ಕಲರ್ಸ್ ಕನ್ನಡದಲ್ಲಿ ಡಿಫರೆಂಟ್ ಡಿಫರೆಂಟ್ ಧಾರಾವಾಹಿಗಳು ಈಗಾಗಲೇ ಸಾಕಷ್ಟು ರಂಜಿಸಿ ಪ್ರೇಕ್ಷಕರ ಹೃದಯ ಗೆದ್ದಿದೆ. ಸಾಲು ಸಾಲು ಧಾರಾವಾಹಿಗಳು ಕಿರುತೆರೆ ರಸಿಕರನ್ನ ಮೋಡಿ ಮಾಡಿದೆ.
ಸಂಜೆ 6 ಗಂಟೆಯಿಂದ ರಾತ್ರಿ 11 ಗಂಟೆಯವರೆಗೂ ಒಂದಕ್ಕಿಂತ ಒಂದು ಕಥೆಗಳು ನೋಡಗರನ್ನ ಸೆಳೆಯುತ್ತದೆ.. ಸದ್ಯ ಧಾರಾವಾಹಿಗಳು ಜೊತೆಗೆ ಬಿಗ್‌ಬಾಸ್ ಸೀಸನ್ 10 ಹಲ್ಚಲ್ ಎಬ್ಬಿಸಿ, ಮುಗಿಯೋ ಹಂತದಲ್ಲಿದೆ. ‘ಬಿಗ್ ಬಾಸ್ ಕನ್ನಡ 10’ ಫಿನಾಲೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಿರುವಾಗಲೇ ಶ್ರೀಗೌರಿ ಅನ್ನೋ ಹೊಸ ಧಾರಾವಾಹಿ ಪ್ರೋಮೋದಿಂದಲೇ ಸಿಕ್ಕಾಪಟ್ಟೆ ಕ್ರೇಜ್ ಸೃಷ್ಟಿಸುತ್ತಿದೆ..
ಹೌದು ಕಲರ್ಸ್ ಕನ್ನಡ ವಾಹಿನಿಯಲ್ಲಿ ‘ಶ್ರೀ ಗೌರಿ’ ಎನ್ನುವ ಹೊಸ ಧಾರಾವಾಹಿ ಶುರುವಾಗಲಿದೆ. ಜನವರಿ 29ರಿಂದ ರಾತ್ರಿ 8.30ಕ್ಕೆ ಈ ಸೀರಿಯಲ್ ಪ್ರಸಾರ ಆಗಲಿದೆ. ಅಪ್ಪು-ಗೌರಿ ಕಥೆ ಈ ಧಾರಾವಾಹಿಯಲ್ಲಿದೆ. ಯಶೋದೆ ಧಾರಾವಾಹಿ ಖ್ಯಾತಿಯ ಕಾರ್ತಿಕ್ ಅತ್ತಾವರ್, ಅಮೂಲ್ಯಾ ಗೌಡ, ಸುನೀಲ್ ಪುರಾಣಿಕ್ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ಅಂದ್ಹಾಗೆ ಕಮಲಿ ನಂತರ ತೆಲುಗು ಕಿರುತೆರೆಯಲ್ಲಿ ಅಮೂಲ್ಯ ಬ್ಯುಸಿಯಾಗಿದ್ದರು, ನಂತರ ಕನ್ನಡ ಬಿಗ್ ಬಾಸ್ನಲ್ಲಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಅವರನ್ನು ಮತ್ತೆ ಕನ್ನಡ ಕಿರುತೆರೆಯಲ್ಲಿ ನೋಡಲು ಜನರು ಆತುರದಿಂದ ಕಾಯುತ್ತಿದ್ದರು. ಇದೀಗ ಆ ಸಮಯ ಬಂದಿದೆ. ‘ಶ್ರೀ ಗೌರಿ’ ಆಗಿ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ..
ಈ ಶ್ರೀ ಗೌರಿ ಸೀರಿಯಲ್ ಅಪ್ಪ-ಮಗಳ ಬಾಂಧವ್ಯದ ಕಥೆಯಾಗಿದ್ದು, ಅಮೂಲ್ಯ ಗೌರಿಯಾಗಿ ನಟಿಸಿದರೆ, ಆಕೆಯ ತಂದೆಯಾಗಿ ಸುನೀಲ್ ಪುರಾಣಿಕ್ ನಟಿಸಿದ್ದಾರೆ. ಇರುವೆಗೂ ಕಷ್ಟ ಆಗಬಾರದು ಅನ್ನೋ ಮುದ್ದು ಹುಡುಗಿ ಗೌರಿ.
