ಬೀದರ್ : ಬೀದರ್‌ನ ಕಾಂಟ್ರಾಕ್ಟರ್ ಸಚಿನ್ ಪಾಂಚಾಳ್ ಸೂಸೈಡ್ ಕೇಸ್ ಹೊಸ ತಿರುವು ಪಡೆದುಕೊಂಡಿದ್ದು, ಆರೋಪಿಗಳ ಬಂಧನ ಆಗಿದೆ. ಪ್ರಕರಣದ ತನಿಖೆ ನಡೆಸ್ತಿರುವ ಸಿಐಡಿ ಅಧಿಕಾರಿಗಳು, ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ್ ಸೇರಿ ಐವರನ್ನ ನಿನ್ನೆ ತನ್ನ ಕಸ್ಟಡಿಗೆ ಪಡೆದು ವಿಚಾರಣೆ ಆರಂಭಿಸಿದೆ.
ಬೀದರ್‌ನ ಕಾಂಟ್ರಾಕ್ಟರ್ ಸಚಿನ್ ಪಾಂಚಾಳ್ ಜೀವ ಹೋಗಲು ಕಲಬುರಗಿಯ ಕಲುಷಿತ ರಾಜಕಾರಣ ಕಾರಣ ಅಂತ ಕಮಲ ಪಡೆ ಪ್ರತಿಭಟನೆ ನಡೆಸಿತ್ತು. ಪ್ರಿಯಾಂಕ್ ಸಚಿವ ಖರ್ಗೆ ಆಪ್ತರ ಹೆಸರು ತಳಕು ಹಾಕಿದ್ದೆ, ಪ್ರಕರಣ ರಾಜಕೀಯ ಸಂಗ್ರಾಮಕ್ಕೆ ಕಾರಣ ಆಗಿತ್ತು. ಇದೀಗ ರಾಜು ಕಪನೂರ್ ಆ್ಯಂಡ್ ಗ್ಯಾಂಗ್ ಅರೆಸ್ಟ್ ಆಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ರಾಜು ಕಪನೂರ್ ಹಾಗೂ ಉಳಿದವರನ್ನು ವಿಚಾರಣೆ ನಡೆಸಲಾಗಿತ್ತು. ವಿಚಾರಣೆ ಬಳಿಕ ರಾಜು ಕಪನೂರ್ ಸೇರಿ ಐವರನ್ನು ಸಿಐಡಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ್, ನಂದಕುಮಾರ್ ನಾಗಭುಜಂಗೆ, ಗೋರಖನಾಥ್, ಆರ್.ಕೆ.ಪಾಟೀಲ್, ಸತೀಶ್ ಸೇರಿ ಐವರನ್ನು ಅರೆಸ್ಟ್ ಮಾಡಲಾಗಿದೆ.
ಬಳಿಕ ಬೀದರ್‌ನ ಜೆಎಂಎಫ್‌ಸಿ ಕೋರ್ಟ್‌ಗೆ ರಾಜು ಕಪನೂರು ಸೇರಿ ಐವರು ಆರೋಪಿಗಳನ್ನ ಹಾಜರು ಪಡಿಸಲಾಗಿತ್ತು. ಈ ಬೆನ್ನಲ್ಲೇ ಕೋರ್ಟ್, ಆರೋಪಿಗಳಿಗೆ 5 ದಿನಗಳ ಕಾಲ ಸಿಐಡಿ ವಶಕ್ಕೆ ಒಪ್ಪಿಸಿದೆ. ತನ್ನ ಕಸ್ಟಡಿಗೆ ಪಡೆದ ಸಿಐಡಿ, ಸದ್ಯ ವಿಚಾರಣೆ ಮುಂದುವರೆಸಿಸದೆ.
ಇದನ್ನೂ ಓದಿ : JDS ಶಾಸಕನಿಗೆ ‘ಮುಡಾ’ ಸಂಕಷ್ಟ – ಜಿ.ಟಿ ದೇವೇಗೌಡ ವಿರುದ್ಧ ಲೋಕಾಯುಕ್ತಕ್ಕೆ ಸ್ನೇಹಮಯಿ ಕೃಷ್ಣ ದೂರು!