಡ್ ನ್ಯೂಸ್ಗಾಗಿ ಫ್ಯಾನ್ಸ್ ಕಾತುರದಿಂದ ಕಾಯ್ತಿದ್ದಾರೆ. ಇದರ ನಡುವೆ ತಮನ್ನಾ ತಮ್ಮ ಬದುಕಿನಲ್ಲಾದ ಎರಡು ಬ್ರೇಕಪ್‌ಗಳ ಕಥೆಗಳನ್ನು ಹಂಚಿಕೊಂಡಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಈ ಹಿಂದಿನ ಬ್ರೇಕಪ್ ಆಗಿದ್ದು ಯಾವ ಕಾರಣಕ್ಕೆ ಎಂಬುದನ್ನು ನಟಿ ಮುಕ್ತವಾಗಿ ಹೇಳಿಕೊಂಡಿದ್ದಾರೆ. ಮೊದಲ ಬ್ರೇಕಪ್ ವೇಳೆ, ನಾನು ತುಂಬಾ ಚಿಕ್ಕವಳಿದ್ದೆ, ಜೀವನದಲ್ಲಿ ಆ ವ್ಯಕ್ತಿಯಾಗಿ ಎಲ್ಲಾ ಅಗತ್ಯತೆ ಮತ್ತು ಆಸೆಗಳನ್ನು ತ್ಯಜಿಸುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಕೆಲ ಕಾರಣಗಳಿಂದ ಆ ಸಂಬಂಧ ಮುರಿದು ಬಿತ್ತು ಎಂದಿದ್ದಾರೆ.
ಎರಡನೇಯದು ಆತ ನನ್ನ ಜೊತೆ ಜೀವನ ಪೂರ್ತಿ ಜೊತೆಯಿರಲು ಸೂಕ್ತ ವ್ಯಕ್ತಿ ಅಲ್ಲ ಎಂದು ಅನಿಸಿತು. ಸುಳ್ಳು ಹೇಳುವವರ ಜೊತೆ ಜೀವನ ಮಾಡಲು ಸಾಧ್ಯವಿಲ್ಲ. ಸಣ್ಣ ಸಣ್ಣ ವಿಚಾರಕ್ಕೂ ಸುಳ್ಳು ಹೇಳುವವರ ಜೊತೆ ಜೀವನ ಸಾಗಿಸುವುದು ಕಷ್ಟ ಎಂದು ತಮನ್ನಾ ತಮ್ಮ 2ನೇ ಬ್ರೇಕಪ್ ಬಗ್ಗೆ ಅಸಲಿ ಕಾರಣ ಬಿಚ್ಚಿಟ್ಟರು. ಈ ಹಿಂದಿನ ಬ್ರೇಕಪ್‌ಗಳಿಂದ ನನ್ನ ಜೀವನದಲ್ಲಿ ದೊಡ್ಡ ಪಾಠ ಕಲಿತಿದ್ದೇನೆ ಎಂದು ನಟಿ ಹೇಳಿದ್ದಾರೆ.
ಇದನ್ನೂ ಓದಿ : ವಿಜಯಪುರದಲ್ಲಿ ಅಕ್ರಮವಾಗಿ ಗಾಂಜಾ ಬೆಳೆದ ಆರೋಪಿ ಅರೆಸ್ಟ್ – 4500ಗ್ರಾಂ ಒಣ ಗಾಂಜಾ ವಶಕ್ಕೆ..!