ಬಾಗಲಕೋಟೆ : ಎರಡು ಬೈಕ್’ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ಬಾಗಲಕೋಟೆಯ ನವನಗರದ ಅಬಕಾರಿ ಇಲಾಖೆಯ ಸಮೀಪ ತಡರಾತ್ರಿ ಜರುಗಿದೆ.
ಅಪಘಾತದಲ್ಲಿ ಸ್ಕೂಟಿಯಲ್ಲಿದ್ದ ಇಬ್ಬರು ಗೆಳತಿಯರು ದುರ್ಮರಣ ಹೊಂದಿದ್ದಾರೆ. ಇನ್ನೊಂದು ಬೈಕ್ನಲ್ಲಿದ್ದ ಇಬ್ಬರು ಯುವಕರ ಪೈಕಿ ಓರ್ವ ಯುವಕ ಸಾವನ್ನಪ್ಪಿದ್ದು, ಮತ್ತೊರ್ವನಿಗೆ ಗಂಭೀರ ಗಾಯಗಳಾಗಿವೆ. ಮೃತರನ್ನ ದಂತ ವೈದ್ಯೆ ಕೃತಿಕಾ ಒಂಟಕುದರಿ(32), ಸ್ನೇಹಿತೆ ಸಾಫ್ಟೆವೇರ್ ಇಂಜಿನಿಯರ್ ರಜನಿ ಒಂಟಕುದರಿ (34), ಹಾಗೂ ನವನಗರದ ನಿವಾಸಿ ಅಭಿಷೇಕ್ ಬಂಡಿವಡ್ಡರ್ ಎಂದು ಗುರುತಿಸಲಾಗಿದೆ.
ಬೈಕ್ನಲ್ಲಿ ಕಾಳಿದಾಸ್ ಸರ್ಕಲ್ನಿಂದ ಯುವಕರು ಬಸ್ ನಿಲ್ದಾಣದ ಕಡೆಗೆ ಹೊರಟಿದ್ದರು. ಬೈಕ್ ವೇಗವಾಗಿ ಇದ್ದಿದ್ದರಿಂದ ನಿಯಂತ್ರಣಕ್ಕೆ ಸಿಗದೆ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ರಜನಿ, ಅಭಿಷೇಕ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಕೃತಿಕಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ. ಸ್ಥಳಕ್ಕೆ ನವನಗರದ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಈ ಕುರಿತು ಸಂಚಾರಿ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ನಾಡಿನೆಲ್ಲೆಡೆ ಇಂದು ಗೌರಿ-ಗಣೇಶ ಹಬ್ಬದ ಸಂಭ್ರಮ : ಹೂ-ಹಣ್ಣು ದುಬಾರಿ, ಮಾರ್ಕೆಟ್ಗಳಲ್ಲಿ ಜನವೋ ಜನ..!