ಯಾವ ರೀತಿ ಲೆಕ್ಕ ಹಾಕಿದ್ರೂ ಇವಳೇ ಸರಿ ಅನ್ನೋ ಅಪ್ಪ. ನಿನ್ನ ನಾಲಿಗೆ ಕೆಂಪಾಗಿದೆ ಅಂದ್ರೆ ಬೇಗನೆ ನಿನ್ನ ಮದ್ವೆ ಆಗುತ್ತೆ ಎಂದು ಮುದ್ದು ಮಾಡೊ ಅಜ್ಜ. ಪ್ರೀತಿಯಿಂದ ಎಲ್ಲಾ ಕೆಲಸ ಮಾಡಿಸಿಕೊಂಡು ಅಪ್ಪನನ್ನು ಪ್ರೀತಿಯಿಂದ ಕಟ್ಟು ಹಾಕೋ, ಅಪ್ಪನ ಉಸಿರು, ಮಗಳು, ಗೌರಿ. ತನಗೆ ಇಷ್ಟ ಆಗೋದನ್ನೆಲ್ಲಾ ಮುಕ್ತ ಮನಸ್ಸಿನಿಂದ ಮಾಡುವ ಹುಡುಗಿ ಗೌರಿ.
ಬೆಳಗ್ಗೆ ಸಂತೋಷವನ್ನೆ ನೀಡುವ ಗೌರಿ, ರಾತ್ರಿ ಕಣ್ಣು ಮುಚ್ಚುವಾಗ ಮಾತ್ರ ಬದಲಾಗುತ್ತಾಳೆ. ಅಪ್ಪ ಮಗಳ ಕಾಲಿಗೆ ಸಂಕೋಲೆ ಹಾಕಿ, ಬೀಗ ಹಾಕಿ ಕಣ್ಣೀರು ಹಾಕುತ್ತಾನೆ. ಹಗಲು ನಗುವ ಮಗಳಿಗೆ ರಾತ್ರಿಯೆಲ್ಲಾ ಗ್ರಹಣ ಎನ್ನುತ್ತಾ… ಕುತೂಹಲಕಾರಿ ಕಥೆಯಾದ್ರೆ.. ಇನ್ನೊಂದು ಕಡೆ ಹೀರೋ ಇಂಟ್ರಡ್ಯೂಸ್ ಸಹ ಮಾಡಿದ್ದಾರೆ.
ಅಪ್ಪು ಪಾತ್ರದಲ್ಲಿ ನಟ ಕಾರ್ತಿಕ್ ಅತ್ತಾವರ್ ನಟಿಸಿದ್ದಾರೆ.. ಅಮ್ಮನ ಮುದ್ದಿನ ಮಗ.. ಕುಟುಂಬದ ಜವಬ್ಧಾರಿ ಹೊತ್ತುಕೊಂಡಿರೋ ಮಗ.. ಕಂಬಳವನ್ನ ಸೊಗಸಾಗಿ ತೋರಿಸಿದ್ದಾರೆ.. ಇದೆಲ್ಲಾವು ಪ್ರೋಮೋ ನೋಡಿದ್ರ ಗೊತ್ತಾಗುತ್ತೆ.. ಆದ್ರೆ ಕಥೆಯಲ್ಲಿ ಯಾವತರ ಟ್ವಿಸ್ಟ್ ಇದೆ. ಅನ್ನೋದನ್ನ ಸೀರಿಯಲ್ ನೋಡಿದ್ರನೇ ಗೊತ್ತಾಗುತ್ತೆ.. ಇನ್ನು ಸೀರಿಯಲ್ ಬೇಗನೆ ಆರಂಭವಾಗಲಿ ಎಂದು ಅಭಿಮಾನಿಗಳು ಕಾಯ್ತಿದ್ದಾರೆ.
ಒಟ್ಟಾರೆಯಾಗಿ ‘ಶ್ರೀ ಗೌರಿ’ ಸೀರಿಯಲ್ ಜನವರಿ 29ರಿಂದ ರಾತ್ರಿ 8.30ಕ್ಕೆ ಪ್ರಸಾರವಾಗುತ್ತೆ.. ಈಗಾಗಲೇ ಭರದಿಂದ ಈ ಸೀರಿಯಲ್ ಶೂಟಿಂಗ್ ನಡೆತ್ತಿದೆ.. ಹಾಗೇ ಪ್ರಚಾರದ ಕೆಲಸ ಸಹ ಭರ್ಜರಿಯಾಗಿ ಆಗ್ತಿದೆ.. ಬಿಗ್‌ಬಾಸ್ ಸೀಸನ್ 10ರಲ್ಲಿ ಶ್ರೀ ಗೌರಿ ಸೀರಿಯಲ್ ಪ್ರಮೋಷನ್ ಮಾಡೋಕೆ ನಟಿ ಅಮೂಲ್ಯ ಗೌಡ ಹಾಗೂ ಕಾರ್ತಿಕ್ ಅತ್ತಾವರ್ ಸಹ ಹೋಗಿದ್ರು.. ಬಿಗ್‌ಬಾಸ್ ಸೀಸನ್ 10 ಮುಗಿದ ನಂತ್ರ ರಾತ್ರಿ 8.30ಕ್ಕೆ ಕಲರ್ಸ್ ಕನ್ನದಲ್ಲಿ ಶ್ರೀ ಗೌರಿ ಮಸ್ತ್ ಎಂಟರ್ಟೈನ್ ಕೊಡಲಿದೆ..
ಇದನ್ನೂ ಓದಿ : ಬಿಗ್‌ಬಾಸ್ ಮನೆಯೊಳಗೆ ಹಾರರ್ ಸರ್ಪೈಸ್..