ಹುಬ್ಬಳ್ಳಿ : ಕುಮಾರಸ್ವಾಮಿಯನ್ನು ನಾವು ಮುಗಿಸೋದಿಲ್ಲ. ಹೆಚ್ಡಿಕೆಯನ್ನು ಮುಗಿಸಿದ್ದು ಕಾಂಗ್ರೆಸ್ ನಾಯಕರೇ ಅಲ್ಲವೇ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹುಬ್ಬಳಿಯಲ್ಲಿ ಕಾಂಗ್ರೆಸ್ ನಾಯಕರಿಗೆ ತಿರುಗೇಟು ಕೊಟ್ಟಿದ್ದಾರೆ.
ಕುಮಾರಸ್ವಾಮಿ ಮತ್ತು ಜೆಡಿಎಸ್ ಪಕ್ಷವನ್ನು ಮುಗಿಸಲು ಬಿಜೆಪಿಯೇ ಷಡ್ಯಂತ್ರ ಮಾಡಿದೆ ಎಂಬ ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡ ಪ್ರಹ್ಲಾದ್ ಜೋಶಿ ಅವರು, HDK ಎನ್ಡಿಎ ಕೂಟದ ಒಂದು ಭಾಗವಾಗಿದ್ದಾರೆ. NDAದಲ್ಲಿ ಇರುವ ಯಾರನ್ನೂ ಬಿಜೆಪಿ ಮುಗಿಸುವ ಅಥವಾ ಕೈ ಬಿಡುವ ಮಾತೇ ಇಲ್ಲ ಎಂದು ಹೇಳಿದರು.
ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಿ ಕೆಳಗಿಳಿದ್ಯಾರು? ಕಾಂಗ್ರೆಸ್ ತನ್ನ ಅನುಭವದ ಮಾತುಗಳನ್ನು ಹೇಳುತ್ತಿದೆ. ಕಾಂಗ್ರೆಸ್ ಶಾಸಕರ ರಾಜೀನಾಮೆ ಕೊಡಿಸಿದ್ದು ಯಾರು? ಹಗರಣ ಆಗಿದ್ದರೆ ತನಿಖೆ ಮಾಡಿ ಎಂದು ಕುಮಾರಸ್ವಾಮಿಯವರೇ ಹೇಳಿದ್ದಾರೆ. ನಿಮ್ಮದೇ ಸರ್ಕಾರವಿದೆ. ತನಿಖೆ ನಡೆಸಿ ಎಂದು ಜೋಶಿ ಸವಾಲು ಎಸೆದಿದ್ದಾರೆ.
ಇನ್ನು ರಾಷ್ಟ್ರಪತಿಗಳ ಮುಂದೆ ಕಾಂಗ್ರೆಸ್ ಶಾಸಕರ ಪರೇಡ್ ವಿಚಾರಕ್ಕೆ ಖಾರವಾಗಿ ರಿಯಾಕ್ಟ್ ಮಾಡಿದ ಅವರು, ಸಿದ್ದರಾಮಯ್ಯನವರೇ ಜನರೇ ನಿಮ್ಮನ್ನು ಪರೇಡ್ ಮಾಡಿಸ್ತಾರೆ. ನೀವು ಪರೇಡ್ ಮಾಡೋ ಅಗತ್ಯ ಏನೂ ಇಲ್ಲ ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ : FSL ರಿಪೋರ್ಟ್ ಬಂದ ಕೂಡಲೇ ಚಾರ್ಜ್ ಶೀಟ್ ಸಲ್ಲಿಕೆ ಮಾಡುತ್ತೇವೆ – ಬಿ.ದಯಾನಂದ್ ಮಾಹಿತಿ..!