ಬೆಂಗಳೂರು : ಕೆಪಿಸಿಸಿ ಕಾರ್ಯದರ್ಶಿ ಗುರಪ್ಪ ನಾಯ್ಡು ವಿರುದ್ದ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದ್ದು, ಈ ಸಂಬಂಧ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಗುರಪ್ಪನಾಯ್ಡು ಲೈಂಗಿಕ ಕಿರುಕುಳ ಕರ್ಮಕಾಂಡವನ್ನು ಬಿಟಿವಿ ಬಯಲು ಮಾಡಿತ್ತು, ಇದೀಗ BTV ವರದಿಯ ಬೆನ್ನಲ್ಲೇ ಗುರಪ್ಪ ನಾಯ್ಡುನನ್ನು ಕಾಂಗ್ರೆಸ್ನಿಂದ ಕಿಕ್ಔಟ್ ಮಾಡಿದ್ದಾರೆ.
ಕೆಪಿಸಿಸಿ ಕಾರ್ಯದರ್ಶಿಯಾಗಿದ್ದ ಗುರಪ್ಪನಾಯ್ಡುನನ್ನು ಈಗ ಕಾಂಗ್ರೆಸ್ನಿಂದ 6 ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ. ಕಾಂಗ್ರೆಸ್ ಶಿಸ್ತುಪಾಲನಾ ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಅವರು ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ಗುರಪ್ಪ ನಾಯ್ಡುನನ್ನು ಉಚ್ಛಾಟನೆ ಮಾಡಿ ಆದೇಶ ನೀಡಿದ್ದಾರೆ.
ತ್ಯಾಗರಾಜನಗರದ ಖಾಸಗಿ ಶಾಲೆಯೊಂದರ ಬಿಜಿಎಸ್ ಬ್ಲೂಮ್ ಫೀಲ್ಡ್ ಚೇರ್ಮನ್ ಆಗಿರುವ ಗುರಪ್ಪ ನಾಯ್ಡು, ತಮ್ಮ ಶಾಲೆಯ ಶಿಕ್ಷಕಿಗೆ ಲೈಂಗಿಕ ಕಿರುಕುಳ ನೀಡಿದ್ದರು. ಆ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುವ ಕೆಲ ಶಿಕ್ಷಕಿಯರಿಗೆ ಹಾಗೂ ಕೆಲ ಸಿಬ್ಬಂದಿಗಳಿಗೆ ಗುರಪ್ಪ ನಾಯ್ಡು ಕಿರುಕುಳ ನೀಡಿದ್ದಾರೆ ಎಂಬ ಆರೋಪವಿದೆ. ಛೇಂಬರ್ಗೆ ಕರೆದು ತನ್ನ ಜೊತೆ ಸಹಕರಿಸುವಂತೆ ಕೈ ಹಿಡಿದು ಎಳೆದಾಡಿ ಕೆಟ್ಟ ಪದಗಳಿಂದ ನಿಂದಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ : ಜಗ್ಗಲ್ಲ.. ಬಗ್ಗಲ್ಲ ಎಂದವರೆಲ್ಲಾ ಬಿಜೆಪಿಯಲ್ಲಿ ಏನಾದ್ರು – ಯತ್ನಾಳ್ ಟೀಂ ವಿರುದ್ಧ ಬಿ.ಸಿ ಪಾಟೀಲ್ ಕಿಡಿ..!