ಬೆಂಗಳೂರು : ಚನ್ನಪಟ್ಟಣ ಉಪಚುನಾವಣೆ ಪ್ರಚಾರದ ವೇಳೆ ಸಚಿವ ಜಮೀರ್ ಅಹ್ಮದ್ ಖಾನ್ ನೀಡಿದ ವಿವಾದಾತ್ಮಕ ಹೇಳಿಕೆ ಪಕ್ಷದೊಳಗೆ ಅಸಮಾಧಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಕಾಂಗ್ರೆಸ್ ಪಕ್ಷದ ಕೆಲವು ಶಾಸಕರು ಮತ್ತು ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಉಪಚುನಾವಣೆಯ ಫಲಿತಾಂಶದ ಬಳಿಕ ಹೈಕಮಾಂಡ್ಗೆ ಮತ್ತೊಂದು ದೂರು ಸಲ್ಲಿಸಲು ಸಿದ್ಧರಾಗಿದ್ದಾರೆ.
ಉಪಚುನಾವಣೆಯಲ್ಲಿ ಪ್ರಬಲ ಸಮುದಾಯದ ಕುರಿತು ಜಮೀರ್ ನೀಡಿದ ವಿವಾದಾತ್ಮಕ ಹೇಳಿಕೆ ಪಕ್ಷದ ಬೆಂಬಲಕ್ಕೆ ಹೊಡೆತ ನೀಡಿದೆ. ಸಚಿವರು ಪಕ್ಷದ ವರ್ಚಸ್ಸನ್ನ ಹೆಚ್ಚಿಸುವ ಕೆಲಸ ಮಾಡಬೇಕು. ಆದರೆ, ಜಮೀರ್ ಪಕ್ಷದ ಇಮೇಜ್ಗೆ ಹಾನಿ ಮಾಡುತ್ತಿದ್ದಾರೆ ಎಂದು ಕೆಲವು ಶಾಸಕರು ಅಸಮಾಧಾನ ಹೊರ ಹಾಕಿದ್ದಾರೆ.
ಉಪಚುನಾವಣೆಯ ಫಲಿತಾಂಶದ ಬಳಿಕ ಈ ಅಸಮಾಧಾನ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪಕ್ಷದ ನಾಯಕರು ಜಮೀರ್ ವಿರುದ್ಧ ಹೈಕಮಾಂಡ್ಗೆ ಮತ್ತೆ ದೂರು ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಸಚಿವರ ಹೇಳಿಕೆಗಳು ಮತ್ತು ಅವರ ನಡೆ ಪಕ್ಷದ ಬಲಕ್ಕೆ ತೊಂದರೆ ತಂದಿರುವ ಈ ಸಂದರ್ಭ, ಹೈಕಮಾಂಡ್ ಇತರ ನಾಯಕರು ಮತ್ತು ಶಾಸಕರ ಆಶಯಗಳನ್ನು ಗೌರವಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಹೈ ಕಮಾಂಡ್ ಬಳಿ ಕೆಲ ಕೈ ನಾಯಕರು ಮನವಿ ಸಲ್ಲಿಸಲಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ : ತೆಲುಗು ಬಿಗ್ ಬಾಸ್ ಕಾದು.. ಕನ್ನಡ – ವೈಲ್ಡ್ ಕಾರ್ಡ್ ಸ್ಫರ್ಧಿ ಶೋಭಾ ಶೆಟ್ಟಿಗೆ ವೇದಿಕೆಯಲ್ಲೇ ಸುದೀಪ್ ಕ್ಲಾಸ್..!